Assembly Election Results 2021: ಅಂಚೆ ಮತಗಳ ಎಣಿಕೆ; ಪಶ್ಚಿಮ ಬಂಗಾಳದ 7 ಸೀಟುಗಳಲ್ಲಿ ಟಿಎಂಸಿ, ಕೇರಳದ 3 ಸೀಟುಗಳಲ್ಲಿ ಕಾಂಗ್ರೆಸ್ ಮುನ್ನಡೆ

|

Updated on: May 02, 2021 | 9:42 AM

Assembly Elections 2021: ಕೊವಿಡ್ ನಿರ್ಬಂಧಗಳ ನಡುವೆಯೇ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

Assembly Election Results 2021: ಅಂಚೆ ಮತಗಳ ಎಣಿಕೆ; ಪಶ್ಚಿಮ ಬಂಗಾಳದ 7 ಸೀಟುಗಳಲ್ಲಿ ಟಿಎಂಸಿ, ಕೇರಳದ 3 ಸೀಟುಗಳಲ್ಲಿ ಕಾಂಗ್ರೆಸ್ ಮುನ್ನಡೆ
ಕೇರಳದಲ್ಲಿ ಮತ ಎಣಿಕೆ
Follow us on

ದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ,ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದೆ. ಕೊವಿಡ್ ನಿರ್ಬಂಧಗಳ ನಡುವೆಯೇ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಚುನಾವಣೆಗಿರುವ ಮತದಾನ ಮಾರ್ಚ್ 27ರಂದು ಆರಂಭವಾಗಿ ಏಪ್ರಿಲ್ 29ಕ್ಕೆ ಮುಕ್ತಾಯಗೊಂಡಿತ್ತು . ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ ನಡೆದಿದೆ. ತಮಿಳುನಾಡು,ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಂದೇ ಹಂತದ ಚುನಾವಣೆಗೆ ಮತದಾನ ನಡೆದಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮತ್ತು ಎಂ.ಕೆ.ಸ್ಟಾಲಿನ್ ನೇತೃತ್ವ ದ್ರಾವಿಡ ಮುನ್ನೇಟ್ರ ಕಳಗಂ (DMK) ನಡುವೆ ಪೈಪೋಟಿ ನಡೆಯುತ್ತಿದ್ದು, ಕೇರಳದಲ್ಲಿ ಎಡಪಕ್ಷ (LDF) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಸ್ಪರ್ಧೆ ನಡೆಯುತ್ತಿದೆ. ಪುದುಚೇರಿಯಲ್ಲಿ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟವು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ವಿರುದ್ಧ ಸ್ಪರ್ಧೆಗಿಳಿದಿದೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಅಧಿಕಾರ ಮುಂದುವರಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಜಿದ್ದಾಜಿದ್ದಿನ ಪೈಪೋಟಿ ನೀಡಿದೆ. ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್, ಎಐಯುಡಿಎಫ್ ಮತ್ತು ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಸೇರಿದಂತೆ ಎಂಟು ಪಕ್ಷಗಳ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಿದೆ.

ಅಂಚೆ ಮತ ಎಣಿಕೆ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ಮುನ್ನಡೆ

ಪಶ್ಚಿಮ ಬಂಗಾಳದ ಆರಂಭಿಕ ಮತ ಎಣಿಕೆಯಲ್ಲಿ 7 ಸೀಟುಗಳಲ್ಲಿ ಟಿಎಂಸಿ ಮತ್ತು 3 ಸೀಟುಗಳಲ್ಲಿ   ಬಿಜೆಪಿ ಮುನ್ನಡೆ ಸಾಧಿಸಿದೆ.

ಪುದುಚೇರಿಯಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ

ಕೇರಳದಲ್ಲಿ ಕಾಂಗ್ರೆಸ್ 3 ಸೀಟು , ಸಿಪಿಐ(ಎಂ) 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ

ಅಸ್ಸಾಂನಲ್ಲಿ ಕಾಂಗ್ರೆಸ್  ಒಂದು  ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ  ಮತ್ತು ಡಿಎಂಕೆ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ  ಸಾಧಿಸಿದೆ.

ಮತ ಎಣಿಕೆ ಕೇಂದ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಕಾಂಗ್ರೆಸ್  ಅಭ್ಯರ್ಥಿಯ ಏಜೆಂಟ್

ಪಶ್ಚಿಮ ಬಂಗಾಳದಲ್ಲಿನ ಪಣಿಹತಿ  ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ  ತಪಸ್ ಮುಜುಂದರ್ ಅವರ ಏಜೆಂಟ್  ಗೋಪಾಲ್  ಸೋಮ್  ಮತಎಣಿಕೆ ಕೇಂದ್ರದಲ್ಲಿ ಪ್ರಜ್ಞೆ ತಪ್ಪಿ  ಬಿದ್ದಿದ್ದಾರೆ.  ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Assembly Election Result 2021: ಚುನಾವಣಾ ಫಲಿತಾಂಶದ ದಿನ ಕಾಂಗ್ರೆಸ್​​ ಮಹತ್ವದ ನಿರ್ಧಾರ; ಟ್ವೀಟ್ ಮಾಡಿ ತಿಳಿಸಿದ ರಣದೀಪ್​ ಸುರ್ಜೇವಾಲಾ

5 State Assembly Election Results 2021 LIVE: ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮತ ಎಣಿಕೆ ಆರಂಭ

Published On - 9:34 am, Sun, 2 May 21