ಪ್ರಧಾನಿ ಭದ್ರತೆ ಲೋಪ; ಫಿರೋಜ್ಪುರ ಎಸ್ಎಸ್ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್ಎಸ್ಪಿ
ಪ್ರಧಾನಿ ಮೋದಿ ಪ್ರಯಾಣದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ರೈತರು, ತಮಗೆ ರಸ್ತೆ ತೆರವುಗೊಳಿಸುವಂತೆ ಹೇಳಿದ್ದು ಫಿರೋಜ್ಪುರ ಎಸ್ಎಸ್ಪಿ ಎಂದಿದ್ದರು.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ನ ಫಿರೋಜ್ಪುರಕ್ಕೆ ಭೇಟಿ ನೀಡಲು ಅಲ್ಲಿಗೆ ತೆರಳಿದ್ದಾಗ ಭದ್ರತಾ ಲೋಪವುಂಟಾಗಿ(PM Security Breach In Punjab) ವಾಪಸ್ ಆಗಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ರಾಷ್ಟ್ರದಾದ್ಯಂತ ಪಂಜಾಬ್ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟಾದರೂ ಪಂಜಾಬ್ ಸರ್ಕಾರ (Punjab Government), ತಾವು ಪ್ರಧಾನಿ ಭದ್ರತೆಯಲ್ಲಿ ಯಾವುದೇ ಲೋಪ ಮಾಡಿಲ್ಲ ಎಂದೇ ಸಮರ್ಥನೆ ಮಾಡಿಕೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ಪ್ರಧಾನಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ಪಂಜಾಬ್ನ ಭಟಿಂಡಾ ಹಿರಿಯ ಪೊಲೀಸ್ ಅಧೀಕ್ಷಕ (SSP) ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಫಿರೋಜ್ಪುರ ಎಸ್ಎಸ್ಪಿಯನ್ನು ದೂಷಿಸಿದ್ದಾರೆ. ಅಷ್ಟೂ ಭದ್ರತೆ ಲೋಪಕ್ಕೆ ಫಿರೋಜ್ಪುರ ಎಸ್ಎಸ್ಪಿಯೇ ಕಾರಣ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭದ್ರತೆಯಲ್ಲಾದ ಲೋಪವನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ವರದಿ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದ್ದಲ್ಲದೆ, ಶುಕ್ರವಾರ ಭಟಿಂಡಾ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಮಲುಜಾಗೆ ಶೋಕಾಸ್ ನೋಟಿಸ್ ನೀಡಿತ್ತು. 24ಗಂಟೆಯಲ್ಲಿ ಉತ್ತರಿಸುವಂತೆ ಆದೇಶ ನೀಡಿತ್ತು. ಅದರಂತೆ ಇಂದು ಅವರು ವರದಿ ಸಲ್ಲಿಸಿದ್ದು, ತನ್ನದೇನೂ ತಪ್ಪಿಲ್ಲ, ಎಲ್ಲದಕ್ಕೂ ಕಾರಣ ಫಿರೋಜ್ಪುರ ಎಸ್ಎಸ್ಪಿ ಎಂದು ಆರೋಪಿಸಿದ್ದಾರೆ. ನನ್ನ ಅಧಿಕಾರ ವ್ಯಾಪ್ತಿ ಇರುವಷ್ಟು ದೂರದ ಪ್ರದೇಶದವರೆಗೂ ಪ್ರಧಾನಿ ಮೋದಿಯವರು ಸುರಕ್ಷಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಮಾಡಿದ್ದೆ. ಆದರೆ ಅದಕ್ಕಿಂತ ಮುಂದೆ ಫಿರೋಜ್ಪುರ ಎಸ್ಎಸ್ಪಿ ಹರ್ಮನ್ ಹನ್ಸ್ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಅವರು ಮಾಡಲಿಲ್ಲ ಎಂದು ದೂಷಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಪ್ರಯಾಣದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ರೈತರು, ತಮಗೆ ರಸ್ತೆ ತೆರವುಗೊಳಿಸುವಂತೆ ಹೇಳಿದ್ದು ಫಿರೋಜ್ಪುರ ಎಸ್ಎಸ್ಪಿ. ಈ ಮಾರ್ಗದಲ್ಲಿ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಹೀಗಾಗಿ ಮಾರ್ಗ ತೆರವುಗೊಳಿಸಿ ಎಂದು ಅವರು ಹೇಳಿದರು. ಆದರೆ ನಾವು ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಭಾವಿಸಿ ಅಲ್ಲಿಂದ ಕದಲಲಿಲ್ಲ ಎಂದು ಹೇಳಿದ್ದರು. ಪ್ರಸ್ತುತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಭದ್ರತೆಯಲ್ಲಿ ಲೋಪ ಮಾಡಿದ್ದನ್ನು ಅದೇ ಪಕ್ಷದ ಕೆಲವು ನಾಯಕರೂ ವಿರೋಧಿಸುತ್ತಿದ್ದಾರೆ.
ಇದನ್ನೂ ಓದಿ: ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ರಾವ್ ಬಂಧನ