ಇನ್​ಸ್ಟಂಟ್​ ಲೋನ್​ ಆ್ಯಪ್​ಗಳ ವಿರುದ್ಧ ಕೊನೆಗೂ ತನಿಖೆಗೆ ಇಳಿದ ಜಾರಿ ನಿರ್ದೇಶನಾಲಯ

| Updated By: ಸಾಧು ಶ್ರೀನಾಥ್​

Updated on: Jan 04, 2021 | 2:27 PM

ಇನ್​ಸ್ಟಂಟ್​ ಸಾಲ ನೀಡುತ್ತಿರುವ ಆ್ಯಪ್​ಗಳಿಗೆ ಸಂಬಂಧಿಸಿ ಹೈದರಾಬಾದ್​, ಗುರುಗ್ರಾಮ, ಬೆಂಗಳೂರು ಸೇರಿದಂತೆ ಹಲವೆಡೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದಿದ್ದ ಚೀನಾ ಮೂಲದ ಕೆಲವರನ್ನು ಬಂಧಿಸಲಾಗಿದೆ.

ಇನ್​ಸ್ಟಂಟ್​ ಲೋನ್​ ಆ್ಯಪ್​ಗಳ ವಿರುದ್ಧ ಕೊನೆಗೂ ತನಿಖೆಗೆ ಇಳಿದ ಜಾರಿ ನಿರ್ದೇಶನಾಲಯ
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್​: ತುರ್ತು ಸಾಲ ನೀಡುವ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕನ್ನ ಹಾಕುವುದಲ್ಲದೇ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದ ಇನ್​ಸ್ಟಂಟ್​ ಲೋನ್​ ಆ್ಯಪ್​ಗಳ ವಿರುದ್ಧ ಜಾರಿ ನಿರ್ದೇಶನಾಲಯ ಕಾನೂನಾತ್ಮಕವಾಗಿ ದೂರು ದಾಖಲಿಸಿಕೊಂಡಿದೆ. ತೆಲಂಗಾಣ ಪೊಲೀಸರು ಮತ್ತು ಸೈಬರ್​ ವಿಭಾಗದವರು ಇದುವರೆಗೆ ಗುರುತಿಸಿದ್ದ ಆ್ಯಪ್​ಗಳ ವಿರುದ್ಧ ಮತ್ತು ಅದನ್ನು ನಿರ್ವಹಿಸುತ್ತಿದ್ದ ಚೀನಾ ಮೂಲದ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡುತ್ತಿದ್ದವರ ಮೇಲೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾನೂನಿನಡಿ ದೂರು ದಾಖಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು, ಕಾನೂನಿನ ಕಣ್ತಪ್ಪಿಸಿ ಅಕ್ರಮವಾಗಿ ಸಾಲ ನೀಡುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಹೈದರಾಬಾದ್​ ಪೊಲೀಸರು ದಾಖಲಿಸಿರುವ 27 ಎಫ್​ಐಆರ್​ಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್​ಸ್ಟಂಟ್​ ಸಾಲ ನೀಡುತ್ತಿರುವ ಆ್ಯಪ್​ಗಳಿಗೆ ಸಂಬಂಧಿಸಿ ಹೈದರಾಬಾದ್​, ಗುರುಗ್ರಾಮ, ಬೆಂಗಳೂರು ಸೇರಿದಂತೆ ಹಲವೆಡೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದಿದ್ದ ಚೀನಾ ಮೂಲದ ಕೆಲವರನ್ನು ಬಂಧಿಸಲಾಗಿದೆ. ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿರುವ 16 ಜನರನ್ನು ವಿಚಾರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸಾಲಕ್ಕಾಗಿ ಲೋನ್ ಆ್ಯಪ್​ಗಳ ಮೊರೆ ಹೋಗುವ ಮುನ್ನ ಎಚ್ಚರ! ಇದರ ಹಿಂದಿದೆ ದೊಡ್ಡ ಜಾಲ

Published On - 2:26 pm, Mon, 4 January 21