AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Celina Jaitley: ‘ಅಪ್ಪ ಮತ್ತು ಮಗನ ಜತೆ ಮಲಗಿದ್ದ ನಟಿ’ ಎಂದು ಅಶ್ಲೀಲ ಟ್ವೀಟ್​ ಮಾಡಿದ ವ್ಯಕ್ತಿಗೆ ಸೆಲಿನಾ ಜೇಟ್ಲಿ ತಿರುಗೇಟು

Umair Sandhu: ಸೆಲಿನಾ ಜೇಟ್ಲಿ ಮೇಲೆ ಉಮೈರ್​ ಸಂಧು ಆಪಾದನೆ ಹೊರಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್​ ಸಂಸ್ಥೆಗೆ ಸೆಲಿನಾ ಮನವಿ ಮಾಡಿದ್ದಾರೆ.

Celina Jaitley: ‘ಅಪ್ಪ ಮತ್ತು ಮಗನ ಜತೆ ಮಲಗಿದ್ದ ನಟಿ’ ಎಂದು ಅಶ್ಲೀಲ ಟ್ವೀಟ್​ ಮಾಡಿದ ವ್ಯಕ್ತಿಗೆ ಸೆಲಿನಾ ಜೇಟ್ಲಿ ತಿರುಗೇಟು
ಸೆಲಿನಾ ಜೇಟ್ಲಿ
ಮದನ್​ ಕುಮಾರ್​
|

Updated on: Apr 12, 2023 | 1:44 PM

Share

ವಿದೇಶಿ ಸೆನ್ಸಾರ್​ ಬೋರ್ಡ್​ ಸದಸ್ಯ ಹಾಗೂ ವಿಮರ್ಶಕ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವ ಉಮೈರ್​ ಸಂಧು (Umair Sandhu) ಅನೇಕ ಸೆಲೆಬ್ರಿಟಿಗಳ ವಿರೋಧ ಕಟ್ಟಿಕೊಂಡಿದ್ದಾನೆ. ಅದಕ್ಕೆ ಕಾರಣ ಆಗಿರುವುದು ಆತನ ವಿವಾದಾತ್ಮಕ ಟ್ವೀಟ್​ಗಳು. ಟ್ವಿಟರ್​ನಲ್ಲಿ ಆ್ಯಕ್ಟೀವ್​ ಆಗಿರುವ ಉಮೈರ್​ ಸಂಧು ಈಗ ನಟಿ ಸೆಲಿನಾ ಜೇಟ್ಲಿ (Celina Jaitley) ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದಾನೆ. ನಟರಾದ ಫಿರೋಜ್​ ಖಾನ್​ ಮತ್ತು ಫರ್ದೀನ್​ ಖಾನ್​ (Fardeen Khan) ಜೊತೆ ಸೆಲಿನಾ ಜೇಟ್ಲಿ ಸಂಬಂಧ ಹೊಂದಿದ್ದರು ಎಂದು ಉಮೈರ್​ ಸಂಧು ಪೋಸ್ಟ್​ ಮಾಡಿದ್ದಾನೆ. ಇದನ್ನು ಕಂಡು ಸೆಲಿನಾ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಮರ್ಶಕನಿಗೆ ಅವರು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು ಕೂಡ ಉಮೈರ್​ ಸಂಧು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್​ನ ಹಲವಾರು ಸಿನಿಮಾಗಳಲ್ಲಿ ನಟಿಸಿ ಫಿರೋಜ್​ ಖಾನ್​ ಫೇಮಸ್​ ಆಗಿದ್ದರು. ನಿರ್ಮಾಪಕನಾಗಿಯೂ ಅವರು ಸಕ್ರಿಯರಾಗಿದ್ದರು. ಅವರ ಪುತ್ರ ಫರ್ದೀನ್​ ಖಾನ್​ ಕೂಡ ಜನಪ್ರಿಯತೆ ಹೊಂದಿದ್ದಾರೆ. ‘ಈ ತಂದೆ ಮತ್ತು ಮಗನ ಜೊತೆ ಹಲವು ಬಾರಿ ಮಲಗಿದ ಏಕೈಕ ನಟಿ ಸೆಲಿನಾ ಜೆಟ್ಲಿ’ ಎಂದು ಉಮೈರ್​ ಸಂಧು ಆರೋಪ ಮಾಡಿದ್ದಾನೆ. ಈ ಟ್ವೀಟ್​ ವೈರಲ್​ ಆಗಿದೆ.

