ಹೈದರಾಬಾದ್: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯನ್ನು ಹಾದುಹೋಗುವ ಚೆನ್ನೈ-ಕೋಲ್ಕತಾ ಹೆದ್ದಾರಿಯಲ್ಲಿ ಚಲಿಸುವ ಕಂಟೇನರ್ ಟ್ರಕ್‌ನಿಂದ 82 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್ ಟ್ಯಾಬ್ಲೆಟ್‌ಗಳನ್ನು ಕಳ್ಳರು ದೋಚಿದ್ದಾರೆ.
ಬೇರೆ ವಾಹನದಲ್ಲಿ ಬಂದ ದುಷ್ಕರ್ಮಿಗಳು ಚಾಲಕನ ಅರಿವಿಲ್ಲದೆ, ಚಲಿಸುತ್ತಿದ್ದ ಕಂಟೇನರ್ ಟ್ರಕ್ಗೆ ಹತ್ತಿ ಅದರ ಬಾಗಿಲು ತೆರೆದಿದ್ದಾರೆ. ನಂತರ ಟ್ರಕ್ನ ಬಾಗಿಲು ತೆರೆದ ಖದೀಮರು 82 ಲಕ್ಷ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್ ಟ್ಯಾಬ್ಲೆಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ, ಟ್ರಕ್ನ ಹಿಂದೆ ಬರುತ್ತಿದ್ದ ವಾಹನ ಸವಾರನೊಬ್ಬ ಕಳ್ಳತನದ ಬಗ್ಗೆ ಟ್ರಕ್ ಚಾಲಕನಿಗೆ ತಿಳಿಸಿದರಿಂದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀ ಸಿಟಿಯಲ್ಲಿ ಈ ವಸ್ತುಗಳನ್ನು ಲೋಡ್ ಮಾಡಲಾಗಿತ್ತು. ಅಧಿಕಾರಿಗಳ ಪ್ರಕಾರ, ಕಂಟೇನರ್‌ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್ ಮತ್ತು ನೋಟ್ ಪ್ಯಾಡ್‌ಗಳು ಸೇರಿದಂತೆ ಸುಮಾರು 9 ಕೋಟಿ ರೂ. ಮೌಲ್ಯದ ವಸ್ತುಗಳು ಇದ್ದವು ಎಂಬುದು ತಿಳಿದುಬಂದಿದೆ. ಘಟನೆ ನಡೆದಾಗ ಕಂಟೇನರ್ ಕೋಲ್ಕತ್ತಾಗೆ ಹೋಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.
ಇದರ ಬಗ್ಗೆ ಮಾತನಾಡಿದ ಗುಂಟೂರು ನಗರ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಅಮ್ಮಿ ರೆಡ್ಡಿ, ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ನಮಗೆ ದೂರು ಬಂದಿತು. ನಾವು ಕೂಡಲೇ ತನಿಖೆ ಪ್ರಾರಂಭಿಸಿದೆವು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸುಮಾರು 80 ಲಕ್ಷ ಮೌಲ್ಯದ ಸೆಲ್ ಫೋನ್ ಮತ್ತು ನೋಟ್‌ಪ್ಯಾಡ್‌ಗಳನ್ನು ಕಳವು ಮಾಡಲಾಗಿದೆ ಎಂಬುದು ವರದಿಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.