ಅಲ್ಲಿ ಸೆಲೆಬ್ರೆಟಿಯ ಪೈಶಾಚಿಕತೆ ದರ್ಶನ, ಇಲ್ಲೊಬ್ಬ ತನ್ನ ಸ್ನೇಹಿತನನ್ನೇ ಪರಲೋಕಕ್ಕೆ ಕಳಿಸಿದ: ಕಾರಣ ಮಾತ್ರ ಅದೇ!

ಇತ್ತ ಆನಂದ್​ ತನ್ನ ಹೆಂಡತಿ ಬಗ್ಗೆ ಸ್ನೇಹಿತರೇ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿದ್ದಾನೆ. ಅಲ್ಲಿ ಕೊಲೆಯಾದ ರೇಣುಕಾಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ, ಇಲ್ಲಿ ಕೊಲೆಯಾದ ಶಂಕರ್​ ಪತ್ನಿ ಐದು ತಿಂಗಳ ಬಾಣಂತಿ.

ಅಲ್ಲಿ ಸೆಲೆಬ್ರೆಟಿಯ ಪೈಶಾಚಿಕತೆ ದರ್ಶನ, ಇಲ್ಲೊಬ್ಬ ತನ್ನ ಸ್ನೇಹಿತನನ್ನೇ ಪರಲೋಕಕ್ಕೆ ಕಳಿಸಿದ: ಕಾರಣ ಮಾತ್ರ ಅದೇ!
ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನನ್ನು ಪರಲೋಕಕ್ಕೆ ಕಳಿಸಿದ!
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Jun 14, 2024 | 4:25 PM

ಕನ್ನಡದ ಆ ಸ್ಟಾರ್​ ನಟ ತನ್ನ ಸಂಗಾತಿಗೆ ತನ್ನದೇ ಅಭಿಮಾನಿಯೊಬ್ಬ ಅಶ್ಲೀಲ ಮೆಸೇಜ್​ ಕಳಿಸಿದ ಅನ್ನೋ ಕಾರಣಕ್ಕೆ ಆತನನ್ನು ಪೈಶಾಚಿಕವಾಗಿ ಕೊಲೆ ಮಾಡಿಬಿಸಾಕಿ, ಸದ್ಯಕ್ಕೆ ಆರೋಪಿ ಎನಿಸಿಕೊಂಡಿದ್ದಾನೆ. ಆದ್ರೆ ಇಲ್ಲೊಬ್ಬ ತನ್ನ ಹೆಂಡತಿಯ ಬಗ್ಗೆ ತನ್ನದೇ ಸ್ನೇಹಿತರು ಅಶ್ಲೀಲವಾಗಿ ಮಾತನಾಡಿದರು ಅನ್ನೋ ಕಾರಣಕ್ಕೆ ಆ ಇಬ್ಬರು ಸ್ನೇಹಿತರನ್ನು ನಡುರಾತ್ರಿ ಬರ್ಬರವಾಗಿ ಕೊಲೆ ಮಾಡಿ, ಅದಕ್ಕೆ ಅಕ್ಸಿಡೆಂಟ್​ ಕಥೆ ಕಟ್ಟಿರುವ ಘಟನೆ ನಡೆದಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಚಿತ್ರದುರ್ಗ ರೇಣುಕಾಸ್ವಾಮಿಯ ಹತ್ಯೆಗೆ 2 ದಿನಕ್ಕೆ ಮುಂಚೆ.

