ನಿರುದ್ಯೋಗ ಸಮಸ್ಯೆಗೆ ಮೋದಿ ಟಾನಿಕ್! ವಿಶ್ವ ಹೂಡಿಕೆದಾರರ ದುಂಡುಮೇಜಿನ ಸಭೆ ಇಂದಿನಿಂದ
ದೆಹಲಿ: ನಮ್ಮ ದೇಶದಲ್ಲಿ ಕೊರೊನಾ ವೈರಸ್ ಹಾಗೂ ಲಾಕ್ಡೌನ್ನಿಂದಾಗಿ ಜನರು ಉದ್ಯೋಗ ಕಳೆದುಕೊಂಡು ಕೋಟ್ಯಂತರ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸ್ಪಲ್ಪಮಟ್ಟಿಗೆ ನಿವಾರಿಸಲು ಪ್ರಧಾನಿ ಮೋದಿ ಪ್ಲ್ಯಾನ್ ಮಾಡಿದ್ದಾರೆ. ಆ ಪ್ಲ್ಯಾನ್ ಸಕ್ಸಸ್ ಆದ್ರೆ ಕೋಟ್ಯಂತರ ಜನಕ್ಕೆ ಉದ್ಯೋಗವಕಾಶ ದೊರೆಯಲಿದೆ. ಬಂಡವಾಳ ಹರಿದು ಬಂದ್ರೆ ಉದ್ಯೋಗಗಳ ಮಹಾಪೂರ ಕೊರೊನಾ ವೈರಸ್‌ನಿಂದಾಗಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಹೀಗಾಗಿ ಇಂದಿನಿಂದ 2 ವಾರಗಳ ಕಾಲ […]
ದೆಹಲಿ: ನಮ್ಮ ದೇಶದಲ್ಲಿ ಕೊರೊನಾ ವೈರಸ್ ಹಾಗೂ ಲಾಕ್ಡೌನ್ನಿಂದಾಗಿ ಜನರು ಉದ್ಯೋಗ ಕಳೆದುಕೊಂಡು ಕೋಟ್ಯಂತರ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸ್ಪಲ್ಪಮಟ್ಟಿಗೆ ನಿವಾರಿಸಲು ಪ್ರಧಾನಿ ಮೋದಿ ಪ್ಲ್ಯಾನ್ ಮಾಡಿದ್ದಾರೆ. ಆ ಪ್ಲ್ಯಾನ್ ಸಕ್ಸಸ್ ಆದ್ರೆ ಕೋಟ್ಯಂತರ ಜನಕ್ಕೆ ಉದ್ಯೋಗವಕಾಶ ದೊರೆಯಲಿದೆ.
ಬಂಡವಾಳ ಹರಿದು ಬಂದ್ರೆ ಉದ್ಯೋಗಗಳ ಮಹಾಪೂರ ಕೊರೊನಾ ವೈರಸ್‌ನಿಂದಾಗಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಹೀಗಾಗಿ ಇಂದಿನಿಂದ 2 ವಾರಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆದಾರರ ಜೊತೆಗೆ ದುಂಡುಮೇಜಿನ ಸಭೆ ನಡೆಸಲು ನಿರ್ಧರಿಸಿದ್ದಾರೆ. ವಿಶ್ವದ ಪ್ರಮುಖ 20 ಮಂದಿ ಹೂಡಿಕೆದಾರರ ಜೊತೆಗೆ ಮೋದಿ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯ ವೇಳೆ ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ತೆರೆದಿಡಲಿದ್ದಾರೆ.
ಮೋದಿ ಮೀಟಿಂಗ್ ಉದ್ದೇಶವೇನು? ಜಪಾನ್, ಆಸ್ಟ್ರೇಲಿಯಾ, ಯೂರೋಪ್‌ನ ಪ್ರಮುಖ ಬಂಡವಾಳ ಹೂಡಿಕೆದಾರರಿಗೆ ಮೋದಿ ಆಹ್ವಾನ ನೀಡಲಿದ್ದಾರೆ. ಈ 20 ಬಂಡವಾಳ ಹೂಡಿಕೆದಾರರ ಬಳಿ ಒಟ್ಟು 450 ಲಕ್ಷ ಕೋಟಿ ರೂಪಾಯಿ ಬಂಡವಾಳ ಇದೆ. ಈ ಬಂಡವಾಳದಾರರನ್ನು ಭಾರತದಲ್ಲಿ ದೀರ್ಘ ಅವಧಿಗೆ ಹೂಡಿಕೆ ಮಾಡಲು ಮೋದಿ ಆಹ್ವಾನಿಸಲಿದ್ದಾರೆ.
ಆಸ್ಟ್ರೇಲಿಯಾ ಸೂಪರ್ ಅಂಡ್ ಪ್ಯೂಚರ್ ಫಂಡ್, ಜಪಾನ್ ಪೋಸ್ಟ್ ಬ್ಯಾಂಕ್, ಒಂಟಾರಿಯೋ ಪೆನ್ಷನ್ ಸೇರಿದಂತೆ ಅನೇಕ ಕಂಪನಿಗಳ ಸಿಇಒಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬಳಿಕ ಒಬ್ಬೊಬ್ಬರೊಂದಿಗೂ ಪ್ರತ್ಯೇಕವಾಗಿಯೂ ಮೋದಿ ಚರ್ಚೆ ನಡೆಸಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಎಲ್ಲ ಸೌಲಭ್ಯ ಒದಗಿಸಿಕೊಡಲಿದೆ ಎಂದು ಮೋದಿ ಮನವರಿಕೆ ಮಾಡಿಕೊಡಲಿದ್ದಾರೆ.
ಹೀಗೆ ಪ್ರಧಾನಿ ಮೋದಿ ಜಾಗತಿಕ ಬಂಡವಾಳ ಹೂಡಿಕೆದಾರರ ಜೊತೆಗೆ ಮುಂದಿನ 2 ವಾರಗಳ ಕಾಲ ದುಂಡುಮೇಜಿನ ಸಭೆ ನಡೆಸಲಿದ್ದಾರೆ. ಹೂಡಿಕೆದಾರರೊಂದಿಗಿನ ಮೋದಿ ಮಾತುಕತೆಯು ಯಶಸ್ವಿಯಾದರೇ, ಭಾರತಕ್ಕೆ ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬರಬಹುದು. ಇದರಿಂದ ಭಾರತದಲ್ಲೇ ಕೋಟಿಗಟ್ಟಲೇ ಉದ್ಯೋಗಗಳು ಸೃಷ್ಟಿಯಾಗುತ್ತವೆ.
ಭಾರತದಲ್ಲಿ ಆಟೋಮೊಬೈಲ್, ಸ್ಮಾರ್ಟ್ ಪೋನ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಸೋಲಾರ್ ವಿದ್ಯುತ್ ಉತ್ಪಾದನೆ, ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ಮೋದಿ ಆಹ್ವಾನ ನೀಡಲಿದ್ದಾರೆ. ಕೇವಲ ವಿದೇಶಿ ಬಂಡವಾಳ ಹೂಡಿಕೆದಾರರ ಜೊತೆ ಮಾತ್ರವಲ್ಲದೇ, ಭಾರತದ ಖ್ಯಾತ ಉದ್ಯಮಿಗಳ ಜೊತೆಗೂ ಮೋದಿ ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಒಟ್ಟಿನಲ್ಲಿ ಲಕ್ಷ ಕೋಟಿ ರೂಪಾಯಿ ವಿದೇಶಿ ಬಂಡವಾಳವು ಭಾರತಕ್ಕೆ ಹರಿದು ಬಂದರೆ, ಕೋಟಿಗಟ್ಟಲೇ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಆರ್ಥಿಕತೆಯ ಚೇತರಿಕೆಯೂ ಆಗುತ್ತೆ. ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ, ಗುರಿ ಸಾಧಿಸುವತ್ತ ಭಾರತ ಹೆಜ್ಜೆ ಹಾಕಬಹುದು.
Published On - 11:17 am, Thu, 5 November 20