ದುಬಾರಿ ಕಾರು ಬಿಟ್ಟು ಮೆಟ್ರೋ, ಆಟೋದಲ್ಲಿ ಪ್ರಯಾಣ ಮಾಡಿದ ಖ್ಯಾತ ನಟಿ ಹೇಮಾ ಮಾಲಿನಿ

Hema Malini: ಹೇಮಾ ಮಾಲಿನಿ ಅವರು ಜನಸಾಮಾನ್ಯರಂತೆ ಮುಂಬೈ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ ಆಗಿದೆ.

ದುಬಾರಿ ಕಾರು ಬಿಟ್ಟು ಮೆಟ್ರೋ, ಆಟೋದಲ್ಲಿ ಪ್ರಯಾಣ ಮಾಡಿದ ಖ್ಯಾತ ನಟಿ ಹೇಮಾ ಮಾಲಿನಿ
ಹೇಮಾ ಮಾಲಿನಿ
Follow us
ಮದನ್​ ಕುಮಾರ್​
|

Updated on: Apr 12, 2023 | 12:19 PM

ಸೆಲೆಬ್ರಿಟಿಗಳು ಬಳಿ ಐಷಾರಾಮಿ ಕಾರುಗಳ ಕಲೆಕ್ಷನ್​ ಇರುತ್ತದೆ. ಅಂಥ ಸೆಲೆಬ್ರಿಟಿಗಳು ಸಾರ್ವಜನಿಕ ಸಾರಿಗೆ ಬಳಸುವುದು ತೀರಾ ವಿರಳ. ಆಗೊಮ್ಮೆ-ಈಗೊಮ್ಮೆ ಮಾತ್ರ ಕೆಲವು ನಟ-ನಟಿಯರು ಆಟೋದಲ್ಲಿ (Auto rickshaw) ಪ್ರಯಾಣ ಮಾಡಿ ಗಮನ ಸೆಳೆಯುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ನಟಿ ಹೇಮಾ ಮಾಲಿನಿ. ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೇಮಾ ಮಾಲಿನಿ (Hema Malini) ಅವರು ರಾಜಕೀಯದಲ್ಲೂ ಗೆಲುವು ಕಂಡಿದ್ದಾರೆ. ಸಂಸದೆ ಆಗಿರುವ ಅವರು ಈಗ ಜನಸಾಮಾನ್ಯರಂತೆ ಮೆಟ್ರೋ ಮತ್ತು ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಿದ್ದಾರೆ. ಮುಂಬೈ ಮಹಾನಗರದ ಟ್ರಾಫಿಕ್​ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೆಟ್ರೋ (Mumbai Metro) ಮತ್ತು ಆಟೋ ಪ್ರಯಾಣದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಮಂಗಳವಾರ (ಏಪ್ರಿಲ್​ 11) ಜುಹೂನಿಂದ ದಹಿಸರ್​ ಏರಿಯಾಗೆ ಕಾರಿನಲ್ಲಿ ತೆರಳಲು ಹೇಮಾ ಮಾಲಿನಿ ಅವರಿಗೆ 2 ಗಂಟೆ ಸಮಯ ಹಿಡಿದಿತ್ತು. ಹಾಗಾಗಿ ವಾಪಸ್​ ಬರುವಾಗ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದರು. ಮೆಟ್ರೋದಲ್ಲಿ ಪ್ರಯಾಣಿಸಿದ ನಂತರ ಆಟೋ ಹಿಡಿದರು. ಇದರಿಂದ ಕೇವಲ ಅರ್ಧ ಗಂಟೆಯಲ್ಲಿ ಮನೆ ತಲುಪಿದರು. ಈ ಅನುಭವ ಚೆನ್ನಾಗಿತ್ತು ಎಂದು ಹೇಮಾ ಮಾಲಿನಿ ವಿವರಿಸಿದ್ದಾರೆ.

ಇದನ್ನೂ ಓದಿ
Image
ಹೇಮಾ ಮಾಲಿನಿ ಆಗುವುದು ತುಂಬಾ ಕಷ್ಟ: ಜಯಂತ್ ಚೌಧರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಥುರಾ ಸಂಸದೆ
Image
ಬಿಜೆಪಿ ಸೇರಿದರೆ ಹೇಮಾ ಮಾಲಿನಿ ಮಾಡುತ್ತಾರೆಂದರು, ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ: ಜಯಂತ್ ಚೌಧರಿ
Image
Hema Malini: ಕೆನ್ನೆಯನ್ನು ರಸ್ತೆಗೆ ಹೋಲಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ ಸಂಸದೆ ಹೇಮಾ ಮಾಲಿನಿ
Image
ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ್ದಕ್ಕೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ಸಚಿವ ಗುಲಾಬ್​​ರಾವ್ ಪಾಟಿಲ್

ಇದನ್ನೂ ಓದಿ: ಹೇಮಾ ಮಾಲಿನಿ ಆಗುವುದು ತುಂಬಾ ಕಷ್ಟ: ಜಯಂತ್ ಚೌಧರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಥುರಾ ಸಂಸದೆ

ಹೇಮಾ ಮಾಲಿನಿ ಅವರು ಜನಸಾಮಾನ್ಯರಂತೆ ಮುಂಬೈ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದು ನೋಡಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ ಆಗಿದೆ. ಅನೇಕರು ಬಂದು ಸೆಲ್ಫಿ ತೆಗೆದುಕೊಂಡಿದ್ದಾರೆ. ಮೆಟ್ರೋ ಆವರಣದಲ್ಲಿ ಹೇಮಾ ಮಾಲಿನಿ ಅವರು ಫೋಟೋ ಕ್ಲಿಕ್ಕಿಸಿಕೊಂಡು ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಟೋದಲ್ಲಿ ಪ್ರಯಾಣ ಮಾಡುವಾಗ ಹೇಮಾ ಮಾಲಿನಿ ಅವರಿಗೆ ಭಯ ಆಗಿದೆ. ಇತರೆ ವಾಹನಗಳು ಅಡ್ಡಾದಿಡ್ಡಿ ಚಲಿಸುವುದು ನೋಡಿ ಅವರು ಕೊಂಚ ಗಾಬರಿ ಆಗಿದ್ದಾರೆ. ಆದರೂ ಈ ಅನುಭವ ಇಂಟರೆಸ್ಟಿಂಗ್​ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೋಗಳಿಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಮನೆಗೆ ಹೋಗಿ ಆಟೋದಿಂದ ಇಳಿದಾಗ ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿಗೆ ಅಚ್ಚರಿ ಆಯಿತು ಎಂದು ಹೇಮಾ ಮಾಲಿನಿ ತಿಳಿಸಿದ್ದಾರೆ.

ಈ ಮೊದಲು ಸೋನು ಸೂದ್​ ಅವರು ಲೋಕಲ್​ ರೈಲಿನಲ್ಲಿ ಪ್ರಯಾಣಿಸಿ ಸುದ್ದಿ ಆಗಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಕೂಡ ಮುಂಬೈನಲ್ಲಿ ಆಟೋ ರಿಕ್ಷಾ ಪ್ರಯಾಣ ಮಾಡಿದ್ದರು. ರವೀನಾ ಟಂಡನ್​ ಕೂಡ ತಮ್ಮ ಮಕ್ಕಳ ಜೊತೆ ಆಟೋದಲ್ಲಿ ಪ್ರಯಾಣಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್