ಸಂಸದನಿಗೆ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ಬ್ರೇಕ್: ಲಕ್ಷದ್ವೀಪ ಲೋಕಸಭೆ ಉಪಚುನಾವಣೆ ತಡೆಹಿಡಿದ ಚುನಾವಣೆ ಆಯೋಗ

| Updated By: ರಮೇಶ್ ಬಿ. ಜವಳಗೇರಾ

Updated on: Jan 30, 2023 | 11:06 PM

ಲಕ್ಷದ್ವೀಪ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಧಿಸೂಚನೆಯನ್ನು ಚುನಾವಣೆ ಆಯೋಗ ತಡೆಹಿಡಿದಿದೆ.

ಸಂಸದನಿಗೆ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ಬ್ರೇಕ್: ಲಕ್ಷದ್ವೀಪ ಲೋಕಸಭೆ ಉಪಚುನಾವಣೆ ತಡೆಹಿಡಿದ ಚುನಾವಣೆ ಆಯೋಗ
Follow us on

ನವದೆಹಲಿ: ಚುನಾವಣಾ ಆಯೋಗವು ಮೊನ್ನೇ ಅಷ್ಟೇ ಲಕ್ಷದ್ವೀಪ  ಲೋಕಸಭೆ  (Lakshadweep MP By Election)) ಸೇರಿದಂತೆ 5 ರಾಜ್ಯಗಳ 6 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ದಿನಾಂಕವನ್ನು ಘೋಷಿಸಿತ್ತು. ಆದ್ರೆ, ಇದೀಗ ಲಕ್ಷದ್ವೀಪ ಲೋಕಸಭಾ ಕ್ಷೇತ್ರದ ಉಪ ಚುನಾವಣೆ  ಚುನಾವಣೆ ಆಯೋಗ(Election Commission) ತಡೆಹಿಡಿದಿದೆ. ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಲೋಕಸಭಾ ಸದಸ್ಯ ಮೊಹಮ್ಮದ್ ಫೈಸಲ್ ಅವರಿಗೆ ಕವರಟ್ಟಿ ಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಲಕ್ಷದ್ವೀಪ ಎಂಪಿ ಕ್ಷೇತ್ರದ ಉಪ ಚುನಾವಣೆಯನ್ನು ತಡೆಹಿಡಿದಿದೆ. ಇನ್ನು ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿದ್ದೇವೆ ಎಂದು ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಝಲ್​ಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

ಲಕ್ಷದ್ವೀಪದಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ನಾಯಕ ಮೊಹಮ್ಮದ್ ಫೈಜಲ್ ಮೇಲಿನ ಕ್ರಿಮಿನಲ್ ಕೇಸ್ ಸಾಬೀತಾಗಿತ್ತು. ಕವರಟ್ಟಿ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಇದರಿಂದ ಮೊಹಮ್ಮದ್ ಫೈಜಲ್ ಎಂಪಿ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಇಲ್ಲಿ ಲೋಕಸಭಾ ಸ್ಥಾನಕ್ಕೆ ಫೆಬ್ರವರಿ 27ರಂದು ಉಪ ಚುನಾವಣೆ ಘೋಷಣೆ ಮಾಡಲಾಗಿತ್ತು.

ಇನ್ನು ಮೊಹಮ್ಮದ್ ಫೈಜಲ್ ಕವರಟ್ಟಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಕೇರಳ ಹೈಕೋರ್ಟ್, ಕವರಟ್ಟಿ ನ್ಯಾಯಾಲಯದ ಶಿಕ್ಷೆಗೆ ತಡೆಹಿಡಿದೆ. ಇದರಿಂದ ಇದೀಗ ಚುನಾವಣೆ ಆಯೀಗವು ಸಹ ಮೊಹಮ್ಮದ್ ಫೈಜಲ್ ಅವರ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ತಡೆಹಿಡಿದಿದೆ.

ಪ್ರಕರಣ ಹಿನ್ನೆಲೆ

2014ರಿಂದ ಸಂಸತ್ತಿನಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದ ಮೊಹಮ್ಮದ್ ಫೈಜಲ್‌ಗೆ 2009ರ  ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಮುಹಮ್ಮದ್ ಸಾಲಿಹ್ ಅವರ ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಕವರಟ್ಟಿಯ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತ್ತು. ಕವರಟ್ಟಿಯ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಜನವರಿ 11 ರಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು, ಈ ನಿರ್ಧಾರವನ್ನು ಭಾರತದ ಸಂವಿಧಾನದ 102 (ಎಲ್) (ಇ) ನಿಬಂಧನೆಗಳ ಅಡಿ ಹಾಗೂ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಅಡಿಯಲ್ಲಿ.ತೆಗೆದುಕೊಳ್ಳಲಾಗಿತ್ತು.