ಇದನ್ನೂ ಓದಿ
Image
Yash: ಯಶ್, ಶ್ರೀನಿಧಿ ಶೆಟ್ಟಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಮರ್ಶಕನಿಗೆ ಕ್ಲಾಸ್
Image
Prabhas Engagement: ಪ್ರಭಾಸ್​ ಜತೆ ಕೃತಿ ಸನೋನ್​ ನಿಶ್ಚಿತಾರ್ಥ ಆಗಲಿದೆ ಅಂತ ಬ್ರೇಕಿಂಗ್ ನ್ಯೂಸ್​ ನೀಡಿದ ಉಮೈರ್​ ಸಂಧು
Image
Pathaan Review: ‘ಪಠಾಣ್​’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್​ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್​ ಆದರ್ಶ್​
Image
ರಣವೀರ್​ ಸಿಂಗ್​-ದೀಪಿಕಾ ಬೇರೆ ಆಗ್ತಾರಾ? ಫ್ಯಾನ್ಸ್​ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್​

2003ರಲ್ಲಿ ‘ಜಾನ್​ಶೀನ್​’ ಸಿನಿಮಾ ತೆರೆಕಂಡಿತ್ತು. ಸೆಲಿನಾ ಜೇಟ್ಲಿ ನಟಿಸಿದ ಮೊದಲ ಸಿನಿಮಾ ಅದು. ಆ ಚಿತ್ರಕ್ಕೆ ಫಿರೋಜ್​ ಖಾನ್​ ಬಂಡವಾಳ ಹೂಡಿದ್ದರು. ಅವರ ಪುತ್ರ ಫರ್ದೀನ್​ ಖಾನ್​ ಹೀರೋ ಆಗಿ ನಟಿಸಿದ್ದರು. ಆ ಬಳಿಕ ಸೆಲಿನಾ ಜೇಟ್ಲಿ ಅವರಿಗೆ ಬಾಲಿವುಡ್​ನಲ್ಲಿ ಹಲವು ಅವಕಾಶಗಳು ಸಿಕ್ಕವು. ಇಷ್ಟು ವರ್ಷಗಳ ನಂತರ ಉಮೈರ್​ ಸಂಧು ಅವರು ವಿನಾ ಕಾರಣವಾಗಿ ಸೆಲಿನಾ ಜೇಟ್ಲಿ ಮೇಲೆ ಆಪಾದನೆ ಹೊರಿಸಿದ್ದಾರೆ.

‘ಮಿಸ್ಟರ್​ ಸಂಧು.. ಇದನ್ನು ಪೋಸ್ಟ್​ ಮಾಡುವುದರಿಂದ ನಿನಗೆ ಗಂಡಸ್ತನ ಬಂದಿದೆ ಎನಿಸುತ್ತದೆ. ಅದರ ಬದಲು ನಿನ್ನ ನಪುಂಸಕತ್ವನ್ನು ಗುಣಪಡಿಸಿಕೊಳ್ಳಲು ಬೇರೆ ಮಾರ್ಗ ಇದೆ. ವೈದ್ಯರ ಬಳಿಗೆ ಹೋಗಬಹುದು. ಆ ಮಾರ್ಗ ಪ್ರಯತ್ನಿಸು’ ಎಂದು ಸೆಲಿನಾ ಜೇಟ್ಲಿ ಖಡಕ್​ ಆಗಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ಇಂಥ ಟ್ವೀಟ್​ ಮಾಡಿದ ಉಮೈರ್​ ಸಂಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್​ ಸಂಸ್ಥೆಗೆ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Celina Jaitly: 3 ಮಕ್ಕಳ ತಾಯಿ ಸೆಲಿನಾ ಜೇಟ್ಲಿಗೆ ಹೊಸ ಮದುವೆ ಪ್ರಪೋಸಲ್​; ‘ಗಂಡನನ್ನು ಕೇಳಿ ಹೇಳ್ತೀನಿ’ ಎಂದ ನಟಿ

ಸೆಲಿನಾ ಜೇಟ್ಲಿ ಅವರು ಈಗ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಒಂದು ಕಾಲದಲ್ಲಿ ನಟಿಯಾಗಿ, ಮಾಡೆಲ್​ ಆಗಿ ಬ್ಯುಸಿ ಆಗಿದ್ದ ಅವರು ಈಗ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮೂವರು ಗಂಡು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೂ ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಅವರು ಸೋಶಿಯಲ್​ ಮೀಡಿಯಾ ಬಳಸುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