AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸೇರಿದರೆ ಹೇಮಾ ಮಾಲಿನಿ ಮಾಡುತ್ತಾರೆಂದರು, ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ: ಜಯಂತ್ ಚೌಧರಿ

Jayant Chaudhary 'ನನ್ನನ್ನು ಓಲೈಸಿ ನಿಮಗೆ ಏನು ಸಿಗುತ್ತದೆ? ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ. ಜನರಿಗಾಗಿ ಏನು ಮಾಡುತ್ತೀರಿ? ಏಳು ರೈತರ ಕುಟುಂಬಗಳಿಗೆ ಏನು ಮಾಡಿದ್ದೀರಿ? ಅಜಯ್ ಮಿಶ್ರಾ ಟೆನಿ ಇನ್ನೂ ಏಕೆ ಸಚಿವರಾಗಿದ್ದಾರೆ? ಎಂದು ಚೌಧರಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸೇರಿದರೆ ಹೇಮಾ ಮಾಲಿನಿ ಮಾಡುತ್ತಾರೆಂದರು, ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ: ಜಯಂತ್ ಚೌಧರಿ
ಜಯಂತ್ ಚೌಧರಿ
TV9 Web
| Edited By: |

Updated on: Feb 02, 2022 | 3:07 PM

Share

ಲಖನೌ: ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು “ನೀವು ನಮ್ಮ ಪಕ್ಷಕ್ಕೆ ಸೇರಿದರೆ ನಾನು ನಿಮ್ಮನ್ನು ಹೇಮಾ ಮಾಲಿನಿಯಾಗಿ ಮಾಡುತ್ತೇನೆ” ಎಂದು ನನ್ನ ಪಕ್ಷದ ನಾಯಕರಲ್ಲಿ ಹೇಳಿರುವುದಾಗಿ ಉತ್ತರ ಪ್ರದೇಶದ (Uttar Pradesh)ರಾಜಕಾರಣಿ, ರಾಷ್ಟ್ರೀಯ ಲೋಕದಳ (RLD) ಮುಖ್ಯಸ್ಥ ಜಯಂತ್ ಚೌಧರಿ (Jayant Chaudhary) ಹೇಳಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಬಿಜೆಪಿ ಆಹ್ವಾನವನ್ನು ತಳ್ಳಿಹಾಕಿರುವ ಜಯಂತ್ ಚೌಧರಿ, ಫೆಬ್ರವರಿ 10 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ವೇಳೆ ಮಂಗಳವಾರ ಈ ರೀತಿ ಹೇಳಿದ್ದಾರೆ.  ಅವರೊಂದಿಗೆ ವೇದಿಕೆಯಲ್ಲಿದ್ದ ತಮ್ಮ ಪಕ್ಷದ ನಾಯಕರನ್ನು ಉಲ್ಲೇಖಿಸಿದ ಚೌಧರಿ, ನಮ್ಮ  ಯೋಗೇಶ್ (ನೌಹ್ವಾರ್) ಅವರಲ್ಲಿ ಅಮಿತ್ ಶಾ ಅವರು, ಯೋಗೇಶ್, ನಮ್ಮೊಂದಿಗೆ ಸೇರಿಕೊಳ್ಳಿ. ನಾನು ನಿಮ್ಮನ್ನು ಹೇಮಾ ಮಾಲಿನಿಯಾಗಿ ಮಾಡುತ್ತೇನೆ ಎಂದು ಹೇಳಿದ್ದರು ಎಂದಿದ್ದಾರೆ. ಮಥುರಾದಿಂದ ಬಿಜೆಪಿ ಸಂಸದರಾಗಿರುವ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರನ್ನು ಉಲ್ಲೇಖಿಸಿದಾಗ ಪ್ರೇಕ್ಷಕರು ನಗುತ್ತಾ ಚಪ್ಪಾಳೆ ತಟ್ಟಿದರು.  “ಅವರೆಲ್ಲರೂ ನನ್ನ ಬಗ್ಗೆ ಏನು ಹೇಳುತ್ತಾರೋ ಗೊತ್ತಿಲ್ಲ.ಅವರಿಗೆ ನನ್ನ ಬಗ್ಗೆ ಪ್ರೀತಿ ಅಥವಾ ಭಾವನೆ ಇದೆ ಅಂತಲ್ಲ. ನಾನು ಅವರಿಗೆ ಹೇಳುತ್ತೇನೆ ‘ನನ್ನನ್ನು ಓಲೈಸಿ ನಿಮಗೆ ಏನು ಸಿಗುತ್ತದೆ? ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ. ಜನರಿಗಾಗಿ ಏನು ಮಾಡುತ್ತೀರಿ? ಏಳು ರೈತರ ಕುಟುಂಬಗಳಿಗೆ ಏನು ಮಾಡಿದ್ದೀರಿ? ಅಜಯ್ ಮಿಶ್ರಾ ಟೆನಿ ಇನ್ನೂ ಏಕೆ ಸಚಿವರಾಗಿದ್ದಾರೆ? ಎಂದು ಚೌಧರಿ ಪ್ರಶ್ನಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ವಾಹನ ಚಲಾಯಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಜೈಲಿನಲ್ಲಿದ್ದಾರೆ. ಅವರನ್ನು ವಜಾಗೊಳಿಸಲು ವಿರೋಧ ಪಕ್ಷದ ಬೇಡಿಕೆಗಳ ಹೊರತಾಗಿಯೂ, ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿದೆ. ಜಾಟ್ ನಾಯಕನ ಚೌಧರಿ ಪಶ್ಚಿಮ ಯುಪಿಯಲ್ಲಿ ಗಮನಾರ್ಹ ಹಿಡಿತವನ್ನು ಹೊಂದಿದ್ದಾನೆ, ವಿಶೇಷವಾಗಿ ಅವರು ಈ ಪ್ರದೇಶದಲ್ಲಿ ಪ್ರಮುಖ ಮತದಾನದ ಬಣವಾದ ರೈತರ ಪರವಾಗಿ ಹೋರಾಡುತ್ತಿದ್ದಾರೆ.

