AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಣ್​ ಜೋಹರ್​ ಜೊತೆ ಅಯಾನ್​ ಮುಖರ್ಜಿ ಮುನಿಸು; ‘ಬ್ರಹ್ಮಾಸ್ತ್ರ’ ತಂಡದ ಕಿರಿಕ್​ ಬಹಿರಂಗ

Karan Johar | Ayan Mukerji: ಅಯಾನ್​ ಮುಖರ್ಜಿ ಜೊತೆಗಿನ ವೈಮನಸ್ಸಿನ ಬಗ್ಗೆ ಕರಣ್​ ಜೋಹರ್​ ಅವರು ಮೌನ ಮುರಿದಿಲ್ಲ. ಅವರಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಕರಣ್​ ಜೋಹರ್​ ಜೊತೆ ಅಯಾನ್​ ಮುಖರ್ಜಿ ಮುನಿಸು; ‘ಬ್ರಹ್ಮಾಸ್ತ್ರ’ ತಂಡದ ಕಿರಿಕ್​ ಬಹಿರಂಗ
ಕರಣ್ ಜೋಹರ್, ಅಯಾನ್ ಮುಖರ್ಜಿ
ಮದನ್​ ಕುಮಾರ್​
|

Updated on: Apr 12, 2023 | 7:15 AM

Share

ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್ (Karan Johar) ಅವರು ಬಾಲಿವುಡ್​ನಲ್ಲಿ ಸಖತ್​ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಅವರನ್ನು ಎದುರು ಹಾಕಿಕೊಂಡರೆ ಹಿಂದಿ ಚಿತ್ರರಂಗದಲ್ಲಿ ಬೆಳೆಯುವುದು ಕಷ್ಟ ಎನ್ನುವ ಮಾತಿದೆ. ಕರಣ್​ ಜೋಹರ್​ ಕೃಪೆ ಇದ್ದರೆ ಎಂಥವರು ಕೂಡ ಸ್ಟಾರ್​ ಆಗುತ್ತಾರೆ ಎಂಬುದು ಬಿ-ಟೌನ್​ ಗಲ್ಲಿಯಲ್ಲಿ ಕೇಳಿಬರುವ ಮಾತು. ಹಾಗಿದ್ದರೂ ಕೂಡ ಕರಣ್​ ಜೋಹರ್​ ಜೊತೆ ಅನೇಕರು ಕಿರಿಕ್​ ಮಾಡಿಕೊಂಡ ಉದಾಹರಣೆ ಇದೆ. ಅದಕ್ಕೆ ಹೊಸ ಸೇರ್ಪಡೆ ನಿರ್ದೇಶಕ ಅಯಾನ್​ ಮುಖರ್ಜಿ. 2022ರಲ್ಲಿ ತೆರೆಕಂಡ ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ಅಯಾನ್​ ಮುಖರ್ಜಿ (Ayan Mukerji) ಅವರು ದೊಡ್ಡ ಸಕ್ಸಸ್​ ಕಂಡರು. ಆ ಚಿತ್ರಕ್ಕೆ ಬಂಡವಾಳ ಹೂಡಿದವರಲ್ಲಿ ಕರಣ್​ ಜೋಹರ್​ ಕೂಡ ಪ್ರಮುಖರು. ಆದರೆ ಈಗ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಸೀಕ್ವೆಲ್​ (Brahmastra Sequel) ಸಿದ್ಧವಾಗುತ್ತಿದ್ದು, ಅದರಲ್ಲಿ ಕರಣ್​ ಜೋಹರ್​ ಪಾಲುದಾರಿಕೆ ಇಲ್ಲವೇ ಎಂಬ ಅನುಮಾನ ಮೂಡಿದೆ.

