ಹೈದರಾಬಾದ್: ಆಂಧ್ರಪ್ರದೇಶದ ಕುಪ್ಪಂನಲ್ಲಿ ಹನ್ನೊಂದು ವರ್ಷದ ಚರಣ್ ಎಂಬ ಹುಡುಗ ಹುಲ್ಲು ಕತ್ತರಿಸುವ ಯಂತ್ರದಿಂದ ಮರದ ಕೋಲನ್ನು ಕತ್ತರಿಸಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ಮುಂಗೈ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಮುಂಗೈ ತುಂಡಾಗಿದ್ದು ಸದ್ಯ ವೈದ್ಯರ ಪರಿಶ್ರಮದಿಂದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ. ಹುಡುಗನಿಗೆ ಹೊಸ ಜೀವನ ಸಿಕ್ಕಿದೆ. ಈ ಘಟನೆಯ ನಂತರ, ಬಾಲಕನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ಚರಣ್ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿಗೆ ಶಿಫ್ಟ್ ಮಾಡಲಾಯಿತು. ರವಿ ಡಿ.ಆರ್ ಮತ್ತು ಸುದರ್ಶನ ರೆಡ್ಡಿ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಚರಣ್ಗೆ ಮರು ಜೀವ ನೀಡಿದ್ದಾರೆ.
ಆರು ಗಂಟೆಗಳಿಗೂ ಹೆಚ್ಚು ಕಾಲ ಬಾಲಕನ ತುಂಡರಿಸಿದ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ವೈದ್ಯರ ತಂಡವು ತಕ್ಷಣವೇ ಸ್ಪಂದಿಸಿ, ಆರು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. “ಆರು ಗಂಟೆಗಳ ಗೋಲ್ಡನ್ ಅವಧಿಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಮೂಲಕ ಕೈಕಾಲುಗಳ ಜೋಡಣೆಯು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ, ಆದರೆ ಚರಣ್ ಪ್ರಕರಣದಲ್ಲಿ ಇದು ವಿಶೇಷವಾಗಿ ಸವಾಲಿನ ರೀತಿಯ ಗಾಯ, ಕ್ರಷ್ ಅವಲ್ಶನ್ ಕಟ್, ಮತ್ತು ಅವನಿದ್ದ ಸ್ಥಳದಿಂದ ಆಸ್ಪತ್ರೆಗೆ ಇರುವ ದೂರದ ಜೊತೆಗೆ ಹುಡುಗನ ಚಿಕ್ಕ ವಯಸ್ಸಿನವ ಹೀಗಾಗಿ ಸ್ವಲ್ಪ ಕಷ್ಟವೆನಿಸಿದರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದರು. ಶಸ್ತ್ರಚಿಕಿತ್ಸೆಯ ನಂತರ, 10 ದಿನಗಳ ಕಾಲ ಚರಣ್ನನ್ನು ತೀವ್ರ ನಿಗದಲ್ಲಿ ಇರಿಸಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಚರಣ್ನಿಗೆ ಯಾವುದೇ ತೊಂದರೆಗಳಾಗಲಿ ಸಂಭವಿಸಿಲ್ಲ. ಸದ್ಯ ಚರಣ್ನನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವನ ಅಳವಡಿಸಲಾದ ಕೈಯ ಸ್ಥಿತಿಯೂ ಉತ್ತಮವಾಗಿದೆ. ಇನ್ನು 9-12 ತಿಂಗಳ ಅವಧಿಯಲ್ಲಿ ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:48 am, Thu, 13 April 23