ಹೇಮಾ ಮಾಲಿನಿ ಆಗುವುದು ತುಂಬಾ ಕಷ್ಟ: ಜಯಂತ್ ಚೌಧರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಥುರಾ ಸಂಸದೆ

Hema Malini ನಿಸ್ಸಂಶಯವಾಗಿ ಹೇಳುತ್ತೇನೆ ಅವರಿಗದು ಸಾಧ್ಯವಿಲ್ಲ. "ಹೇಮಾ ಮಾಲಿನಿ ಬನ್ ನಾ ಮುಷ್ಕಿಲ್ ಹೈ. (ಹೇಮಾ ಮಾಲಿನಿಯಾಗುವುದು ಕಷ್ಟ).. ಇದು ತುಂಬಾ ಕಷ್ಟ. ನಾನು ಈ ಕನಸಿನ ಹುಡುಗಿಯಾಗಲು ತುಂಬಾ ಕಷ್ಟಪಟ್ಟಿದ್ದೇನೆ.

ಹೇಮಾ ಮಾಲಿನಿ ಆಗುವುದು ತುಂಬಾ ಕಷ್ಟ: ಜಯಂತ್ ಚೌಧರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಥುರಾ ಸಂಸದೆ
ಹೇಮಾ ಮಾಲಿನಿ
TV9kannada Web Team

| Edited By: Rashmi Kallakatta

Feb 07, 2022 | 12:40 PM

ಮಥುರಾ: ಉತ್ತರ ಪ್ರದೇಶ ಚುನಾವಣೆ ಬಿಜೆಪಿಗೆ (BJP) ಕಠಿಣವಾಗಿದ್ದರೂ ಯೋಗಿ ಆದಿತ್ಯನಾಥ (Yogi Adityanath) ಗೆಲ್ಲುತ್ತಾರೆ ಎಂದು ಪಕ್ಷದ ಮಥುರಾ ಸಂಸದೆ ಹೇಮಾ ಮಾಲಿನಿ (Hema Malini) ಹೇಳಿದ್ದಾರೆ. ಪ್ರಸ್ತುತ ಮಥುರಾದಲ್ಲಿ ಯಾತ್ರಾರ್ಥಿಗಳ ಸಂಚಾರವನ್ನು ಸ್ವಾಗತಿಸಲು ರಸ್ತೆ ನಿರ್ಮಾಣದತ್ತ ಅವರು ಗಮನ ಹರಿಸಿದ್ದಾರೆ. ₹ 14,000 ಕೋಟಿಗಳನ್ನು ಬರೇಲಿ-ಮಥುರಾ-ಪಿಲಿಭಿತ್ ರಸ್ತೆ – ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿಶೇಷವಾಗಿ ಮಥುರಾಗೆ (Mathura) ಬರುವ ಯಾತ್ರಿಗಳಿಗೆ ಸುಗಮ ರಸ್ತೆಗಳನ್ನು ಒದಗಿಸುವ ಬಗ್ಗೆ ಗಮನ ಹರಿಸಿರುವುದಾಗಿ ಅವರು ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಉಳಿದ ಭಾಗಗಳೊಂದಿಗೆ, ಮಥುರಾ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಲಿದೆ. ಅಯೋಧ್ಯೆ ಮತ್ತು ವಾರಣಾಸಿಯ ನಂತರ ಬಿಜೆಪಿಯ ಮಥುರಾದ ಭವ್ಯ ಮಂದಿರ ನಿರ್ಮಾಣಕ್ಕೆ ಇದು ಸಿದ್ಧತೆಯೇ ಎಂಬ ಪ್ರಶ್ನೆಗೆ ಮಥುರಾ ಈಗಾಗಲೇ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳೇ ಇದರ ಹಿಂದಿರುವ ಪ್ರಮುಖರು ಎಂದರು.  ನನಗೆ ಈಗ ಸಂಪೂರ್ಣ ಸರ್ಕಾರದ ಬೆಂಬಲವಿದೆ ಎಂದು ಅವರು ಹೇಳಿದರು.  ಚುನಾವಣೆಯ ಪ್ರಮುಖ ಚುನಾವಣಾ ವಿಷಯವೆಂದರೆ ದೇವಾಲಯವೇ ಹೊರತು ಅಭಿವೃದ್ಧಿಯಲ್ಲ ಎಂಬುದನ್ನು ನೀವು ಒಪ್ಪುತ್ತೀರಾ ಎಂದು ಕೇಳಿದಾಗ, ಅದು ಅಭಿವೃದ್ಧಿಯಾಗಿರುತ್ತದೆ, ಆದರೆ ದೇವಾಲಯವೂ ಅದರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.  “ಹಾಗೇನೂ ಇಲ್ಲ..ಅಂದಹಾಗೆ, ದೇವಸ್ಥಾನವೂ ಇರುತ್ತದೆ.. ಅಷ್ಟೊಂದು ಭದ್ರತೆಯನ್ನು ನೀಡಲಾಗುತ್ತಿದೆ. ಎಲ್ಲಾ ಗೂಂಡಾಗಿರಿ ನಿಲ್ಲಿಸಲಾಗಿದೆ” ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಮಾ ಮಾಲಿನಿ ತಿಳಿಸಿದ್ದಾರೆ.

