Kriti Kharbanda: ಐಶಾರಾಮಿ ಕಾರು ಖರೀದಿಸಿದ ಗೂಗ್ಲಿ ಚೆಲುವೆ ಕೃತಿ, ಕಾರಿನ ಬೆಲೆ ಎಷ್ಟು? ವಿಶೇಷತೆಗಳೇನು?

ಗೂಗ್ಲಿ ಚೆಲುವೆ ಕೃತಿ ಕರಬಂಧ ತಮಗಾಗಿ ಹೊಸ ಐಶಾರಾಮಿ ಕಾರೊಂದನ್ನು ಖರೀದಿಸಿದ್ದಾರೆ. ಕಾರು ಯಾವುದು? ಬೆಲೆ ಎಷ್ಟು? ಕಾರಿನ ವಿಶೇಷತೆಗಳೇನು? ಇಲ್ಲಿದೆ ವಿವರ

Kriti Kharbanda: ಐಶಾರಾಮಿ ಕಾರು ಖರೀದಿಸಿದ ಗೂಗ್ಲಿ ಚೆಲುವೆ ಕೃತಿ, ಕಾರಿನ ಬೆಲೆ ಎಷ್ಟು? ವಿಶೇಷತೆಗಳೇನು?
ಕೃತಿ ಕರಬಂಧ
Follow us
ಮಂಜುನಾಥ ಸಿ.
|

Updated on: Apr 06, 2023 | 6:44 PM

ಸಿನಿಮಾ ತಾರೆಯರಿಗೆ ಕಾರು (Car) ಖರೀದಿ ಎಂಬುದು ಬಟ್ಟೆ ಖರೀದಿಯಂತೆ ಸರಳ, ಸುಲಭವಾಗಿಬಿಟ್ಟಿದೆ. ಕೆಲವು ನಟ-ನಟಿಯರಂತೂ ವರ್ಷಕ್ಕೊಂದರಂತೆ ಐಶಾರಾಮಿ ಕಾರುಗಳನ್ನು ಖರೀದಿಸುವುದೂ ಇದೆ. ಅದರಲ್ಲೂ ಈ ಕಾರು ಹುಚ್ಚು ನಟರಿಗೆ ತುಸು ಹೆಚ್ಚು. ಆದರೆ ಇದೀಗ ನಟಿ ಕೃತಿ ಕರಬಂಧ (Kriti Kharbanda) ಹೊಸದೊಂದು ಐಶಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿ ತಮ್ಮ ಬಾಯ್​ಫ್ರೆಂಡ್​ ಜೊತೆ ಸೇರಿ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ. ಕಾರು ಯಾವುದು? ಬೆಲೆ ಎಷ್ಟು? ಕಾರಿನ ವಿಶೇಷತೆಗಳೇನು? ಇಲ್ಲಿ ತಿಳಿಯಿರಿ…

ಯಶ್ (Yash) ಜೊತೆಗೆ ಗೂಗ್ಲಿ (Googly) ಸೇರಿದಂತೆ ಚಿರು, ಪ್ರೇಮ್ ಅಡ್ಡ, ಮಾಸ್ತಿ ಗುಡಿ, ದಳಪತಿ ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂಧ ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿಯು ಬಿಳಿ ಬಣ್ಣದ ರೇಂಜ್ ರೋವರ್ ವೆಲಾರ್ ಹೆಸರಿನ ಐಶಾರಾಮಿ ಕಾರು ಖರೀದಿಸಿದ್ದಾರೆ. ಲ್ಯಾಂಡ್ ರೋವರ್ ಕಂಪೆನಿಯ ಈ ಕಾರಿನ ಆನ್​ ರೋಡ್ ಬೆಲೆ 1.07 ಕೋಟಿ ರುಪಾಯಿಗಳು!

