ದೆಹಲಿ: ಲಡಾಖ್ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ನಡೆದು ಭಾರತದ ಓರ್ವ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಬೆಂಕಿ ಮುಚ್ಚಿದ ವಾತಾವರಣವಿದೆ. ಭಾರತೀಯ ಸೇನೆಗೆ ಸರ್ಕಾರ ಸಂಪೂರ್ಣ ಪವರ್ ನೀಡಿದೆ. ಚೀನಾಗೆ ಪ್ರತ್ಯುತ್ತರ ನೀಡಲು ಸರ್ಕಾರದ ಆದೇಶಕ್ಕೆ ಕಾಯುವ ಅಗತ್ಯವಿಲ್ಲ ಎಂದು ಆದೇಶ ನೀಡಿದೆ.
ಭಾರತೀಯ ಸೇನೆಗೆ ಸರ್ಕಾರ ತುರ್ತು ಅಧಿಕಾರ ನೀಡಿದೆ. ದಾಳಿಗೆ ಪ್ರತ್ಯುತ್ತರ ನೀಡಲು ಮೇಲಾಧಿಕಾರಿ ಅಥವಾ ಸರ್ಕಾರದ ಆದೇಶಕ್ಕೆ ಕಾಯುವಂತಹ ಅಗತ್ಯವಿಲ್ಲ. ತಕ್ಷಣವೇ ಗಡಿಯಲ್ಲಿ ದಾಳಿಗೆ ಪ್ರತ್ಯುತ್ತರವನ್ನು ನೀಡಿ ಎಂದಿದೆ.
ಜಲಾಂತರ್ಗಾಮಿ ನೌಕೆ ನಿಯೋಜನೆಗೆ ನೌಕಪಡೆಗೆ ಸೂಚನೆ ನೀಡಲಾಗಿದೆ. ಭೂ ಸೇನೆ, ವಾಯುಸೇನೆ, ನೌಕಾಪಡೆ ಹೈ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಹಾಗೂ ಗಡಿಯಲ್ಲಿ ಹೈ ಆಲರ್ಟ್ ಸ್ಥಿತಿಯಲ್ಲಿರಲು ತಿಳಿಸಲಾಗಿದೆ. ಚೀನಾದ ವಿರುದ್ಧ ಪ್ರತಿದಾಳಿಗೆ ಸಜ್ಜಾಗಿರುವಂತೆ ಆದೇಶ ನೀಡಲಾಗಿದೆ.
Published On - 10:38 am, Wed, 17 June 20