ಕೆಲವೇ ದಿನಗಳ ಹಿಂದೆ ಅಯಾನ್​ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ’ ಸೀಕ್ವೆಲ್​ಗಳ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದರು. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದರು. ‘ಬ್ರಹ್ಮಾಸ್ತ್ರ: ಪಾರ್ಟ್​ 2’ ಸಿನಿಮಾ 2026ರ ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್​ 3’ ಚಿತ್ರ 2027ರ ಡಿಸೆಂಬರ್​ಗೆ ತೆರೆಕಾಣಲಿದೆ. ಆದರೆ ಈ ಮಾಹಿತಿಯನ್ನು ಹಂಚಿಕೊಳ್ಳುವಾಗ ಕರಣ್​ ಜೋಹರ್​ ಹೆಸರನ್ನು ಅಯಾನ್​ ಮುಖರ್ಜಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ! ಅದೇ ಈಗ ಕಿರಿಕ್​ಗೆ ಕಾರಣ ಆಗಿದೆ.

ಇದನ್ನೂ ಓದಿ: ವೈಮನಸ್ಸು ಬದಿಗಿಟ್ಟು ಭೇಟಿ ಆದ ಕರಣ್ ಜೋಹರ್-ಕಾರ್ತಿಕ್ ಆರ್ಯನ್​; ಆದರೂ ತಪ್ಪಲಿಲ್ಲ ಟೀಕೆ

ಇದನ್ನೂ ಓದಿ
Image
Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Karan Johar: ಕರಣ್​ ಜೋಹರ್​ ಮಕ್ಕಳ ವಿಡಿಯೋ ವೈರಲ್​; ವಿಮಾನ ನಿಲ್ದಾಣದಲ್ಲಿ ನಮಸ್ತೆ ಮಾಡೋದು ಕಲಿಸಿದ ನಿರ್ಮಾಪಕ
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ

ಮೂಲಗಳ ಪ್ರಕಾರ, ‘ಬ್ರಹ್ಮಾಸ್ತ್ರ’ ಚಿತ್ರದ ಬೌದ್ಧಿಕ ಆಸ್ತಿ ಹಕ್ಕುಗಳು ನಿರ್ದೇಶಕ ಅಯಾನ್​ ಮುಖರ್ಜಿ ಬಳಿ ಇದೆ. ಹಾಗಾಗಿ ಅವರು ಸೀಕ್ವೆಲ್​ಗಳನ್ನು ಮಾಡಲು ಕರಣ್​ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಜೊತೆ ಕೈ ಜೋಡಿಸುವ ಬದಲು ಬೇರೆ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸದ್ಯಕ್ಕಂತೂ ಕರಣ್​ ಜೋಹರ್​ ಅವರು ಮೌನ ಮುರಿದಿಲ್ಲ. ಅವರಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕರಿಯರ್ ನಾಶ ಮಾಡಲು ಹೊರಟಿದ್ದ ಕರಣ್ ಜೋಹರ್; ‘ಅವರಿಗೆ ಅದೇ ಕೆಲಸ’ ಎಂದ ಕಂಗನಾ

ಅಯಾನ್​ ಮುಖರ್ಜಿ ಅವರು ‘ವಾರ್​ 2’ ಸಿನಿಮಾ ನಿರ್ದೇಶಿಸಲು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರು ‘ಯಶ್​ ರಾಜ್​ ಫಿಲ್ಮ್ಸ್​’ ಜೊತೆ ಕೈ ಜೋಡಿಸಲಿದ್ದಾರೆ. ಆದರೆ ‘ಬ್ರಹ್ಮಾಸ್ತ್ರ’ ಸೀಕ್ವೆಲ್​ಗಳನ್ನು ನಿರ್ದೇಶಿಸಿದ ನಂತರವೇ ಬೇರೆ ಸಿನಿಮಾಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಕರಣ್​ ಜೋಹರ್​ ಪಟ್ಟು ಹಿಡಿದರು ಎನ್ನಲಾಗಿದೆ. ಅದೇ ಕಾರಣದಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತು ಎಂಬ ಸುದ್ದಿ ಕೂಡ ಹಬ್ಬಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು