Celina Jaitly: 3 ಮಕ್ಕಳ ತಾಯಿ ಸೆಲಿನಾ ಜೇಟ್ಲಿಗೆ ಹೊಸ ಮದುವೆ ಪ್ರಪೋಸಲ್; ‘ಗಂಡನನ್ನು ಕೇಳಿ ಹೇಳ್ತೀನಿ’ ಎಂದ ನಟಿ
ಸೆಲಿನಾ ಜೇಟ್ಲಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿರುವ ಅಭಿಮಾನಿಯೊಬ್ಬರು ವಿಚಿತ್ರವಾದ ಹಂಬಲ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರು ಈ ರೀತಿ ಉತ್ತರ ನೀಡಿದ್ದಾರೆ.
ನಟಿ ಸೆಲಿನಾ ಜೇಟ್ಲಿ (Celina Jaitly) ಅವರು ಈಗ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಒಂದು ಕಾಲದಲ್ಲಿ ನಟಿಯಾಗಿ, ಮಾಡೆಲ್ ಆಗಿ ಬ್ಯುಸಿ ಆಗಿದ್ದ ಅವರು ಈಗ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮೂವರು ಗಂಡು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೂ ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಅವರು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಟ್ವಿಟರ್ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರ ನೀಡುತ್ತಾರೆ. ಇತ್ತೀಚೆಗೆ ಸೆಲಿನಾ ಜೇಟ್ಲಿ ಅವರಿಗೆ ಅಭಿಮಾನಿಯೊಬ್ಬರಿಂದ ಮದುವೆ ಪ್ರಪೋಸಲ್ (Marriage Propose) ಬಂದಿದೆ. ಅದಕ್ಕೆ ಅವರು ಫನ್ನಿಯಾಗಿ ಉತ್ತರ ನೀಡಿದ್ದಾರೆ. ಅವರ ಈ ಟ್ವೀಟ್ ಈಗ ವೈರಲ್ ಆಗಿದೆ.
ಅಭಿಮಾನಿಯ ವಿಚಿತ್ರ ಹಂಬಲ:
ಸೆಲಿನಾ ಜೇಟ್ಲಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿರುವ ಅಭಿಮಾನಿಯೊಬ್ಬರು ವಿಚಿತ್ರವಾದ ಹಂಬಲ ವ್ಯಕ್ತಪಡಿಸಿದ್ದಾರೆ. ‘ಸೆಲಿನಾ ಜೇಟ್ಲಿ ಅವರೇ ನಿಮಗೆ ಶುಭವಾಗಲಿ. ನನ್ನ ಆರೋಗ್ಯ ಸರಿಯಿಲ್ಲ. ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ನನ್ನ ಆರೋಗ್ಯ ಇನ್ನಷ್ಟು ಹದಗೆಡುವುದಕ್ಕೂ ಮುನ್ನ ನೀವು ನನ್ನನ್ನು ಮದುವೆ ಆಗಿ. ಮನೆ ಅಳಿಯನಾಗಿ ಬರಲು ನಾನು ಸಿದ್ಧನಿದ್ದೇನೆ. ನನ್ನ ಜೀವನ ಮತ್ತು ಆರೋಗ್ಯವನ್ನು ದಯವಿಟ್ಟು ಕಾಪಾಡಿ. ಉತ್ತರ ನೀಡಿ’ ಎಂದು ಕೊಲ್ಕತ್ತಾದ ಅಭಿಮಾನಿ ಮನವಿ ಮಾಡಿಕೊಂಡಿದ್ದಾನೆ.
ಅಭಿಮಾನಿಯ ಈ ಮನವಿಗೆ ಸೆಲಿನಾ ಜೇಟ್ಲಿ ಅವರು ಫನ್ನಿಯಾಗಿ ಉತ್ತರ ನೀಡಿದ್ದಾರೆ. ‘ನನ್ನ ಗಂಡ ಮತ್ತು ಮೂವರು ಮಕ್ಕಳನ್ನು ಕೇಳಿಕೊಂಡು ನಂತರ ನಿಮಗೆ ಉತ್ತರಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರ ಈ ಉತ್ತರ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಟಿ ಮೃಣಾಲ್ ಠಾಕೂರ್ಗೆ ಬಂತು ಮದುವೆ ಪ್ರಪೋಸಲ್; ಒಂದೇ ಮಾತಲ್ಲಿ ರಿಜೆಕ್ಟ್ ಮಾಡಿದ ನಟಿ
ಸೆಲಿನಾ ಜೇಟ್ಲಿ ಅವರಿಗೆ ಈಗ 41 ವರ್ಷ ವಯಸ್ಸು. ಆಸ್ಟ್ರೇಲಿಯಾದ ಉದ್ಯಮಿ ಪೀಟರ್ ಹಾಗ್ ಜೊತೆ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಮೂವರು ಗಂಡು ಮಕ್ಕಳ ತಾಯಿಯಾಗಿರುವ ಸೆಲೀನಾ ಜೇಟ್ಲಿ ಅವರು ಇತ್ತೀಚೆಗೆ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ಅವರು ಸೆಟ್ಲ್ ಆಗಿದ್ದಾರೆ. ಮಾಡೆಲ್ ಆಗಿರುವ ಅವರು ಇಂದಿಗೂ ಕೆಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ. ಆ ಕೆಲಸಗಳ ಸಲುವಾಗಿ ಆಗಾಗ ಸಿಂಗಾಪುರ್ ಮತ್ತು ದುಬೈಗೆ ಭೇಟಿ ನೀಡುತ್ತಾರೆ.
I will ask my husband and three kids and revert ! https://t.co/jIEXG8pEVD
— Celina Jaitly (@CelinaJaitly) April 6, 2023
2001ರಲ್ಲಿ ಸೆಲಿನಾ ಜೇಟ್ಲಿ ಅವರು ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು. 2003ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ‘ನೋ ಎಂಟ್ರಿ’, ‘ಗೋಲ್ಮಾಲ್ ರಿಟರ್ನ್ಸ್’ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ಆದರೆ ನಂತರದ ದಿನಗಳಲ್ಲಿ ತೆರೆಮರೆಗೆ ಸರಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.