ಜನವರಿ 26 ರಂದು ದೆಹಲಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅಮಿತ್ ಶಾ ಅವರು ಜಾಟ್ ಸಮುದಾಯದ ಮುಖಂಡರನ್ನು ಭೇಟಿ ಮಾಡಿ, ಆರ್‌ಎಲ್‌ಡಿಗೆ ಬಿಜೆಪಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದ್ದರು. ನಂತರ ಸಾರ್ವಜನಿಕ ಸಭೆಯಲ್ಲಿ, ಗೃಹ ಸಚಿವರು ಅಖಿಲೇಶ್ ಯಾದವ್ ಅವರು ಚುನಾವಣೆ ಮುಗಿದ ತಕ್ಷಣ ಚೌಧರಿ ಅವರನ್ನು ಕೈಬಿಡುತ್ತಾರೆ ಎಂದು ಹೇಳಿದ್ದರು.

“ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಮತಎಣಿಕೆಯವರೆಗೂ ಒಟ್ಟಿಗೆ ಇರುತ್ತಾರೆ. ಅವರ (ಸಮಾಜವಾದಿ) ಸರ್ಕಾರ ರಚನೆಯಾದರೆ, ಆಜಮ್ ಖಾನ್ (ಅವರ ಸರ್ಕಾರದಲ್ಲಿ) ಕುಳಿತುಕೊಳ್ಳುತ್ತಾರೆ ಮತ್ತು ಜಯಂತ್ ಭಾಯ್ ಹೊರಗುಳಿಯುತ್ತಾರೆ” ಎಂದು ಶಾ ಹೇಳಿದ್ದರು.  ಜಯಂತ್ ಚೌಧರಿ ಅವರು ಬಿಜೆಪಿಯೊಂದಿಗಿನ ಯಾವುದೇ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಸುಲಭವಾಗಿ ತಿರುಗಲು ನಾನು 25 ಪೈಸೆ ನಾಣ್ಯ ಅಲ್ಲ ಎಂದು ಚೌಧರಿ ಕಟುವಾಗಿ ಬಿಜೆಪಿಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: PM Narendra Modi Speech ಬಡವರು, ಮಧ್ಯಮ ವರ್ಗ ಮತ್ತು ಯುವಕರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಬಜೆಟ್ ಗಮನಹರಿಸಿದೆ: ಮೋದಿ