Watch: ನದಿಯಡಿಯಲ್ಲಿ ಚಲಿಸಿದ ಕೊಲ್ಕತ್ತಾ ಮೆಟ್ರೋ ರೈಲು; ಭಾರತದಲ್ಲಿ ಇದೇ ಮೊದಲು

ಇದನ್ನು ಐತಿಹಾಸಿಕ ಘಟನೆ ಎಂದು ಬಣ್ಣಿಸಿದ ಮೆಟ್ರೋ ಜನರಲ್ ಮ್ಯಾನೇಜರ್, ಹೌರಾ ಮೈದಾನ ಮತ್ತು ಎಸ್‌ಪ್ಲನೇಡ್ ನಿಲ್ದಾಣದ ನಡುವೆ ಮುಂದಿನ ಏಳು ತಿಂಗಳವರೆಗೆ ಪ್ರಾಯೋಗಿಕ ಓಡಾಟಗಳನ್ನು ನಡೆಸಲಾಗುವುದು, ನಂತರ ಈ ಮಾರ್ಗದಲ್ಲಿ ನಿಯಮಿತ ಸೇವೆಗಳು ಪ್ರಾರಂಭವಾಗುತ್ತವೆ ಎಂದು ಹೇಳಿದರು

Watch: ನದಿಯಡಿಯಲ್ಲಿ ಚಲಿಸಿದ ಕೊಲ್ಕತ್ತಾ ಮೆಟ್ರೋ ರೈಲು; ಭಾರತದಲ್ಲಿ ಇದೇ ಮೊದಲು
ಕೋಲ್ಕತ್ತಾ ಮೆಟ್ರೋ
Follow us
ರಶ್ಮಿ ಕಲ್ಲಕಟ್ಟ
| Updated By: Ganapathi Sharma

Updated on:Apr 15, 2023 | 8:42 AM

ಕೋಲ್ಕತ್ತಾ: ಕೋಲ್ಕತ್ತಾ ಮೆಟ್ರೋ (Kolkata Metro) ರೈಲು ಬುಧವಾರ ದೇಶದಲ್ಲೇ ಮೊದಲ ಬಾರಿಗೆ ನದಿಯ ಅಡಿಯಲ್ಲಿರುವ ಸುರಂಗದ ಮೂಲಕ ಹಾದು ಇತಿಹಾಸ ನಿರ್ಮಿಸಿದೆ. ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾತ್ರ ಇದ್ದ ಮೆಟ್ರೋ ಹೂಗ್ಲಿ (Hooghly)ನದಿ ಅಡಿಯಲ್ಲಿ ಕೋಲ್ಕತ್ತಾದಿಂದ ಹೌರಾದ (Howrah ) ಇನ್ನೊಂದು ಬದಿಗೆ ಸಾಗಿದೆ. ಕೋಲ್ಕತ್ತಾ ಮತ್ತು ಅದರ ಉಪನಗರಗಳ ಜನರಿಗೆ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಲ್ಲಿ ಇದು “ಕ್ರಾಂತಿಕಾರಿ ಹೆಜ್ಜೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ಮೆಟ್ರೋ ರೈಲ್ವೆ ಜನರಲ್ ಮ್ಯಾನೇಜರ್ ಪಿ ಉದಯ್ ಕುಮಾರ್ ರೆಡ್ಡಿ ಅವರು ಕೋಲ್ಕತ್ತಾದ ಮಹಾಕರನ್ ನಿಲ್ದಾಣದಿಂದ ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್‌ನ ಹೌರಾ ಮೈದಾನದವರೆಗೆ ಇದರಲ್ಲಿ ಪ್ರಯಾಣಿಸಿದರು.

ಇದಾದ ನಂತರ ಮತ್ತೊಂದು ರೈಲು ಕೂಡ ಅದೇ ಮಾರ್ಗವಾಗಿ ಹೌರಾ ಮೈದಾನ ನಿಲ್ದಾಣ ತಲುಪಿತು.

ಈ ವಿಚಾರವಾಗಿ ವಿಡಿಯೋ ಸಹಿತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದು, ‘ರೈಲು ನೀರಿನೊಳಗೆ ಚಲಿಸಿದೆ. ಎಂಜಿನಿಯರಿಂಗ್​ನ ಇನ್ನೊಂದು ಅದ್ಭುತ, ನೀರಿನೊಳಗೆ ರೈಲಿನ ಪ್ರಯೋಗಿಕ ಸಂಚಾರ ನಡೆದಿದೆ. ಹೂಗ್ಲಿ ನದಿಯೊಳಗಿನ ಮೆಟ್ರೋ ರೈಲು ಸುರಂಗ ಮತ್ತು ನಿಲ್ದಾಣವಿದು’ ಎಂದು ಉಲ್ಲೇಖಿಸಿದ್ದಾರೆ.

