ರಣವೀರ್​ ಸಿಂಗ್​-ದೀಪಿಕಾ ಬೇರೆ ಆಗ್ತಾರಾ? ಫ್ಯಾನ್ಸ್​ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್​

Deepika Padukone | Ranveer Singh: ಈ ವಿಷಯಕ್ಕೆ ರಣವೀರ್​ ಸಿಂಗ್​ ಕಡೆಯಿಂದ ಉತ್ತರ ಸಿಕ್ಕಿದೆ. ಸದ್ಯ ದೀಪಿಕಾ ಪಡುಕೋಣೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ರಣವೀರ್​ ಸಿಂಗ್​-ದೀಪಿಕಾ ಬೇರೆ ಆಗ್ತಾರಾ? ಫ್ಯಾನ್ಸ್​ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್​
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on:Sep 29, 2022 | 11:02 AM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರಿಗೆ ಆರೋಗ್ಯ ಕೈ ಕೊಟ್ಟಿದೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳು ನಿರಾಳರಾಗಿದ್ದಾರೆ. ಅಷ್ಟರಲ್ಲಾಗಲೇ ಇನ್ನೊಂದು ಶಾಕಿಂಗ್​ ವಿಚಾರ ಹರಿದಾಡಲು ಆರಂಭಿಸಿದೆ. ಪತಿ ರಣವೀರ್​ ಸಿಂಗ್ (Ranveer Singh)​ ಜೊತೆಗಿನ ದಾಂಪತ್ಯಕ್ಕೆ ದೀಪಿಕಾ ಅಂತ್ಯ ಹಾಡಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ಟ್ವೀಟ್​. ‘ಬ್ರೇಕಿಂಗ್​! ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ನಡುವೆ ಎಲ್ಲವೂ ಸರಿ ಇಲ್ಲ’ ಎಂದು ಉಮೈರ್​ ಸಂಧು (Umair Sandhu) ಅವರ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಶಾಕ್​ ಆಗಿದೆ. ಅಷ್ಟಕ್ಕೂ ಯಾರು ಈ ಉಮೈರ್ ಸಂಧು? ಇಲ್ಲಿದೆ ಮಾಹಿತಿ..

ವಿದೇಶಿ ಸೆನ್ಸಾರ್​ ಮಂಡಳಿಯಲ್ಲಿ ಉಮೈರ್ ಸಂಧು ಸದಸ್ಯನಾಗಿದ್ದಾರೆ. ಭಾರತದ ಸಿನಿಮಾಗಳನ್ನು ಅವರು ವಿಮರ್ಶೆ ಮಾಡುತ್ತಾರೆ. ಆ ಮೂಲಕ ಅವರು ಸೋಶಿಯಲ್​ ಮೀಡಿಯಾದಲ್ಲಿ ಕೊಂಚ ಫೇಮಸ್​ ಆಗಿದ್ದಾರೆ. ಅವರ ಖಾತೆಯನ್ನು ಸಿನಿಪ್ರಿಯರು ಫಾಲೋ ಮಾಡುತ್ತಾರೆ. ಈಗ ಏಕಾಏಕಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಸಂಸಾರದ ಬಿರುಕಿನ ಬಗ್ಗೆ ಉಮೈರ್ ಸಂಧು ಟ್ವೀಟ್​ ಮಾಡಿರುವುದು ಫ್ಯಾನ್ಸ್​ ಆತಂಕಕ್ಕೆ ಕಾರಣ ಆಗಿದೆ.

ಇದನ್ನೂ ಓದಿ
Image
Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ; ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ರಣವೀರ್ ಸಿಂಗ್​ ಅವರಿಗೆ ನೇರವಾಗಿ ಪ್ರಶ್ನೆ ಮಾಡಲಾಗಿದೆ. ‘ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್​ ಮಾಡಲು ಆರಂಭಿಸಿದೆವು. 2022ಕ್ಕೆ ಹತ್ತು ವರ್ಷ ಆಯ್ತು’ ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಆ ಉತ್ತರ ಕೇಳಿ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರದ್ದು ಲವ್​ ಕಮ್​ ಅರೇಂಜ್​ ಮ್ಯಾರೇಜ್​ ಹಲವು ವರ್ಷಗಳ ಕಾಲ ಪ್ರೀತಿಸಿದ್ದ ಅವರು 2018ರಲ್ಲಿ ಮದುವೆಯಾದರು. ಇಬ್ಬರೂ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’ ಮುಂತಾದ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುವ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಈ ವರ್ಷ ರಣವೀರ್​ ಸಿಂಗ್​ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತು. ಅದನ್ನು ಸ್ವೀಕರಿಸುವಾಗ ವೇದಿಕೆ ಮೇಲೆ ದೀಪಿಕಾರನ್ನೂ ಕರೆದರು. ‘ನನ್ನ ಯಶಸ್ಸಿನ ಗುಟ್ಟು ನನ್ನ ಪತ್ನಿ ದೀಪಿಕಾ ಪಡುಕೋಣೆ’ ಎಂದು ರಣವೀರ್​ ಹೇಳಿದ್ದ ವಿಡಿಯೋ ತುಣುಕು ವೈರಲ್​ ಆಗಿತ್ತು. ಈಗ ಇಬ್ಬರೂ ಬೇರೆ ಆಗುತ್ತಾರೆ ಎಂದು ಹರಡಿದ ಗಾಸಿಪ್​ಗೆ ಸದ್ಯ ದೀಪಿಕಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:01 am, Thu, 29 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