ಅವತ್ತು ಜೂನ್​ 7 ರಾತ್ರಿ ಸುಮಾರು 9.30ರ ಸಮಯ ರಾಷ್ಟ್ರೀಯ ಹೆದ್ದಾರಿ 75ರ ಕೋಲಾರ ತಾಲ್ಲೂಕು ಚುಂಚದೇನಹಳ್ಳಿ ಗ್ರಾಮದ ಬಳಿ ಅಪಘಾತವೊಂದು ನಡೆದಿದೆ ಎಂದು ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ಪೋನ್ ಬಂದಿತ್ತು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಯಾರೋ ಆಂಬ್ಯುಲೆನ್ಸ್​ಗೂ ಪೋನ್​ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಆಂಬ್ಯುಲೆನ್ಸ್​ ಸಿಬ್ಬಂದಿ ರಸ್ತೆ ಬದಿ ಬಿದ್ದಿದ್ದ ಇಬ್ಬರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ರು. ಈ ವೇಳೆ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಅಸಲಿಗೆ ಆ ಅಪಘಾತದ ಬಗ್ಗೆಯೇ ಅನುಮಾನ ಬಂದಿದೆ.

‘ಆ ಅಪಘಾತದಲ್ಲಿ’ ಮೃತಪಟ್ಟಿದ್ದವರ ಗುರುತು ಪತ್ತೆ ಹಚ್ಚಿದ ಪೊಲೀಸರಿಗೆ ಅಲ್ಲಿ ಮೃತಪಟ್ಟಿದ್ದ ವ್ಯಕ್ತಿ ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕು ಜೀಡಮಾಕನಪಲ್ಲಿ ಗ್ರಾಮದ ಶಂಕರ್​ ಎಂದು ತಿಳಿದುಬಂದಿತ್ತು. ಅಲ್ಲದೆ ಮತ್ತೊಬ್ಬ ಆತನ ಸಂಬಂಧಿ ಆಂದ್ರ ಪ್ರದೇಶ ಮೂಲದ ಗಂಧರ್ವಮಾಕನಪಲ್ಲಿ ಗ್ರಾಮದ ಶಂಕರ್ ಆಲಿಯಾಸ್​ ಶೇಖರ್​​ ಎಂದು ತಿಳಿದು ಬಂದಿತ್ತು. ಇನ್ನು ಬೆಳಿಗ್ಗೆ ಹೊತ್ತಿಗೆ ಮೃತ ವ್ಯಕ್ತಿಯ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಬಂದಿದ್ದರು, ಜೊತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೇಖರ್ ಆಲಿಯಾಸ್​ ಶಂಕರ್​ ಗೆ ಪ್ರಜ್ಞೆ ಮರಳಿತ್ತು. ಈ ವೇಳೆ ಶಂಕರ್​ ನೀಡಿದ ಮಾಹಿತಿ ಕೇಳಿ ಅಲ್ಲೇನೋ ನಡೆದಿದೆ ಅನ್ನೋ ಅನುಮಾನ ಪೊಲೀಸರಿಗೆ ಬಂದಿತ್ತು. ಜೊತೆಗೆ ಮೃತರ ಸಂಬಂಧಿಕರೂ ಅಲ್ಲಿ ಕೊಲೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಇಷ್ಟೆಲ್ಲಾ ಆದ ಮೇಲೆ ಪೊಲೀಸರು ಘಟನೆ ನಡೆದ ಸ್ಥಳದ ಸಮೀಪ ಇದ್ದ ಗೋಲ್ಡ್​ ಮೈನ್​ ಕೆಫೆಯ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದರು, ಅಷ್ಟೇ ಅಲ್ಲದೆ ಮೃತ ವ್ಯಕ್ತಿಯ ದೇಹದ ಮೇಲಿದ್ದ ಗಾಯಗಳನ್ನು ಪರಿಶೀಲನೆ ನಡೆಸಿ ವೈದ್ಯರಿಂದಲೂ ಮಾಹಿತಿ ಪಡೆದಿದ್ದರು. ಅದು ನಿಜಕ್ಕೂ ಅಪಘಾತವೇ ಅಥವಾ ಬೇರೆ ಏನಾದರೂ ಆಗಿದ್ಯಾ? ಎಂದು ಅನುಮಾನ ವ್ಯಕ್ತಪಡಿಸಿದಾಗ ವೈದ್ಯರು ಕೂಡಾ ಇದು ಅಪಘಾತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ‘ಅನುಮಾನಾಸ್ಪದ ಜೋಡಿ ಸಾವುಗಳು’ ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು ಅಲ್ಲಿಂದಾಚೆಗೆ ಒಂದೊಂದಾಗಿ ಇಡೀ ಪ್ರಕರಣದ ಅಸಲಿಯತ್ತು ಬಯಲಾಗಿತ್ತು.

