AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bathinda Firing: ಬಟಿಂಡಾ ಸೇನಾ ಘಟಕದ ಮೇಲೆ ಗುಂಡಿನ ದಾಳಿ: ಹುತಾತ್ಮರಾದ ನಾಲ್ವರು ಯೋಧರ ಗುರುತು ಪತ್ತೆ

ಭಾರತೀಯ ಸೇನೆಯ ಪ್ರಕಾರ, ಶೋಧ ತಂಡವು INSAS ರೈಫಲ್ ಮತ್ತು ಕಾರ್ಟ್ರಿಡ್ಜ್ ಅನ್ನು ಪತ್ತೆ ಮಾಡಿದೆ. ಇವುಗಳನ್ನು ಈಗ ಪಂಜಾಬ್ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ತಂಡಗಳು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಿವೆ.

Bathinda Firing: ಬಟಿಂಡಾ ಸೇನಾ ಘಟಕದ ಮೇಲೆ ಗುಂಡಿನ ದಾಳಿ: ಹುತಾತ್ಮರಾದ ನಾಲ್ವರು ಯೋಧರ ಗುರುತು ಪತ್ತೆ
ಬಟಿಂಡಾ ಸೇನಾ ನೆಲೆ
Follow us
ರಶ್ಮಿ ಕಲ್ಲಕಟ್ಟ
|

Updated on: Apr 12, 2023 | 10:38 PM

ಪಂಜಾಬ್‌ನ (Punjab) ಬಟಿಂಡಾದ ಸೇನಾ ಘಟಕದ (Bathinda military station) ಬ್ಯಾರಕ್‌ನಲ್ಲಿ ಯೋಧರು ನಿದ್ರಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು ನಾಲ್ವರು ಯೋಧರು ಗುಂಡಿಗೆ ಬಲಿಯಾಗಿದ್ದಾರೆ. ಇವರನ್ನು ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್‌ಕುಮಾರ್ ಜೆ (24) ಮತ್ತು ಸಂತೋಷ್ ಎಂ ನಾಗರಾಳ್ (25) ಎಂದು ಗುರುತಿಸಲಾಗಿದೆ. ಅವರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದು ಸೇನೆಯು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.ಮುಂಜಾನೆ 4.30ರ ಸುಮಾರಿಗೆ ಘಟನೆ ನಡೆದಿದ್ದು, ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ ಎಂದು ಸೇನೆ ತಿಳಿಸಿದೆ.  ಹಲವಾರು ಇತರ ಅಂಶಗಳ ಪೈಕಿ, ಸೋಮವಾರ ನಾಪತ್ತೆಯಾದ INSAS ಅಸಾಲ್ಟ್ ರೈಫಲ್ ಮತ್ತು 28 ಬುಲೆಟ್‌ಗಳ ಮೇಲೆ ವಿಚಾರಣೆಗಳು ಕೇಂದ್ರೀಕರಿಸುತ್ತವೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ವಿವರಿಸಿದರು.

ಕಾಣೆಯಾದ 28 ಗುಂಡುಗಳ ಪೈಕಿ 19 ಶವಗಳಲ್ಲಿ ಪತ್ತೆಯಾಗಿವೆ ಎಂದು ಘಟನೆಯ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ರೈಫಲ್ ಮತ್ತು ಅನಿರ್ದಿಷ್ಟ ಸಂಖ್ಯೆಯ ಬುಲೆಟ್‌ಗಳು ಪತ್ತೆಯಾಗಿವೆ.

ದಾಳಿಕೋರರು ಕುರ್ತಾ ಪೈಜಾಮ ಧರಿಸಿದ್ದರು

ಕುರ್ತಾ ಪೈಜಾಮ ಧರಿಸಿದ್ದ ಇಬ್ಬರು ಐಎನ್‌ಎಸ್‌ಎಎಸ್ ರೈಫಲ್ ಮತ್ತು ಕೊಡಲಿ ಹಿಡಿದುಕೊಂಡು ಬಟಿಂಡಾ ಮಿಲಿಟರಿ ಠಾಣೆಯಲ್ಲಿ ನಾಲ್ವರು ಯೋಧರನ್ನು ಕೊಂದಿದ್ದಾರೆ ಎಂದು ಪಂಜಾಬ್ ಪೊಲೀಸ್ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಬುಧವಾರ ತಿಳಿಸಿದೆ. ಎಫ್‌ಐಆರ್‌ನ ಪ್ರಕಾರ, ದಾಳಿಕೋರರಿಬ್ಬರೂ ಮುಖ ಮುಚ್ಚಿಕೊಂಡಿದ್ದರು.

ಭಾರತೀಯ ಸೇನೆಯ ಪ್ರಕಾರ, ಶೋಧ ತಂಡವು INSAS ರೈಫಲ್ ಮತ್ತು ಕಾರ್ಟ್ರಿಡ್ಜ್ ಅನ್ನು ಪತ್ತೆ ಮಾಡಿದೆ. ಇವುಗಳನ್ನು ಈಗ ಪಂಜಾಬ್ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ತಂಡಗಳು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಿವೆ.

ಇದನ್ನೂ ಓದಿ: Punjab: ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ, ನಾಲ್ಕು ಸಾವು

ವಿಧಿವಿಜ್ಞಾನ ವಿಶ್ಲೇಷಣೆಯ ನಂತರವೇ ಶಸ್ತ್ರಾಸ್ತ್ರದಲ್ಲಿನ ಸುತ್ತುಗಳ ಬಾಕಿ ಸಂಖ್ಯೆ ಲಭ್ಯವಾಗಲಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಪಂಜಾಬ್ ಪೊಲೀಸರೊಂದಿಗೆ ಜಂಟಿ ತನಿಖೆ ಪ್ರಗತಿಯಲ್ಲಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಯಾವುದೇ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಎಂದು ಸೇನೆ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