ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಮತ್ತೆ ಭೂಕಂಪ, 4.3 ತೀವ್ರತೆ ದಾಖಲು

Andaman Earthquake: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಇದಕ್ಕೂ ಮುನ್ನ ಜುಲೈ 28 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಕಂಪನ ಸಂಭವಿಸಿತ್ತು.

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಮತ್ತೆ ಭೂಕಂಪ, 4.3 ತೀವ್ರತೆ ದಾಖಲು
ಭೂಕಂಪImage Credit source: Jagaranjosh.com
Follow us
ನಯನಾ ರಾಜೀವ್
|

Updated on: Aug 11, 2023 | 7:35 AM

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಇದಕ್ಕೂ ಮುನ್ನ ಜುಲೈ 28 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಕಂಪನ ಸಂಭವಿಸಿತ್ತು. ಶುಕ್ರವಾರ ಮುಂಜಾನೆ ಭೂಕಂಪನದಿಂದಾಗಿ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭೂಮಿ ಮತ್ತೊಮ್ಮೆ ನಡುಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 112 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು 10 ಕಿ.ಮೀ.ನಷ್ಟಿದೆ.

ಈ ತಿಂಗಳ ಆರಂಭದಲ್ಲಿ ಎರಡು ದಿನಗಳಲ್ಲಿ ಎರಡು ಭೂಕಂಪಗಳು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಂಭವಿಸಿದ್ದವು. ಆಗಸ್ಟ್ 3 ರಂದು ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ಓದಿ: Andaman Earthquake: ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಎರಡು ದಿನಗಳಲ್ಲಿ ಎರಡನೇ ಬಾರಿ ಭೂಕಂಪ, 4.3 ತೀವ್ರತೆ ದಾಖಲು

ಆಗಸ್ಟ್ 2 ರಂದು ರಿಕ್ಟರ್ ಮಾಪಕದಲ್ಲಿ 5.0 ರ ತೀವ್ರತೆಯ ಮತ್ತೊಂದು ಭೂಕಂಪವು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ.

ಇದು 10. ಕಿ.ಮೀ ಆಳದಲ್ಲಿ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದುವು ನಿಕೋಬಾರ್ ದ್ವೀಪಗಳಲ್ಲಿ ಅಕ್ಷಾಂಶ 9.32 ಮತ್ತು ರೇಖಾಂಶ 94.03 ರಲ್ಲಿದೆ. ಎನ್‌ಸಿಎಸ್ ಟ್ವೀಟ್‌ನಲ್ಲಿ ಉಲ್ಲೇಖಿಸಿದಂತೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿತ್ತು.