ಹಾಗಾದ್ರೆ ಅವರೆಲ್ಲಾ ಅಲ್ಲಿಗೆ ಬಂದಿದ್ದಾದರೂ ಯಾಕೆ? ಅಲ್ಲಿ ಆಗಿದ್ದೇನು? ಅನ್ನೋದರ ಕುರಿತು ವಿಚಾರಣೆ ಶುರು ಮಾಡಿದ್ದರು. ಆಂದ್ರದ ಗಂಧರ್ವಮಾಕನಪಲ್ಲಿ ಗ್ರಾಮದ ಆನಂದ್​ ಮತ್ತು ಶೇಖರ್ ಆಲಿಯಾಸ್​ ಶಂಕರ್​, ಮತ್ತು ಕೆಜಿಎಫ್​ ತಾಲ್ಲೂಕು ಜೀಡಮಾಕನಪಲ್ಲಿ ಗ್ರಾಮದ ಶಂಕರ್ ಎಂಬಾತ ಎಲ್ಲರೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರು. ಅವತ್ತು ಜೂನ್​ 7 ರಂದು ಆನಂದ್​ ಬೆಂಗಳೂರಿನಿಂದ ಊರಿಗೆ ಕಾರ್​ನಲ್ಲಿ ಬರುತ್ತಿದ್ದ ತಮ್ಮೂರಿನ ಸ್ನೇಹಿತ ಶೇಖರ್​​ ಆಲಿಯಾಸ್ ಶಂಕರ್​ನನ್ನು ಊರಿಗೆ ಹೋಗೋಣ ಬಾ ಎಂದು ಜೊತೆಗೆ ಕರೆದುಕೊಂಡಿದ್ದ. ಶೇಖರ್​​ ತನ್ನ ಸಂಬಂಧಿ ಶಂಕರ್ ಎಂಬಾತನನ್ನು ಊರಿಗೆ ಹೋಗ್ತಾ ಇದ್ದೀನಿ, ಬರೋದಾದ್ರೆ ಬಾ ಎಂದು ಕರೆದಿದ್ದ. ಎಲ್ಲರೂ ಹೊಸಕೋಟೆಯಲ್ಲಿ ಜೊತೆಯಾಗಿ ಅಲ್ಲೇ ಒಂದು ಬಾರ್​ ನಲ್ಲಿ ಚೆನ್ನಾಗಿ ಕುಡಿದು ಹೊರಟಿದ್ದರು.

ಕಾರ್​ ನಲ್ಲಿ ಹೊಸಕೋಟೆಯಿಂದ ಕೋಲಾರದತ್ತ ಹೊರಟಿದ್ದ ಮೂವರ ನಡುವೆ ಮಾತುಕತೆ ಶುರುವಾಗಿತ್ತು, ಅಲ್ಲದೆ ಒಂದು ವಾರದ ಹಿಂದಷ್ಟೇ ಆನಂದನ ಪತ್ನಿ ಆತ​ನನ್ನು ಬಿಟ್ಟು ಕೋಪಗೊಂಡು ತವರು ಮನೆಗೆ ಹೋಗಿದ್ದಾಳೆ ಎಂದು ತನ್ನ ಇಬ್ಬರು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಈ ವೇಳೆ ಜೊತೆಗಿದ್ದ ಶೇಖರ್ ಮತ್ತು ಶಂಕರ್​ , ಆನಂದ್ ಪತ್ನಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದಾರೆ. ನಿನ್ನ ಹೆಂಡತಿ ಏನ್​ ಮಾಹಾ? ಅವಳನ್ನು ನಮ್ಮ ಜೊತೆಗೆ ಕಳಿಸು ಎಂದೆಲ್ಲಾ ಅಂದಿದಾರಂತೆ. ಇದೇ ವಿಷಯವಾಗಿ… ಕಾರ್​ನಲ್ಲಿ ಪ್ರಯಾಣಿಸುವಾಗ ಮೂರು ಜನರ ನಡುವೆ ಒಂದಷ್ಟು ಗಲಾಟೆ ನಡೆದಿದೆ.