ಇದನ್ನು ಐತಿಹಾಸಿಕ ಘಟನೆ ಎಂದು ಬಣ್ಣಿಸಿದ ಮೆಟ್ರೋ ಜನರಲ್ ಮ್ಯಾನೇಜರ್, ಹೌರಾ ಮೈದಾನ ಮತ್ತು ಎಸ್‌ಪ್ಲನೇಡ್ ನಿಲ್ದಾಣದ ನಡುವೆ ಮುಂದಿನ ಏಳು ತಿಂಗಳವರೆಗೆ ಪ್ರಾಯೋಗಿಕ ಓಡಾಟಗಳನ್ನು ನಡೆಸಲಾಗುವುದು, ನಂತರ ಈ ಮಾರ್ಗದಲ್ಲಿ ನಿಯಮಿತ ಸೇವೆಗಳು ಪ್ರಾರಂಭವಾಗುತ್ತವೆ ಎಂದು ಹೇಳಿದರು. ಭೂಗತ ವಿಭಾಗದ 4.8 ಕಿಲೋಮೀಟರ್‌ನಲ್ಲಿ ಪ್ರಾಯೋಗಿಕ ಓಟಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಸ್ತರಣೆಯು ಕಾರ್ಯಾರಂಭಗೊಂಡ ನಂತರ ಭೂಭಾಗದಿಂದ 33 ಮೀಟರ್ ಆಳದಲ್ಲಿರುವ ಹೌರಾ ಮೈದಾನವು ದೇಶದ ಆಳವಾದ ಮೆಟ್ರೋ ನಿಲ್ದಾಣವಾಗಿದೆ. ಮೆಟ್ರೋ ಹೂಗ್ಲಿ ನದಿಯ ಅಡಿಯಲ್ಲಿ 520 ಮೀಟರ್ ವ್ಯಾಪ್ತಿಯನ್ನು 45 ಸೆಕೆಂಡುಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ನದಿಯ ಅಡಿಯಲ್ಲಿರುವ ಈ ಸುರಂಗವು ನೀರಿನ ಮೇಲ್ಮೈ ಮಟ್ಟದಿಂದ 32 ಮೀಟರ್ ಕೆಳಗೆ ಇದೆ ಎಂದು ಅವರು ಹೇಳಿದರು.

ಮೆಟ್ರೋ ಹೂಗ್ಲಿ ನದಿಯ ಅಡಿಯಲ್ಲಿ 520 ಮೀಟರ್ ವ್ಯಾಪ್ತಿಯನ್ನು 45 ಸೆಕೆಂಡುಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ನದಿಯ ಅಡಿಯಲ್ಲಿರುವ ಈ ಸುರಂಗವು ನೀರಿನ ಮೇಲ್ಮೈ ಮಟ್ಟದಿಂದ 32 ಮೀಟರ್ ಕೆಳಗೆ ಇದೆ ಎಂದು ಅವರು ಹೇಳಿದರು.

ಮಧ್ಯ ಕೋಲ್ಕತ್ತಾದ ಬೌಬಜಾರ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತಗಳಿಂದಾಗಿ ಒಟ್ಟು ಯೋಜನೆಯನ್ನು ಪೂರ್ಣಗೊಳಿಸುವುದು ವಿಳಂಬವಾಗಿದೆ.

ಆಗಸ್ಟ್ 31, 2019 ರಂದು, ಸುರಂಗ ಕೊರೆಯುವ ಯಂತ್ರವು (ಟಿಬಿಎಂ) ನೆಲಕ್ಕೆ ಅಪ್ಪಳಿಸಿದ್ದು ಇದು ತೀವ್ರ ನೆಲದ ಕುಸಿತಕ್ಕೆ ಮತ್ತು ಬೌಬಜಾರ್‌ನಲ್ಲಿ ಹಲವಾರು ಕಟ್ಟಡಗಳ ಕುಸಿತಕ್ಕೆ ಕಾರಣವಾಯಿತು.

ಪೂರ್ವದಲ್ಲಿ ಸೀಲ್ದಾಹ್ ಕಡೆಯಿಂದ ಮತ್ತು ಪಶ್ಚಿಮ ಭಾಗದಲ್ಲಿ ಎಸ್‌ಪ್ಲನೇಡ್ ಕಡೆಯಿಂದ ಬರುವ ಸುರಂಗಗಳನ್ನು ಸೇರುವ ಕೆಲಸದ ಸಮಯದಲ್ಲಿ  ನೀರು ಸೋರಿಕೆಯಿಂದಾಗಿ ನೆಲ ಕುಸಿತವುಂಟಾಗಿದ್ದು 2022 ಮೇ ತಿಂಗಳಲ್ಲಿ ಮತ್ತೆ ಹಲವಾರು ಮನೆಗಳು ಹಾನಿಗೊಳಗಾದವು.

ಅಕ್ಟೋಬರ್ 14, 2022 ರಂದು ಬೌಬಜಾರ್‌ನ ಮದನ್ ದತ್ತಾ ಲೇನ್‌ನಲ್ಲಿ ಭೂಗತ ನೀರಿನ ಸೋರಿಕೆಯು 12 ಕಟ್ಟಡಗಳಲ್ಲಿ ಬಿರುಕುಗಳನ್ನು ಉಂಟುಮಾಡಿತು.

ಇದನ್ನೂ ಓದಿ: Odisha: ಒಡಿಶಾದ ಝಮು ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದು ಪ್ರಾರ್ಥನೆ ಸಲ್ಲಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

ಪೂರ್ವ ಪಶ್ಚಿಮ ಮೆಟ್ರೋದ 16.6 ಕಿಮೀ ಉದ್ದದ ಪೈಕಿ, ಭೂಗತ ಕಾರಿಡಾರ್ ಹೌರಾ ಮೈದಾನ ಮತ್ತು ಫೂಲ್ಬಗಾನ್ ನಡುವೆ 10.8 ಕಿಮೀ ಸುರಂಗ ಹೂಗ್ಲಿ ನದಿಯ ಕೆಳಗೆ ಹಾದುಹೋಗುತ್ತದೆ. ಉಳಿದವು ಎಲಿವೇಟೆಡ್ ಕಾರಿಡಾರ್ ಆಗಿದೆ ಎಂದು ಕೆಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 pm, Wed, 12 April 23