Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದಲ್ಲಿ ಭಾರಿ ಮಳೆ, ಜೋಶಿಮಠ ಬಳಿ ಕಟ್ಟಡ ಕುಸಿತ, ಮೂವರ ರಕ್ಷಣೆ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಉತ್ತರಾಖಂಡದಲ್ಲಿ ಸತತ ಮಳೆಯಿಂದಾಗಿ ಅವಾಂತರಗಳು ಮುಂದುವರೆದಿವೆ. ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಪೀಡಿತ ಪ್ರದೇಶವಾದ ಜೋಶಿಮಠ ಸಮೀಪದ ಹೆಲಾಂಗ್‌ನಲ್ಲಿ ಕಟ್ಟಡವೊಂದು ಕುಸಿದುಬಿದ್ದಿದೆ. ಇದರಲ್ಲಿ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ, ಕಟ್ಟಡದ ಅವಶೇಷಗಳಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಭಾರಿ ಮಳೆ, ಜೋಶಿಮಠ ಬಳಿ ಕಟ್ಟಡ ಕುಸಿತ, ಮೂವರ ರಕ್ಷಣೆ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಕಟ್ಟಡ ಕುಸಿತ-ಸಾಂದರ್ಭಿಕ ಚಿತ್ರImage Credit source: ABP Live
Follow us
ನಯನಾ ರಾಜೀವ್
|

Updated on: Aug 16, 2023 | 8:04 AM

ಉತ್ತರಾಖಂಡದಲ್ಲಿ ಸತತ ಮಳೆಯಿಂದಾಗಿ ಅವಾಂತರಗಳು ಮುಂದುವರೆದಿವೆ. ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಪೀಡಿತ ಪ್ರದೇಶವಾದ ಜೋಶಿಮಠ ಸಮೀಪದ ಹೆಲಾಂಗ್‌ನಲ್ಲಿ ಕಟ್ಟಡವೊಂದು ಕುಸಿದುಬಿದ್ದಿದೆ. ಇದರಲ್ಲಿ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ, ಕಟ್ಟಡದ ಅವಶೇಷಗಳಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತ ಗತಿಯಲ್ಲಿ ನಡೆಸಲಾಗುತ್ತಿದೆ.

ಮಂಗಳವಾರ ತಡರಾತ್ರಿ ಬದರಿನಾಥ ಹೆದ್ದಾರಿಯ ಪಿಪಲ್ಕೋಟಿ ಮತ್ತು ಜೋಶಿಮಠ ನಡುವಿನ ಹೆಲಾಂಗ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಅಲಕನಂದಾ ನದಿ ದಡದಲ್ಲಿರುವ ಕ್ರಷರ್ ಘಟಕದ ಬಳಿ ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದ್ದು, ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕಟ್ಟಡ ಶಿಥಿಲಾವಸ್ಥೆ ತಲುಪಿದೆ.

ಕ್ರಷರ್ ಘಟಕದಲ್ಲಿ ಕೆಲಸ ಮಾಡುವವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಈ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ ಸಾಕಷ್ಟು ಮಂದಿ ಇದ್ದರು ಎನ್ನಲಾಗಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ಓದಿ: ಹಿಮಾಚಲ ಪ್ರದೇಶ ಮಳೆ ಅನಾಹುತಕ್ಕೆ 55 ಸಾವು; ಉತ್ತರಾಖಂಡದಲ್ಲಿ ಮೂವರು ದುರ್ಮರಣ

ಕಟ್ಟಡದ ಅವಶೇಷಗಳ ಅಡಿಯಲ್ಲಿ ನಾಲ್ವರು ಸಿಲುಕಿರುವ ಶಂಕೆ ಇದೆ ಎಂದು ವರದಿಯಾಗಿದೆ ಆದರೆ ಅಧಿಕಾರಿಗಳು ಇದನ್ನು ಇನ್ನೂ ಖಚಿತಪಡಿಸಿಲ್ಲ. ಈ ವರ್ಷದ ಆರಂಭದಲ್ಲಿ ಜೋಶಿಮಠದಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ಹಾನಿಗೊಳಗಾಗಿದ್ದವು ಮತ್ತು ಮಳೆಗಾಲದ ಆರಂಭದಲ್ಲಿ ಮನೆಗಳಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್