ಚಿರಕಾಲದ ಮಿತ್ರನ ಗೆಲುವಿನಿಂದ ಸಂತಸವಾಗಿದೆ; ಸ್ಟಾಲಿನ್ ಗೆಲುವಿಗೆ ಅಭಿನಂದಿಸಿದ ರಜಿನಿಕಾಂತ್

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಹ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್​​ಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಕಂಡ ಡಿಎಂಕೆ ಪಕ್ಷಕ್ಕೂ ಅವರು ಶುಭಾಶಯ ಕೋರಿದ್ದಾರೆ.

ಚಿರಕಾಲದ ಮಿತ್ರನ ಗೆಲುವಿನಿಂದ ಸಂತಸವಾಗಿದೆ; ಸ್ಟಾಲಿನ್ ಗೆಲುವಿಗೆ ಅಭಿನಂದಿಸಿದ ರಜಿನಿಕಾಂತ್
ಎಂ ಕೆ ಸ್ಟಾಲಿನ್ ಮತ್ತು ರಜಿನಿಕಾಂತ್
Follow us
|

Updated on: May 02, 2021 | 10:12 PM

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆಲುವು ಸಾಧಿಸಿದ ಬೆನ್ನಲ್ಲೇ ನಟ ರಜಿನಿಕಾಂತ್ ಡಿಎಂಕೆ ನಾಯಕ,  ತಮಿಳುನಾಡಿನ ಸಂಭಾವ್ಯ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​​ಗೆ ಪತ್ರ ಬರೆದು ಅಭಿನಂದನೆ ಕೋರಿದ್ದಾರೆ. ನನ್ನ ಚಿರಕಾಲದ ಮಿತ್ರ​ ಗೆದ್ದಿದ್ದಕ್ಕೆ ನನಗೆ ಸಂತಸವಾಗಿದೆ. ತಮಿಳುನಾಡಿನಲ್ಲಿ ಅಭಿವೃದ್ಧಿ ಮಾಡುವಿರೆಂದು ಆಶಿಸುತ್ತೇನೆ ಎಂದು ಸೂಪರ್​ಸ್ಟಾರ್ ರಜಿನಿಕಾಂತ್ ಪತ್ರದಲ್ಲಿ ಹಾರೈಸಿದ್ದಾರೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಹ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್​​ಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಕಂಡ ಡಿಎಂಕೆ ಪಕ್ಷಕ್ಕೂ ಅವರು ಶುಭಾಶಯ ಕೋರಿದ್ದಾರೆ. ಅಲ್ಲದೇ ಸೋನಿಯಾ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿಗೆ ಮಮತಾ ಬ್ಯಾನರ್ಜಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಎನ್​ಡಿಎ ಮೈತ್ರಿಕೂಟಕ್ಕೆ ಆಶೀರ್ವದಿಸಿದ ತಮಿಳುನಾಡಿನ ಜನರಿಗೆ ನಾನು ಕೃತಜ್ಞ. ರಾಜ್ಯದ ಕಲ್ಯಾಣಕ್ಕೆ ಮತ್ತು ತಮಿಳು ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರಿಹೇಳುವ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ನಮ್ಮ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ನಾನು ಗೌರವಿಸುತ್ತೇನೆ ಎಂದು  ಮೋದಿ ತಿಳಿಸಿದ್ದಾರೆ

ಈಗಾಗಲೇ ತಮಿಳುನಾಡಿನಲ್ಲಿ ಡಿಎಂಕೆ ಬಹುಮತ ಪಡೆಯುವತ್ತ ಧಾವಿಸುತ್ತಿದೆ. 112 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿರುವ ಡಿಎಂಕೆ 19 19 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಎಐಎಎಡಿಎಂಕೆ 70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 12 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಡಿಎಂಕೆ ತಮಿಳುನಾಡಿನ ಅಧಿಕಾರದ ಗಾದಿಗೇರುವುದು ಖಚಿತವಾಗಿದೆ.

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: ಭಾರತದಲ್ಲಿ ಬಿಜೆಪಿ ಮೇಲುಗೈಗೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಳಸಿದ ತಂತ್ರಗಳು ಮಾದರಿಯಾಗಬಲ್ಲವೇ?

Karnataka By Election Results 2021 LIVE: ಕರ್ನಾಟಕ ಉಪಚುನಾವಣಾ ಕದನ: ರೋಚಕ ಗೆಲುವು ಕಂಡ ಬಿಜೆಪಿಯ ಮಂಗಳಾ ಅಂಗಡಿ

(Superstar Rajinikanth wishes DMK MK Stalin for victory in Tamil Nadu Elections 2021)