Assembly Election 2022: 5 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಇಂದು; ಮಧ್ಯಾಹ್ನ 3.30ಕ್ಕೆ ವೇಳಾಪಟ್ಟಿ ಪ್ರಕಟ

| Updated By: Lakshmi Hegde

Updated on: Jan 08, 2022 | 12:35 PM

ಭಾರತದ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಇಂದು ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು ಗೋವಾ, ಮಣಿಪುರ, ಉತ್ತರಾಖಂಡ್​, ಉತ್ತರಪ್ರದೇಶ, ಪಂಜಾಬ್​ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಿಸಲಿದ್ದಾರೆ ಎಂದು ಎಎನ್​ಐ ತಿಳಿಸಿದೆ.

Assembly Election 2022: 5 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಇಂದು; ಮಧ್ಯಾಹ್ನ 3.30ಕ್ಕೆ ವೇಳಾಪಟ್ಟಿ ಪ್ರಕಟ
ಚುನಾವಣಾ ಆಯೋಗ
Follow us on

ಭಾರತದ ಚುನಾವಣಾ ಆಯೋಗ (ECI-Election Commission Of India)ದ ಉನ್ನತ ಅಧಿಕಾರಿಗಳು ಇಂದು ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, 5 ರಾಜ್ಯಗಳಾದ ಗೋವಾ, ಪಂಜಾಬ್​, ಮಣಿಪುರ್​, ಉತ್ತರಾಖಂಡ್​ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections 2022) ದಿನಾಂಕವನ್ನು ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್​​ನಲ್ಲಿ 2022ರ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ಚುನಾವಣಾ ಆಯೋಗ 5 ರಾಜ್ಯಗಳ ಚುನಾವಣೆ ದಿನಾಂಕವನ್ನು ಮಾತ್ರ ಘೋಷಿಸಲಿದೆ ಎಂದು ಎಎನ್​ಐ ತಿಳಿಸಿದೆ. 

ದೇಶದಲ್ಲಿ ಕೊವಿಡ್​ 19 ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅದರ ಮಧ್ಯೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಹೀಗಾಗಿ ಯಾವ್ಯಾವ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಈ ಸಭೆಯಲ್ಲಿ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಮತ್ತು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್​ ಭಾರ್ಗವಾ ಕೂಡ ಪಾಲ್ಗೊಂಡಿದ್ದರು. ಡಿ.30ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ, ನಿಗದಿತ ಸಮಯದಲ್ಲೇ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳೂ ಒಲವು ತೋರಿಸಿವೆ. ಹೀಗಾಗಿ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್​​ಗಳಲ್ಲಿ ಕೊರೊನಾ ಲಸಿಕೆ ನೀಡಿಕೆ ವೇಗ ಹೆಚ್ಚಿಸುವಂತೆ ನಾವು ಹೇಳಿದ್ದೇವೆ. ಚುನಾವಣೆಯ ಹೊತ್ತಿಗೆ ಮೊದಲ ಡೋಸ್​ ನೀಡಕೆಯಾದರೂ ಶೇ.100ರಷ್ಟು ಮುಕ್ತಾಯಗೊಂಡಿರಬೇಕು ಎಂಬುದು ನಮ್ಮ ಬೇಡಿಕೆ ಎಂದು ತಿಳಿಸಿದ್ದರು.

ಇದೀಗ ನಡೆಯಲಿರುವ ಐದೂ ರಾಜ್ಯಗಳ ಚುನಾವಣೆಗಳು ತುಂಬ ನಿರ್ಣಾಯಕವೆನಿಸಿದೆ. ಅದರಲ್ಲೂ ಉತ್ತರಪ್ರದೇಶ ಮತ್ತು ಪಂಜಾಬ್​ ತುಂಬ ಕುತೂಹಲ ಮೂಡಿಸಿರುವ ರಾಜ್ಯಗಳು. ಈ ಐದು ರಾಜ್ಯಗಳಲ್ಲಿ ಪಂಜಾಬ್ ಹೊರತು ಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಸದ್ಯ ಬಿಜೆಪಿ ಸರ್ಕಾರವೇ ಇದೆ. ಹೀಗಾಗಿ ಬಿಜೆಪಿಗೆ ಆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಜತೆ, ಪಂಜಾಬ್​​ನಲ್ಲಿ ಸರ್ಕಾರ ರಚಿಸುವ ಒತ್ತಡವಿದೆ. ಕಾಂಗ್ರೆಸ್​ ಕೂಡ ತನ್ನ ಪ್ರಯತ್ನ ಮಾಡುತ್ತಿದೆ. ಅದರಲ್ಲೂ 403 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ರಾಜ್ಯ ಉತ್ತರ ಪ್ರದೇಶ ಇನ್ನಷ್ಟು ಕೇಂದ್ರ ಬಿಂದುವಾಗಿದೆ. ಪ್ರಧಾನಿ ಮೋದಿ ಈ ಬಾರಿ ಇಲ್ಲಿ ಭರ್ಜರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಬರೀ, ಬಿಜೆಪಿ-ಕಾಂಗ್ರೆಸ್​ಗಳಲ್ಲದೆ, ಆಪ್, ಸಮಾಜವಾದಿ ಪಕ್ಷ, ಬಹುಜನಸಮಾಜ ಪಾರ್ಟಿಗಳೂ ಕೂಡ ಉತ್ತರಪ್ರದೇಶ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿವೆ.

ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ; ಫಿರೋಜ್​ಪುರ ಎಸ್​ಎಸ್​ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್​ಎಸ್​ಪಿ