Oxygen Shortage ಆಕ್ಸಿಜನ್ ಕೊರತೆಯಿಂದ 8 ಸೋಂಕಿತರ ಸಾವು

ಆಸ್ಪತ್ರೆಯಲ್ಲಿ ಉಂಟಾದ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿದ್ದು, ಮೃತರ ಸಂಬಂಧಿಕರಿಂದ ಆಸ್ಪತ್ರೆ, ವೈದ್ಯರ ಮೇಲೆ ದಾಳಿ ನಡೆದಿದ್ದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಸಲು ಜಿಲ್ಲಾಧಿಕಾರಿ ಯಶ್ ಗರ್ಗ್ ಆದೇಶಿಸಿದ್ದಾರೆ.

Oxygen Shortage ಆಕ್ಸಿಜನ್ ಕೊರತೆಯಿಂದ 8 ಸೋಂಕಿತರ ಸಾವು
ಪ್ರಾತಿನಿಧಿಕ ಚಿತ್ರ

Updated on: May 03, 2021 | 8:05 AM

ಗುರುಗ್ರಾಮ: ಹರಿಯಾಣದ ಗುರುಗ್ರಾಮದ ಕೃತಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 8 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಲ್ಲಿ ಇದು ಎರಡನೇ ಬಾರಿಗೆ ಹರಿಯಾಣದಲ್ಲಿ ಇಂತಹದೊಂದು ದುರಂತ ಘಟನೆ ನಡೆದಿದೆ.

ಇನ್ನು ಆಸ್ಪತ್ರೆಯಲ್ಲಿ ಉಂಟಾದ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿದ್ದು, ಮೃತರ ಸಂಬಂಧಿಕರಿಂದ ಆಸ್ಪತ್ರೆ, ವೈದ್ಯರ ಮೇಲೆ ದಾಳಿ ನಡೆದಿದ್ದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಸಲು ಜಿಲ್ಲಾಧಿಕಾರಿ ಯಶ್ ಗರ್ಗ್ ಆದೇಶಿಸಿದ್ದಾರೆ.

ಸೆಕ್ಟರ್ 56ರಲ್ಲಿನ ಕೃತಿ ಆಸ್ಪತ್ರೆಯಲ್ಲಿ 8 ಕೊರೊನಾ ಸೋಂಕಿತರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಿನಕ್ಕೆ 60 ಸಿಲಿಂಡರ್ಗಳು ಬೇಕಾಗುತ್ತಿದ್ದವು. ಆದ್ರೆ ಆಸ್ಪತ್ರೆಗೆ ದಿನಕ್ಕೆ 10 ಮೆಡಿಕಲ್ ಆಕ್ಸಿಜನ್ ಸಿಲಿಂಡರ್ಗಳು ಮಾತ್ರ ಪೂರೈಕೆಯಾಗುತ್ತಿದ್ದವು. ಇದರಿಂದಾಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು 8 ರೋಗಿಗಳ ಜೀವ ಬಲಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮೈಸೂರಿನಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಸ್ಥಗಿತ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರದಾಟ