Assam Earthquake: ಅಸ್ಸಾಂನಲ್ಲಿ ಲಘು ಭೂಕಂಪ, 4.4 ತೀವ್ರತೆ ದಾಖಲು

ಅಸ್ಸಾಂನ ಸೀನಿತ್​ಪುರದಲ್ಲಿ ಸೋಮವಾರ ಬೆಳಗ್ಗೆ ಲಘು ಭೂಕಂಪ(Earthquake) ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಗುವಾಹಟಿಯ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

Assam Earthquake: ಅಸ್ಸಾಂನಲ್ಲಿ ಲಘು ಭೂಕಂಪ, 4.4 ತೀವ್ರತೆ ದಾಖಲು
ಭೂಕಂಪ
Image Credit source: India TV

Updated on: May 29, 2023 | 9:34 AM

ಅಸ್ಸಾಂನ ಸೀನಿತ್​ಪುರದಲ್ಲಿ ಸೋಮವಾರ ಬೆಳಗ್ಗೆ ಲಘು ಭೂಕಂಪ(Earthquake) ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಗುವಾಹಟಿಯ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಇಂದು ಬೆಳಗ್ಗೆ 8.03 ಗಂಟೆಗೆ 15 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಬಾಂಗ್ಲಾದೇಶ, ಭೂತಾನ್, ಚೀನಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 2.58ರ ಸುಮಾರಿಗೆ 10 ಕಿ.ಮೀ ಆಳದ ಭೂಕಂಪ ಸಂಭವಿಸಿದೆ.

ಗುವಾಹಟಿ ನಗರದ ವಿವಿಧ ಭಾಗಗಳಲ್ಲಿ ಸಂಜೆಯ ವೇಳೆಗೆ ಕಂಪನದ ಅನುಭವವಾಗಿದೆ. ಇದಕ್ಕೂ ಮೊದಲು, ಭಾನುವಾರ ಸಂಜೆ 6.26 ಕ್ಕೆ ಅಫ್ಘಾನಿಸ್ತಾನದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಈ ಹಿಂದೆ ದೇಶದಲ್ಲಿ ಲಘು ಭೂಕಂಪ ಸಂಭವಿಸಿದ ನಂತರ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಹಿಂದಿನ ಭೂಕಂಪದ ತೀವ್ರತೆ 5.2 ಆಗಿತ್ತು. ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿಯೂ ಲಘು ಕಂಪನದ ಅನುಭವವಾಗಿದೆ.
ಕೆಲವು ಸೆಕೆಂಡ್‌ಗಳ ಕಾಲ ಈ ಕಂಪನವು ಬೆಳಿಗ್ಗೆ 11.20 ರ ಸುಮಾರಿಗೆ ಸಂಭವಿಸಿದೆ ಎಂದು ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ, 4.9 ತೀವ್ರತೆ ದಾಖಲು

ಮಾರ್ಚ್ 21ರ ರಾತ್ರಿ, ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ ನಂತರ, ಪಂಜಾಬ್ ಮತ್ತು ಹರಿಯಾಣದ ಹೆಚ್ಚಿನ ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿದವು, ಇದರಿಂದಾಗಿ ಜನರು ಕಟ್ಟಡಗಳಿಂದ ಹೊರಬಂದಿದ್ದರು.