ಗಾಯಗೊಂಡು ಬಚಾವಾದ ಮತ್ತೊಬ್ಬ ಸ್ನೇಹಿತ

ಅಷ್ಟೊತ್ತಿಗೆ, ಮೂವರೂ ಇದ್ದ ಕಾರು​ ಕೋಲಾರ ತಾಲ್ಲೂಕು ಚುಂಚದೇನಹಳ್ಳಿ ಗ್ರಾಮದ ಬಳಿ ಬಂದಿತ್ತು. ಈ ವೇಳೆ ಕಾರ್​ ನಿಲ್ಲಿಸಿದ್ದ ಆನಂದ, ಶಂಕರ್ ಮತ್ತು ಶೇಖರ್​ ಇಬ್ಬರ ಮೇಲೂ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಮೂರೂ ಜನರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಆಗ ರೋಡ್​ನ ಎಡಬದಿಯಿಂದ ಶಂಕರ್ ಮತ್ತು ಶೇಖರ್​ ಹೈವೆಯ ಬಲ ಬದಿಗೆ ಬಂದಿದ್ದರು. ಆಗ ಕಾರ್​ನಿಂದ ಜಾಕ್​ ರಾಡ್​ ತೆಗೆದುಕೊಂಡು ಹಿಂಬಾಲಿಸಿಕೊಂಡು ಬಂದ ಆನಂದ್​, ಶೇಖರ್​​ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಆ ಹೊಡೆತ ಶೇಖರ್​ ನಿಂದ ತಪ್ಪಿ ಶಂಕರ್​​ ತಲೆಗೆ ಬಿದ್ದಿದೆ. ಬಲವಾದ ಪೆಟ್ಟು ಬಿದ್ದ ಕೂಡಲೇ ಶಂಕರ್​ ಅಲ್ಲೇ ಕುಸಿದು ಬಿದ್ದಿದ್ದ.

ಅದಾದಮೇಲೆ ಆನಂದ ಮತ್ತೆ ಶೇಖರ್​​ ಕಾಲು ಮತ್ತು ತಲೆಗೆ ಹೊಡೆದಿದ್ದಾನೆ. ಸಿಕ್ಕಾಪಟ್ಟೆ ಕುಡಿದಿದ್ದ ಶೇಖರ್​ ಕೂಡಾ ಆಗ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಆಗ ಆನಂದ್​, ತಾನೇ ಆಂಬ್ಯುಲೆನ್ಸ್​ಗೆ ಪೋನ್​ ಮಾಡಿ ಇಲ್ಲೊಂದು ಆಕ್ಸಿಡೆಂಟ್​ ಆಗಿದೆ ಎಂದು ತಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದ. ಈ ವೇಳೆ ದಾರಿಹೋಕರೊಬ್ಬರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್​ಗೆ ಪೋನ್​ ಮಾಡಿ ಅವರಿಬ್ಬರನ್ನೂ ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ರು.

ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಅದೊಂದು ಅಪಘಾತ ಅನ್ನೋದು ಅನುಮಾನ ಮೂಡಿತ್ತು, ಜೊತೆಗೆ ಮೃತ ಶಂಕರ್​ ಸಂಬಂಧಿಕರು ಪೊಲೀಸರಿಗೆ ಸಾವಿನ ಕುರಿತು ಅನುಮಾನ ವ್ಯಕ್ತ ಪಡಿಸಿದ್ದರು. ಆ ಕುರಿತು ದೂರು ಸಹ ನೀಡಿದ್ದರು. ದೂರು ಸ್ಪೀಕರಿಸಿದ್ದ ಕೋಲಾರ ಗ್ರಾಮಾಂತರ ಠಾಣಾ ಇನ್ಸ್​ಪೆಕ್ಟರ್​ ಕಾಂತರಾಜು ಹಾಗೂ ಸಿಬ್ಬಂದಿ ಮೊದಲು ತಲೆ ಮರೆಸಿಕೊಂಡಿದ್ದ ಆನಂದ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಕೊಲೆ ಪ್ರಕರಣ ಆಗ ಬಯಲಾಗಿದೆ. ಅಷ್ಟಕ್ಕೂ ಆರೋಪಿ ಆನಂದ್ ಬಾಯಿ ಬಿಟ್ಟ ಸತ್ಯ ಏನು, ಅಲ್ಲಿ ನಡೆದಿದ್ದೇನು ಅಂತ ನೋಡಿದ್ರೆ ಮೂರೂ ಜನ ಹೊಸಕೋಟೆಯಲ್ಲಿ ಜೊತೆ ಜೊತೆಗೆ ಕುಡಿದು, ಹೊಸಕೋಟೆಯಿಂದ ಆನಂದ್​ನ ಸ್ವಿಫ್ಟ್​​​ ಡಿಸೈರ್​ ಕಾರ್​ ನಲ್ಲಿ ಕೋಲಾರದತ್ತ ಹೊರಟಿದ್ರು. ಈ ವೇಳೆ ಕೋಲಾರ ತಲುಪುವಷ್ಟರಲ್ಲಿ ಕುಡಿದ ಅಮಲಿನಲ್ಲಿದ್ದರು. ಈ ವೇಳೆ ಆನಂದ್​ ತನ್ನ ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದಾಳೆಂದು ಹೇಳಿಕೊಂಡಿದ್ದ. ಆಗ ಜೊತೆಗಿದ್ದ ಇಬ್ಬರೂ ಆನಂದ್​ ಪತ್ನಿಯ ಬಗ್ಗೆ ಅಶ್ಲೀಲ ಹಾಗೂ ಅಸಭ್ಯ ಮಾತುಕತೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡಿದ್ದ ಆನಂದ್​ ಚುಂಚದೇನಹಳ್ಳಿ ಗ್ರಾಮದ ಬಳಿ ಕಾರ್​ ನಿಲ್ಲಿಸಿ ಇಬ್ಬರ ಮೇಲೆಯೂ ಜಾಕ್​ ರಾಡ್​ ನಿಂದ ಹಲ್ಲೆಗೆ ಮುಂದಾಗಿದ್ದಾನೆ.

ಕೊಲೆಯಾದ ಶಂಕರ್​ ಪತ್ನಿ ಐದು ತಿಂಗಳ ಬಾಣಂತಿ

ಆದರೆ ಆನಂದ್ ಹೊಡೆದಿದ್ದ ಏಟು ಶಂಕರ್​ ತಲೆಯ ಹಿಂಭಾಗಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರವಾವಾಗಿ ಆತ ಅಲ್ಲೇ ಮೃತಪಟ್ಟಿದ್ದ. ನಂತರ ಆನಂದ್​ ತಾನೇ ಅಂಬ್ಯುಲೆನ್ಸ್​​ಗೆ ಪೋನ್​ ಮಾಡಿ ಅಲ್ಲಿಂದ ಕಾಲ್ಕಿತ್ತು ಊರಿಗೆ ಹೋಗಿದ್ದ, ಊರಿಗೆ ಹೋಗುತ್ತಾ ಮಾರ್ಗಮಧ್ಯೆ ಶೇಖರ್​ ನಂಬರ್​ಗೆ ಪೋನ್​ ಮಾಡಿ ಬದುಕಿದ್ದಾರಾ ಇಲ್ಲವಾ ಅನ್ನೋದನ್ನು ತಿಳಿದುಕೊಂಡು ನಂತರ ರಾತ್ರಿ ಊರು ಸೇರಿಕೊಂಡು, ಬೆಳಿಗ್ಗೆ ಹೊತ್ತಿಗೆ ಬೇತಮಂಗಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಮಾಡಿ ಕಾರ್​ ಬಿಟ್ಟು ತಲೆಮರೆಸಿಕೊಂಡಿದ್ದ, ಆದರೆ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಆನಂದ್​ನನ್ನು 24 ಗಂಟೆಯಲ್ಲೇ ಬಂಧಿಸಿ ಕರೆತಂದು ವಿಚಾರಣೆ ಮಾಡಿದಾಗ ಅಲ್ಲೊಂದು ಕೊಲೆ ಪ್ರಕರಣ ಬಯಲಾಗಿದೆ.

