ದೆಹಲಿ: ದೇಶಾದ್ಯಂತ PFI ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕ ಸೇರಿದಂತೆ 26 ಕಡೆ ಏಕ ಕಾಲದಲ್ಲಿ ದಾಳಿ ನಡೆದಿದೆ.
ಪಿಎಫ್ಐ ಸಂಘಟನೆಗೆ ದೇಶ ವಿದೇಶದಿಂದ ಹಣ ಬಂದ ಹಿನ್ನೆಲೆಯಲ್ಲಿ ಇಡಿ ಎಕಕಾಲಕ್ಕೆ 26 ಕಡೆ PFI ಮುಖಂಡರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದೆ. ಬೆಂಗಳೂರು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ್ನಲ್ಲಿ ದಾಳಿ ನಡೆದಿದೆ.
ಕೋಟ್ಯಂತರ ರೂ. ಹಣದ ವಹಿವಾಟು ಪಿಎಫ್ಐ ಸಂಘಟನೆಯ ಮೂಲಕ ವರ್ಗಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈಗ ಹಣದ ಮೂಲದ ಕುರಿತು ಇಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. PFI ಮುಖಂಡರ ದಾಖಲಾತಿ ಬ್ಯಾಂಕ್ ಖಾತೆಗಳ ವಿವರವನ್ನು ಪಡೆಯುತ್ತಿದ್ದಾರೆ.
ಸುಧಾ ಗೋಲ್ಡ್ ಪ್ಯಾಲೆಸ್: ಪತಿರಾಯ ಸಿನಿ ನಿರ್ಮಾಪಕ! ACB ತನಿಖೆಯಿಂದ ಹೊರಬಂದ ಸತ್ಯವೇನು?