ತಿರುವನಂತಪುರಂ: ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಸತತ 26 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ನಟನ ನಿವಾಸದಲ್ಲಿ ಬೆಂಗಳೂರಿನಿಂದ ಬಂದ ED ಅಧಿಕಾರಿಗಳ ತಂಡ ಶೋಧ ನಡೆಸುವ ವೇಳೆ ಇಂದು ಬೆಳಗ್ಗೆ ಹೈ ಡ್ರಾಮಾ ನಡೆದುಹೋಯ್ತು.
ಶೋಧದ ಬಳಿಕ ನಟನ ಕುಟುಂಬದವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರ ಬಳಿ ದೂರ ಸಹ ದಾಖಲಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ED ತಂಡವು ನಟನ ಮನೆ ಸೇರಿದಂತೆ ನಗರದ ಹಲವೆಡೆ ಶೋಧ ನಡೆಸಿದರು.
Published On - 6:50 pm, Thu, 5 November 20