
ವಾಮಾಚಾರದ ಶಂಕೆಯಲ್ಲಿ ವ್ಯಕ್ತಿಯೊಬ್ಬ ವೃದ್ಧ ದಂಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಕಿತಾಬೆಡಾದ ಕಿತಾಪದ ಗ್ರಾಮದಲ್ಲಿ ರಾತ್ರಿ 9-10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ದೇವೇಂದ್ರ ನಾಯಕ್ ಹಾಗೂ ಚಂಪಾ ನಾಯಕ್ ದಂಪತಿಯನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.
ಆರೋಪಿಯನ್ನು 23 ವರ್ಷದ ಅಜಯ್ ನಾಯಕ್ ಎಂದು ಗುರುತಿಸಲಾಗಿದೆ. ಇದು ಮಾಟಮಂತ್ರ ಅಥವಾ ಹಳೆಯ ದ್ವೇಷದ ಪ್ರಕರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಭಾಗಿಯಾಗಿರುವುದು ಕಂಡುಬಂದಿದೆ. ಈ ವೃದ್ಧ ದಂಪತಿ ಮಾಟ-ಮಂತ್ರ ಮಾಡಿದ್ದರಿಂದಲೇ ತನ್ನ ತಂದೆ ಹಗೂ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಹೀಗಾಗಿ ಅವರ ಕೊಲೆಗೆ ಯೋಜನೆ ರೂಪಿಸಿದ್ದ.
ದೇವೇಂದ್ರ ಗಿಡಗಳಿಗೆ ನೀರು ಹಾಕುತ್ತಿದ್ದಾಗ ಅಜಯ್ ಅವರ ಬಳಿ ಹೋಗಿ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ, ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಅವರ ಮನೆಗೆ ನುಗ್ಗಿ ಮಲಗಿದ್ದ ಚಂಪಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ದಂಪತಿಯ ಸೊಸೆ ಸುಮಿತ್ರಾ ಅವರು ತಮ್ಮ ನವಜಾತ ಮಗಳೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದರು. ವೃದ್ಧ ದಂಪತಿಗಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದೆ. ಆದರೆ, ಆಕೆ ತನ್ನ ಮಗಳೊಂದಿಗೆ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು ಮತ್ತು ಮಂಗಳವಾರ ಬೆಳಗ್ಗೆ ತನ್ನ ಸಂಬಂಧಿ ರವೀಂದ್ರ ನಾಯಕ್ ಅವರಿಗೆ ಘಟನೆಯ ಬಗ್ಗೆ ತಿಳಿಸಿದಳು.
ಮತ್ತಷ್ಟು ಓದಿ:ಮಗನ ಸಾವಿಗೆ ಮಾಟ ಮಂತ್ರ ಆರೋಪ: ಒಡ ಹುಟ್ಟಿದ ಅಕ್ಕನಿಗೆ ವಿಷ ಹಾಕಿದ ತಮ್ಮ
ಇದಾದ ನಂತರ ರವೀಂದ್ರ ತಕ್ಷಣವೇ ಬಿಸೋಯಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡು ಅಜಯ್‌ನನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