Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas Engagement: ಪ್ರಭಾಸ್​ ಜತೆ ಕೃತಿ ಸನೋನ್​ ನಿಶ್ಚಿತಾರ್ಥ ಆಗಲಿದೆ ಅಂತ ಬ್ರೇಕಿಂಗ್ ನ್ಯೂಸ್​ ನೀಡಿದ ಉಮೈರ್​ ಸಂಧು

Prabhas | Kriti Sanon: ‘ಮುಂದಿನ ವಾರ ಮಾಲ್ಡೀವ್ಸ್​ನಲ್ಲಿ ಪ್ರಭಾಸ್​ ಮತ್ತು ಕೃತಿ ಸನೋನ್​ ಅವರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ತುಂಬ ಖುಷಿಯಾಗುತ್ತಿದೆ’ ಎಂದು ಉಮೈರ್​ ಸಂಧು ಟ್ವೀಟ್​ ಮಾಡಿದ್ದಾರೆ.

Prabhas Engagement: ಪ್ರಭಾಸ್​ ಜತೆ ಕೃತಿ ಸನೋನ್​ ನಿಶ್ಚಿತಾರ್ಥ ಆಗಲಿದೆ ಅಂತ ಬ್ರೇಕಿಂಗ್ ನ್ಯೂಸ್​ ನೀಡಿದ ಉಮೈರ್​ ಸಂಧು
ಪ್ರಭಾಸ್, ಕೃತಿ ಸನೋನ್
Follow us
ಮದನ್​ ಕುಮಾರ್​
|

Updated on:Feb 07, 2023 | 4:57 PM

ಬಾಲಿವುಡ್​ನಲ್ಲೀಗ ಮದುವೆ ಸೀಸನ್​ ಚಾಲ್ತಿಯಲ್ಲಿದೆ. ಹಲವು ಸ್ಟಾರ್​ ಸೆಲೆಬ್ರಿಟಿಗಳು ಹಸೆಮಣೆ ಏರುತ್ತಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ ಅವರ ಮದುವೆ ಕಾರ್ಯಗಳು ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿವೆ. ಈ ನಡುವೆ ಪ್ರಭಾಸ್​ (Prabhas) ಮತ್ತು ಕೃತಿ ಸನೋನ್​ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಶೀಘ್ರದಲ್ಲೇ ಅವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಸ್ವಯಂ ಘೋಷಿತ ವಿಮರ್ಶಕ ಉಮೈರ್​ ಸಂಧು (Umair Sandhu) ಟ್ವೀಟ್​ ಮಾಡಿದ್ದಾರೆ. ಈ ಸುದ್ದಿ ಕೇಳಿ ಕೆಲವರು ಖುಷಿಯಾಗಿದ್ದಾರೆ. ಇನ್ನೂ ಕೆಲವರು ಇದು ಶುದ್ಧ ಸುಳ್ಳು ಎಂದು ನಿರ್ಲಕ್ಷ್ಯ ತೋರಿದ್ದಾರೆ.

ಪ್ರಭಾಸ್​ ಮತ್ತು ಕೃತಿ ಸನೋನ್​ ಅವರು ‘ಆದಿಪುರುಷ್​’ ಸಿನಿಮಾದಲ್ಲಿ ರಾಮ-ಸೀತೆಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಅದರ ಪರಿಣಾಮವಾಗಿ ಇಬ್ಬರ ಬಗ್ಗೆ ಗಾಸಿ​ಪ್​ಗಳು ಹಬ್ಬಿವೆ. ಹಾಗಂತ ಅವರಿಬ್ಬರು ಮದುವೆ ಆಗುತ್ತಾರೆ ಎಂಬುದಕ್ಕೆ ಈವರೆಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಆದರೂ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಗಾಸಿಪ್​ ಮಂದಿ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

‘ಪಠಾಣ್​’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್​ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್​ ಆದರ್ಶ್​

ಉಮೈರ್​ ಸಂಧು ಅವರು ಭಾರತದ ಅನೇಕ ಸಿನಿಮಾಗಳನ್ನು ವಿಮರ್ಶೆ ಮಾಡಿ ಸುದ್ದಿ ಆಗಿದ್ದಾರೆ. ತಮ್ಮನ್ನು ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ ಎಂಬುದಾಗಿಯೂ ಅವರು ಪರಿಚಯಿಸಿಕೊಂಡಿದ್ದಾರೆ. ಬಾಲಿವುಡ್​ ತಾರೆಯರ ಬಗ್ಗೆ ಅವರು ಆಗಾಗ ಏನಾದರೂ ಟ್ವೀಟ್​ ಮಾಡುತ್ತ ಇರುತ್ತಾರೆ. ಈಗ ಪ್ರಭಾಸ್​-ಕೃತಿ ಸನೋನ್​ ನಿಶ್ಚಿತಾರ್ಥದ ಬಗ್ಗೆ ಅವರು ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ.

‘ಮುಂದಿನ ವಾರ ಮಾಲ್ಡೀವ್ಸ್​ನಲ್ಲಿ ಪ್ರಭಾಸ್​ ಮತ್ತು ಕೃತಿ ಸನೋನ್​ ಅವರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ತುಂಬ ಖುಷಿಯಾಗುತ್ತಿದೆ’ ಎಂದು ಉಮೈರ್​ ಸಂಧು ಟ್ವೀಟ್​ ಮಾಡಿದ್ದಾರೆ. ಇದನ್ನು ನಂಬಬೇಕೋ ಬಿಡಬೇಕು ಎಂದು ನೆಟ್ಟಿಗರಿಗೆ ಗೊಂದಲ ಆಗಿದೆ. ‘ಈ ವಿಷಯ ಸ್ವತಃ ಪ್ರಭಾಸ್​ ಹಾಗೂ ಕೃತಿ ಸನೋನ್​ಗೆ ತಿಳಿದಂತೆ ಇಲ್ಲ’ ಎಂದು ಹಲವರು ಲೇವಡಿ ಮಾಡಿದ್ದಾರೆ.

ಸುಳಿವು ನೀಡಿದ್ದ ವರುಣ್​ ಧವನ್​:

ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದ ವರುಣ್​ ಧವನ್​ ಅವರು ಪ್ರಭಾಸ್​ ಮತ್ತು ಕೃತಿ ಸನೋನ್​ ನಡುವಿನ ರಿಲೇಷನ್​ಶಿಪ್​ ಬಗ್ಗೆ ಸುಳಿವು ನೀಡುವ ರೀತಿಯಲ್ಲಿ ವೇದಿಕೆ ಮೇಲೆ ಮಾತನಾಡಿದ್ದರು. ಬಳಿಕ ಅದನ್ನು ಕೃತಿ ಸನೋನ್​ ತಳ್ಳಿ ಹಾಕಿದರು. ಪ್ರಭಾಸ್​ ಅವರು ‘ಸಲಾರ್​’, ‘ಆದಿಪುರುಷ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೃತಿ ಸನೋನ್​ ಅವರಿಗೂ ಸಖತ್ ಬೇಡಿಕೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:57 pm, Tue, 7 February 23

ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