ಸೂರತ್​ನ ಫ್ಲ್ಯಾಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

|

Updated on: Jun 16, 2024 | 9:45 AM

ಫ್ಲ್ಯಾಟ್​ವೊಂದರಲ್ಲಿ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.ಮೇಲ್ನೋಟಕ್ಕೆ ಗೀಸರ್​ನ ಗ್ಯಾಸ್​ ಸೋರಿಕೆಯಾಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಗ್ಯಾಸ್​ನಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಅವರು ಮಲಗುವ ಮುನ್ನ ಒಟ್ಟಿಗೆ ಊಟ ಮಾಡಿದ್ದರಿಂದ ಆಹಾರ ವಿಷಪೂರಿತವಾಗಿರಬಹುದು ಎಂದು ಪೊಲೀಸರು ಶಂಕಿಸಲಾಗಿದೆ. ಆದರೆ, ಒಂಬತ್ತು ಮಂದಿ ಒಟ್ಟಿಗೆ ಊಟ ಮಾಡಿದ್ದು, ಉಳಿದವರು ಸುರಕ್ಷಿತವಾಗಿದ್ದಾರೆ. ಫ್ಲಾಟ್ ಮಾಲೀಕ ಜಸುಬೆನ್ ವಧೇಲ್, ಆಕೆಯ ಸಹೋದರಿಯರಾದ ಶಾಂತಬೆನ್ ವಧೇಲ್ (53) ಮತ್ತು ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಅವರ ಶವಗಳು ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿವೆ.

ಸೂರತ್​ನ ಫ್ಲ್ಯಾಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ
Follow us on

ಸೂರತ್‌ನ ಜಹಾಂಗೀರ್‌ಪುರ ಪ್ರದೇಶದ ಫ್ಲ್ಯಾಟ್​ನಲ್ಲಿ ವೃದ್ಧ ಮತ್ತು ಮೂವರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ.
ಮೇಲ್ನೋಟಕ್ಕೆ ಗೀಸರ್​ನ ಗ್ಯಾಸ್​ ಸೋರಿಕೆಯಾಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಗ್ಯಾಸ್​ನಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ.

ಅವರು ಮಲಗುವ ಮುನ್ನ ಒಟ್ಟಿಗೆ ಊಟ ಮಾಡಿದ್ದರಿಂದ ಆಹಾರ ವಿಷಪೂರಿತವಾಗಿರಬಹುದು ಎಂದು ಪೊಲೀಸರು ಶಂಕಿಸಲಾಗಿದೆ. ಆದರೆ, ಒಂಬತ್ತು ಮಂದಿ ಒಟ್ಟಿಗೆ ಊಟ ಮಾಡಿದ್ದು, ಉಳಿದವರು ಸುರಕ್ಷಿತವಾಗಿದ್ದಾರೆ.

ಫ್ಲ್ಯಾಟ್​ ಮಾಲೀಕ ಜಸುಬೆನ್ ವಧೇಲ್, ಆಕೆಯ ಸಹೋದರಿಯರಾದ ಶಾಂತಬೆನ್ ವಧೇಲ್ (53) ಮತ್ತು ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಅವರ ಶವಗಳು ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮಲಗಿದ್ದರು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಅಲ್ಲಿ ಸೆಲೆಬ್ರೆಟಿಯ ಪೈಶಾಚಿಕತೆ ದರ್ಶನ, ಇಲ್ಲೊಬ್ಬ ತನ್ನ ಸ್ನೇಹಿತನನ್ನೇ ಪರಲೋಕಕ್ಕೆ ಕಳಿಸಿದ: ಕಾರಣ ಮಾತ್ರ ಅದೇ!

ಜಶು ಬೆನ್ ಅವರ ಪುತ್ರ ಮುಖೇಶ್ ಅವರು ಬೆಳಗ್ಗೆ ಚಹಾ ನೀಡಲು ಹೋದಾಗ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಹಿಡಿದರು. ವಾಂತಿ ಮಾಡಿಕೊಂಡಿದ್ದರು. ಅವರ ದೇಹದಲ್ಲಿ ಯಾವುದೇ ಗಾಯಗಳು ಅಥವಾ ಗುರುತುಗಳಿಲ್ಲ.

ಪೊಲೀಸರು ಮತ್ತು ತುರ್ತು ಸೇವೆಗಳನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