ಒಟ್ಟಾರೆ ಸ್ನೇಹಿತನ ಸಂಸಾರದಲ್ಲಿ ಉಂಟಾಗಿದ್ದ ಬಿರುಕನ್ನು ಸರಿ ಮಾಡಬೇಕಿದ್ದ ಸ್ನೇಹಿತರೇ ಇಲ್ಲಿ ಅಸಭ್ಯವಾಗಿ ಮಾತನಾಡಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿದ್ದ ಆತ ತನ್ನ ಸ್ನೇಹಿತರು ಕಂಠಪೂರ್ತಿ ಕುಡಿದಿದ್ದಾರೆ ಅನ್ನೋದನ್ನೂ ನೋಡದೆ, ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡುವ ಮಟ್ಟಕ್ಕೆ ತಲುಪಿದ್ದಾನೆ. ಇಲ್ಲಿ ದರ್ಶನ್​ ಕೇಸ್​ಗೂ ಆನಂದ್​ ಕೇಸ್​ಗೂ ಸ್ವಲ್ಪ ಸಾಮ್ಯತೆ ಇದೆ. ಅಲ್ಲಿ ದರ್ಶನ್​ ತನ್ನ ಪ್ರಿಯತಮೆ ಬಗ್ಗೆ ತನ್ನ ಅಭಿಮಾನಿಯೊಬ್ಬ ಅಶ್ಲೀಲ ಮೆಸೇಜ್​ ಕಳಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಸುದ್ದಿಯಾಗಿದೆ.

ಇತ್ತ ಆನಂದ್​ ತನ್ನ ಹೆಂಡತಿ ಬಗ್ಗೆ ಸ್ನೇಹಿತರೇ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿದ್ದಾನೆ. ಅಲ್ಲಿ ಕೊಲೆಯಾದ ರೇಣುಕಾಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ, ಇಲ್ಲಿ ಕೊಲೆಯಾದ ಶಂಕರ್​ ಪತ್ನಿ ಐದು ತಿಂಗಳ ಬಾಣಂತಿ. ಅಲ್ಲಿ ದರ್ಶನ್​ ತನ್ನ ಕೇಸ್ ಮುಚ್ಚಿಹಾಕಲು ಪ್ಲಾನ್​ ಮಾಡಿದ್ದ, ಇಲ್ಲೂ ಆರೋಪಿ ಕೊಲೆ ಕೇಸ್​ ಮುಚ್ಚಿಹಾಕಲು ಆಕ್ಸಿಡೆಂಟ್​ ಡ್ರಾಮ ಕ್ರಿಯೇಟ್​ ಮಾಡಿದ್ದಾನೆ. ಆದರೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವಂತೆ ಇಬ್ಬರೂ ಕೂಡಾ ಕಾನೂನಿನ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅಲ್ಲಿ ದರ್ಶನ್​ ಸೆಲೆಬ್ರೆಟಿ ಆದರೆ ಇಲ್ಲಿ ಆನಂದ್ ಆರ್ಡಿನರಿ ಮನುಷ್ಯ ಅಷ್ಟೇ ವ್ಯತ್ಯಾಸ.

Published On - 4:23 pm, Fri, 14 June 24

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್