ಗುಜರಾತ್ ಮೂಲದ ಕಂಪನಿ ಮತ್ತು ಅದರ ಕಾರ್ಯವಾಹಕ ಅಧಿಕಾರಿಗಳ ಸುಮಾರು 26.25 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED-Enforcement Directorate) ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕ್ಗೆ ವಂಚನೆ ಮಾಡಿದ ಪ್ರಕರಣದಲ್ಲಿ ಇ.ಡಿ. ಆಸ್ತಿ ಜಪ್ತಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ಮುಟ್ಟುಗೋಲು ಹಾಕಲಾದ ಆಸ್ತಿಯಲ್ಲಿ, ಭೂಮಿ, ವಸತಿ ಮತ್ತು ವಾಣಿಜ್ಯ ಉಪಯೋಗಿ ಆಸ್ತಿಗಳಿವೆ. ಅಂದಹಾಗೇ, ಇದೀಗ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಂಪನಿ ಗುಜರಾತ್ನ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಅದರ ಪೂರ್ವದ ನಿರ್ದೇಶಕರು, ಪ್ರವರ್ತಕರು ಮತ್ತವರ ಕುಟುಂಬದ ಸದಸ್ಯರು.
2018ರಲ್ಲಿ ಈ ಸಂಸ್ಥೆ ಮತ್ತು ಅದರ ಸಂಬಂಧಿತ ಶಾಖೆಗಳು, ಘಟಕಗಳಿಗೆ ಸೇರಿದ 1122.72 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು. ಗುಜರಾತ್ ಮೂಲದ ಈ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಕೂಡ ಈಗಾಗಲೇ ಹಣ ಅಕ್ರಮ ವರ್ಗಾವಣೆ ಆರೋಪದಡಿ ಕೇಸ್ ದಾಖಲು ಮಾಡಿದೆ. ವಂಚನೆ, ಕ್ರಮಿನಲ್ ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆ ಪ್ರಕರಣಗಳನ್ನು ಕಂಪನಿ ಮತ್ತು ಅದರ ಆಯ್ದ ಸಿಬ್ಬಂದಿ ವಿರುದ್ಧ ದಾಖಲು ಮಾಡಲಾಗಿದೆ. ಈ ಡೈಮಂಡ್ ಪವರ್, ಒಟ್ಟಾರೆ 19 ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲಗಳು, ಬಾಹ್ಯ ವಾಣಿಜ್ಯ ಸಾಲಗಳು ಮತ್ತು ಪರಿವರ್ತಿಸಲು ಸಾಧ್ಯವಾಗದ ಸಾಲಗಳನ್ನು ಪಡೆದುಕೊಂಡಿದೆ. ಹಾಗೇ, ಒಟ್ಟು 19 ಬ್ಯಾಂಕ್ಗಳಿಗೆ 2,654.40 ಕೋಟಿ ರೂಪಾಯಿ ವಂಚಿಸಿದೆ ಎಂದು ಹೇಳಿರುವ ಇ.ಡಿ., ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಕೋರ್ಟ್ವೊಂದರಲ್ಲಿ ಚಾರ್ಜ್ಶೀಟ್ ಕೂಡ ಸಲ್ಲಿಸಿದೆ.
ಇದನ್ನೂ ಓದಿ: Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?