ದೆಹಲಿ: ದೇಶದಾದ್ಯಂತ ಕಂಡುಬರುತ್ತಿರುವ ಕೊರೊನಾ 2ನೇ ಅಲೆಯಲ್ಲಿ ಈವರೆಗೆ ಸತ್ತವರ ಪೈಕಿ 70 ವರ್ಷ ದಾಟಿದವರೇ ಹೆಚ್ಚು ಎಂದು ಕೇಂದ್ರ ಅರೋಗ್ಯ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (Indian Council of Medical Research – ICMR) ಅಧಿಕಾರಿಗಳು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2ನೇ ಅಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯಲ್ಲಿ 70 ವರ್ಷ ಮೇಲ್ಪಟ್ಟವರು ಶೇ.22.17ರಷ್ಟು ಇದ್ದಾರೆ. ಮೊದಲ ಅಲೆಯಲ್ಲಿ ಈ ವಯೋಮಾನದವರ ಸಾವಿನ ಸರಾಸರಿ ಶೇ 19.99ರಷ್ಟು ಇತ್ತು. 2ನೇ ಅಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟವರು ಶೇ 9.81ರಷ್ಟು ಇದ್ದಾರೆ. ಮೊದಲ ಅಲೆಯಲ್ಲಿ ಈ ವಯೋಮಾನದವರ ಸಾವಿನ ಸರಾಸರಿ ಶೇ 7.82ರಷ್ಟು ಇತ್ತು ಎಂದು ಐಸಿಎಂಆರ್ನ ಬಲರಾಮ್ ಭಾರ್ಗವ ಹೇಳಿದರು.
ದೇಶದಲ್ಲಿ ಈವರೆಗೆ ಶೇ 87ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ 80ರಷ್ಟು ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ಪಡೆದುಕೊಂಡಿದ್ದಾರೆ. ಕೊವ್ಯಾಕ್ಸಿನ್ ಪಡೆದವರ ಪೈಕಿ ಶೇ 0.04ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊವಿಶೀಲ್ಡ್ 2ನೇ ಡೋಸ್ ಪಡೆದ ಕೆಲವರಲ್ಲಿಯೂ ಕೊರೊನಾ ದೃಢಪಟ್ಟಿದೆ. ಕೊವಿಶೀಲ್ಡ್ ಪಡೆದ ಶೇ 0.03ರಷ್ಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಲಸಿಕ ಪಡೆದ ಬಳಿಕ 5,709 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ 3ನೇ ಅಲೆ
ಭಾರತದಲ್ಲಿ ಕೊರೊನಾ 2ನೇ ಅಲೆ ವ್ಯಾಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಪತ್ತೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ 3ನೇ ಅಲೆ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
There are 21,57,000 active cases in India currently i.e. twice the number of maximum active #COVID19 cases last year. More than 13 crore people have been vaccinated in the country so far including 30 lakh doses administered in the last 24 hours: Union Health Secy Rajesh Bhushan pic.twitter.com/iVt8bjZ3eO
— ANI (@ANI) April 21, 2021
ಸಕ್ರಿಯ ಪ್ರಕರಣ ದ್ವಿಗುಣ
ಈ ವರ್ಷ ಕೊರೊನಾ ಸಕ್ರಿಯ ಪ್ರಕರಣಗಳು ದ್ವಿಗುಣಗೊಂಡಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ 21,57,000 (21 ಲಕ್ಷ) ಸಕ್ರಿಯ ಪ್ರಕರಣಗಳಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಖ್ಯೆಯಾಗುತ್ತೆ. ಈವರೆಗೆ ದೇಶದಲ್ಲಿ 13 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 30 ಲಕ್ಷ ಡೋಸ್ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
(Elder people died in more number in 2nd wave of coronavirus says ICMR)
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 23,558 ಮಂದಿಗೆ ಸೋಂಕು, ಕೊರೊನಾದಿಂದ 116 ಜನರ ಸಾವು