ಕಳೆದ ವರ್ಷದ ಪಂಚಾಯತ್ ಚುನಾವಣಾ ಫಲಿತಾಂಶಗಳು ಅಯೋಧ್ಯೆ ಅಥವಾ ಮಥುರಾದಲ್ಲಿ ಬಿಜೆಪಿಗೆ ಹೆಚ್ಚು ಒಲವು ಸಿಕ್ಕಿಲ್ಲ, ಅಲ್ಲಿ ಬಿಜೆಪಿ ತನ್ನ ದೇವಾಲಯದ ಅಜೆಂಡಾವನ್ನು ಮುಂದಿಡುತ್ತಿದೆ. ಮಥುರಾದಲ್ಲಿ 33 ಸ್ಥಾನಗಳಲ್ಲಿ ಬಿಜೆಪಿ ಕೇವಲ ಎಂಟು ಸ್ಥಾನಗಳನ್ನು ಪಡೆದುಕೊಂಡಿತ್ತು. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಗರಿಷ್ಠ ಸಂಖ್ಯೆಯ 13 ಸ್ಥಾನಗಳನ್ನು ಗೆದ್ದಿದೆ. ಅಯೋಧ್ಯೆಯ 40 ಸ್ಥಾನಗಳಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 6 ಸ್ಥಾನಗಳು. ಅಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 24 ಸ್ಥಾನಗಳನ್ನು ಪಡೆದುಕೊಂಡಿತ್ತು.

ಆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳ, ಮಥುರಾದಲ್ಲಿ ಒಂದು ಸ್ಥಾನವನ್ನು ಗೆದ್ದಿತ್ತು. ನಾನು ಹೇಮಾ ಮಾಲಿನಿ ಆಗಲು ಬಯಸುವುದಿಲ್ಲ ಎಂಬ ಟೀಕೆಗೆ ಹೇಮಾ ಮಾಲಿನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಿಸ್ಸಂಶಯವಾಗಿ ಹೇಳುತ್ತೇನೆ ಅವರಿಗದು ಸಾಧ್ಯವಿಲ್ಲ. “ಹೇಮಾ ಮಾಲಿನಿ ಬನ್ ನಾ ಮುಷ್ಕಿಲ್ ಹೈ. (ಹೇಮಾ ಮಾಲಿನಿಯಾಗುವುದು ಕಷ್ಟ).. ಇದು ತುಂಬಾ ಕಷ್ಟ. ನಾನು ಈ ಕನಸಿನ ಹುಡುಗಿಯಾಗಲು ತುಂಬಾ ಕಷ್ಟಪಟ್ಟಿದ್ದೇನೆ. ಜಯಂತ್ ಚೌಧರಿ ಹೇಮಾ ಮಾಲಿನಿ ಆಗಬಹುದು ಎಂದು ನೀವು ಭಾವಿಸುತ್ತೀರಾ? ಸಾಹಿ ಬೋಲಾ (ಅವರು ಹೇಳಿದ್ದು ಸರಿ)” ಎಂದು ಹೇಮಾ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರು ನಾನು ಎನ್‌ಡಿಎ ಸೇರಬೇಕೆಂದು ಬಯಸುತ್ತಿದ್ದಾರೆ ಎಂದು ಚೌಧರಿ ಹೇಳಿದ್ದರು.