ಹಲವು ಐಶಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಕಾರಿನಲ್ಲಿ 1999 ಸಿಸಿ ಪವರ್​ನ ಎಂಜಿನ್ ಇದ್ದು ಕೆಲವೇ ಸೆಕೆಂಡುಗಳಲ್ಲಿ ನೂರು ಕಿ.ಮೀ ವೇಗವನ್ನು ತಲುಪಲಿದೆ ಈ ಕಾರು. ಆನ್​ರೋಡ್ ಹಾಗೂ ಆಫ್​ರೋಡ್ ಎರಡೂ ಬಳಕೆಗೆ ನಿರ್ಮಿಸಲಾಗಿರುವ ಈ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪ್ಯಾನರಾಮಿಕ್ ಸನ್ ರೂಫ್, ಮೆಮೊರಿ ಸೀಟ್, 360 ಡಿಗ್ರಿ ಕ್ಯಾಮೆರಾ, ಅಡ್ಜೆಸ್ಟೆಬಲ್ ಡ್ಯೂಯೆಲ್ ಸ್ಕ್ರೀನ್​ಗಳು, ಡಿಜಿಟಲ್ ಟೆಕೊಮೀಟರ್, ಆರು ಏರ್​ಬ್ಯಾಗ್​ಗಳು ಇನ್ನೂ ಹಲವು ಐಶಾರಾಮಿ ಸೌಲಭ್ಯಗಳನ್ನು ಈ ಕಾರು ಒಳಗೊಂಡಿದೆ. ಈ ಹಿಂದೆ ಹ್ಯೂಡಾಯ್​ನ ಕ್ರೆಟಾ ಕಾರನ್ನು ಕೃತಿ ಬಳಸುತ್ತಿದ್ದರು.

ಕೃತಿ ಕರಬಂಧ ಕೆಲವೇ ದಿನಗಳಲ್ಲಿ ತಮ್ಮ ಬಾಯ್​ಫ್ರೆಂಡ್ ಪುಲ್ತಿಕ್ ಸಾಮ್ರಾಟ್ ಅವರನ್ನು ವಿವಾಹವಾಗಲಿದ್ದಾರೆ. ಈ ಯುವಜೋಡಿ ತಮ್ಮ ಸಂಬಂಧವನ್ನು ಗುಟ್ಟಾಗಿ ಇಡದೆ ಬಹಿರಂಗವಾಗಿಯೇ ತಮ್ಮ ಪ್ರೀತಿ-ಪ್ರೇಮದ ಬಗ್ಗೆ ಹೇಳಿಕೊಳ್ಳುತ್ತಾ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?

ನವ ದೆಹಲಿಯ ಚೆಲುವೆ ಕೃತಿ ಕರಬಂಧ ನಟನೆಗೆ ಪದಾರ್ಪಣೆ ಮಾಡಿದ್ದು ತೆಲುಗಿನ ಬೋನಿ ಸಿನಿಮಾದ ಮೂಲಕ ಎರಡನೇ ಸಿನಿಮಾ ಕನ್ನಡದ ಚಿರು ಆ ಬಳಿಕ ಹಲವು ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. ಅದರಲ್ಲಿಯೂ ಗೂಗ್ಲಿ ಸಿನಿಮಾದ ಅವರ ಪಾತ್ರವನ್ನು ಕನ್ನಡ ಸಿನಿಪ್ರೇಮಿಗಳು ಮರೆಯುವಂತಿಲ್ಲ. 2018 ರ ದಳಪತಿ ಸಿನಿಮಾ ಬಳಿಕ ಕನ್ನಡದಲ್ಲಿ ನಟಿಸಿಲ್ಲ ಕೃತಿ ಕರಬಂಧ ಮಾತ್ರವಲ್ಲ 2021 ರ ಬಳಿಕ ಸಿನಿಮಾ ರಂಗದಿಂದ ತುಸು ದೂರವೇ ಉಳಿದಿದ್ದಾರೆ. ಮದುವೆಯಾಗುತ್ತಿರುವ ಕಾರಣದಿಂದಲೇ ಕೃತಿ ಕರಬಂಧ ಸಿನಿಮಾಗಳಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