ಇಂಗ್ಲೆಂಡ್ ಮಾಜಿ ಪಿಎಂ ರಿಷಿ ಸುನಕ್ ಕುಟುಂಬವನ್ನು ಭೇಟಿಯಾದ ಪ್ರಧಾನಿ ಮೋದಿ
ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್, ಅವರ ಪತ್ನಿ ಅಕ್ಷತಾ ಮೂರ್ತಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಈ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದು, "ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿ ಸಂತೋಷವಾಯಿತು! ನಾವು ಅನೇಕ ವಿಷಯಗಳ ಕುರಿತು ಅದ್ಭುತ ಸಂಭಾಷಣೆ ನಡೆಸಿದೆವು" ಎಂದು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಪಿಎಂ ಮೋದಿ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್, ಅವರ ಪತ್ನಿ ಅಕ್ಷತಾ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರನ್ನು ಭೇಟಿಯಾದರು. ಈ ವೇಳೆ ರಿಷಿ ಸುನಕ್ ಅವರನ್ನು ಭಾರತದ ದೊಡ್ಡ ಸ್ನೇಹಿತ ಎಂದು ಮೋದಿ ಹೊಗಳಿದ್ದಾರೆ. ರಿಷಿ ಸುನಕ್ ತಮ್ಮ ಭಾರತ ಪ್ರವಾಸದಲ್ಲಿ ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಜೈಪುರಕ್ಕೆ ಭೇಟಿ ನೀಡಿದ್ದಾರೆ.
ಇಂದಿನ ಭೇಟಿಯ ವೇಳೆ ಇಬ್ಬರು ನಾಯಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ಅವರ ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರೂ ಆಗಿರುವ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಕೂಡ ಈ ವೇಳೆ ಜೊತೆಗಿದ್ದರು.
It was a delight to meet former UK PM, Mr. Rishi Sunak and his family! We had a wonderful conversation on many subjects.
Mr. Sunak is a great friend of India and is passionate about even stronger India-UK ties.@RishiSunak @SmtSudhaMurty pic.twitter.com/dwTrXeHOAp
— Narendra Modi (@narendramodi) February 18, 2025
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿ ಸಂತೋಷವಾಯಿತು! ನಾವು ಅನೇಕ ವಿಷಯಗಳ ಕುರಿತು ಅದ್ಭುತ ಸಂಭಾಷಣೆ ನಡೆಸಿದ್ದೇವೆ. ರಿಷಿ ಸುನಕ್ ಭಾರತದ ಉತ್ತಮ ಸ್ನೇಹಿತ. ಅವರು ಇನ್ನೂ ಬಲವಾದ ಭಾರತ-ಯುಕೆ ಸಂಬಂಧಗಳ ಬಗ್ಗೆ ಉತ್ಸುಕರಾಗಿದ್ದಾರೆ.” ಎಂದಿದ್ದಾರೆ.
#WATCH | Delhi: Rishi Sunak, the former Prime Minister of United Kingdom, visited Parliament House with his wife Akshata Murty and daughters Krishna and Anoushka today. They were accompanied by Sudha Murthy, Member of Parliament, Rajya Sabha. Lok Sabha Secretary General Utpal… pic.twitter.com/c30y9GWNhx
— ANI (@ANI) February 18, 2025
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ತಾವೇ ಕತಾರ್ ರಾಜನನ್ನು ಬರಮಾಡಿಕೊಂಡ ಪ್ರಧಾನಿ ಮೋದಿ
ಶನಿವಾರ, ರಿಷಿ ಸುನಕ್ ಕುಟುಂಬವು ಆಗ್ರಾದಲ್ಲಿರುವ ತಾಜ್ ಮಹಲ್‌ಗೆ ಭೇಟಿ ನೀಡಿತ್ತು. ಈ ವೇಳೆ ಯುಕೆ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ನೋಡಲು ಸಂದರ್ಶಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ನೆರೆದಿದ್ದ ಜನರತ್ತ ಕೈ ಬೀಸಿದ್ದರು. ರಿಷಿ ಸುನಕ್ ಭಾನುವಾರ ತಮ್ಮ ಕುಟುಂಬದೊಂದಿಗೆ ಐಕಾನಿಕ್ ಫತೇಪುರ್ ಸಿಕ್ರಿ ಸ್ಮಾರಕಕ್ಕೂ ಭೇಟಿ ನೀಡಿದರು.
ಆಗ್ರಾ ಪ್ರವಾಸಕ್ಕೂ ಮುನ್ನ ಸುನಕ್ ಜೈಪುರ ಸಾಹಿತ್ಯ ಉತ್ಸವ ಮತ್ತು ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ T20I ಪಂದ್ಯವನ್ನು ವೀಕ್ಷಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