ಅವರೆಲ್ಲರೂ ನನ್ನ ಬಗ್ಗೆ ಏನು ಹೇಳುತ್ತಾರೋ ಗೊತ್ತಿಲ್ಲ ಅವರಿಗೆ ನನ್ನ ಬಗ್ಗೆ ಪ್ರೀತಿ ಅಥವಾ ಭಾವನೆ ಇದೆ ಅಂತಲ್ಲ. ನಾನು ಅವರಿಗೆ ಹೇಳುತ್ತೇನೆ ‘ನನ್ನನ್ನು ಓಲೈಸಿ ನಿಮಗೆ ಏನು ಸಿಗುತ್ತದೆ? ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ. ಜನರಿಗಾಗಿ ಏನು ಮಾಡುತ್ತೀರಿ? ಏಳು ರೈತರ ಕುಟುಂಬಗಳಿಗೆ ಏನು ಮಾಡಿದ್ದೀರಿ? ಅಜಯ್ ಮಿಶ್ರಾ ಟೆನಿ ಇನ್ನೂ ಏಕೆ ಸಚಿವರಾಗಿದ್ದಾರೆ? ಎಂದು ಆರ್ ಎಡಿ ನಾಯಕ ಪ್ರಶ್ನಿಸಿದ್ದರು. ಹೇಮಾ ಮಾಲಿನಿ ಹೆಸರು ಉಲ್ಲೇಖಿಸಿ ಈ ರೀತಿ ಮಾತನಾಡಿದ್ದಕ್ಕಾಗಿ ಚೌಧರಿ ವಿರುದ್ಧ ಟೀಕಾ ಪ್ರಹಾರ ನಡೆದಿತ್ತು. ಏತನ್ಮಧ್ಯೆ, ಟೀಕೆಗಳಿಗೆ ಪ್ರತಿಕ್ರಿಯಿಸಿದ ಚೌಧರಿ ನಾನು ವ್ಯಂಗ್ಯವಾಗಿ ಹೇಳಿದ್ದೆ , ಯಾವುದೇ ನಟಿಯನ್ನು ಅವಹೇಳನ ಮಾಡಿಲ್ಲ ಎಂದಿದ್ದರು.

“ನಾನು ಮಥುರಾ ಸಂಸದನಾಗಿ ತುಂಬಾ ತೃಪ್ತನಾಗಿದ್ದೇನೆ. ಏಕೆಂದರೆ ನಾನು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನಾನು ಇಲ್ಲಿ ಮನೆ ಮಾಡಿದ್ದೇನೆ. ನಾನು ಇಲ್ಲಿಯೇ ಇದ್ದೇನೆ. ಉತ್ತರ ಪ್ರದೇಶದ ಭವಿಷ್ಯವು ಈ ನಿರ್ದಿಷ್ಟ ಚುನಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಮಾ ಮಾಲಿನಿ ಮತದಾರರನ್ನು ಕೇಳಿದರು. ಅಭಿವೃದ್ಧಿಗೆ ಕೈ ಜೋಡಿಸಬೇಕು. “ನಾವು ಮಾಡದಿದ್ದರೆ, ನಾವು 30-40 ವರ್ಷಗಳ ಹಿಂದೆ ಹೋಗುತ್ತೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸೇರಿದರೆ ಹೇಮಾ ಮಾಲಿನಿ ಮಾಡುತ್ತಾರೆಂದರು, ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ: ಜಯಂತ್ ಚೌಧರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada