ದಾಮರದುರ್ಗಂ ಬಳಿ ಅಪಘಾತ; ಲಾರಿ, ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರ ಸಾವು

|

Updated on: Mar 28, 2021 | 10:46 AM

ಲಾರಿ ಮತ್ತು ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರು ಮೃತಪಟ್ಟಿದ್ದು ಅಪಘಾತದಲ್ಲಿ 6 ಜನರಿಗೆ ಗಾಯಗಳಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ದಾಮರದುರ್ಗಂ ಬಳಿ ನಡೆದಿದೆ.

ದಾಮರದುರ್ಗಂ ಬಳಿ ಅಪಘಾತ; ಲಾರಿ, ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರ ಸಾವು
ಪ್ರಾತಿನಿಧಿಕ ಚಿತ್ರ
Follow us on

ನೆಲ್ಲೂರು: ಲಾರಿ ಮತ್ತು ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರು ಮೃತಪಟ್ಟಿದ್ದು ಅಪಘಾತದಲ್ಲಿ 6 ಜನರಿಗೆ ಗಾಯಗಳಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ದಾಮರದುರ್ಗಂ ಬಳಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರ ಪ್ರಕಾರ ತಮಿಳುನಾಡಿದ ಜನರ ಗುಂಪೊಂದು ಶ್ರೀಶೈಲಂ ಮತ್ತು ಸುತ್ತಮುತ್ತಲಿನ ಪವಿತ್ರ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು.

ಆದ್ರೆ ಮುಂಜಾನೆ 2.30ಕ್ಕೆ ದಾಮರದುರ್ಗಂ ಬಳಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ನೆಲ್ಲೂರು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಉತ್ತರ ಕನ್ನಡ, ರಾಮನಗರ, ಬಾಗಲಕೋಟೆದಲ್ಲಿ ಮೂರು ಪ್ರತ್ಯೇಕ ಅಪಘಾತ: 20 ಮಂದಿಗೆ ಗಾಯ

Published On - 10:40 am, Sun, 28 March 21