ಅಕ್ರಮ ಹಣ ವರ್ಗಾವಣೆ ಪ್ರಕರಣ; ರಿಯಲ್​ ಎಸ್ಟೇಟ್​ ಉದ್ಯಮಿ ಲಲಿತ್​ ಗೋಯಲ್​​ರನ್ನು ಬಂಧಿಸಿದ ಇ.ಡಿ.

| Updated By: Lakshmi Hegde

Updated on: Nov 17, 2021 | 10:01 AM

Lalit Goyal: ಗೋಯಲ್​ ವಿರುದ್ಧ ಇ.ಡಿ.ತನಿಖೆ ಶುರು ಮಾಡಿ, ದೇಶ ಬಿಟ್ಟು ಹೋಗದಂತೆ ಲುಕೌಟ್​ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೂ ಕಳೆದ ಗುರುವಾರ ಹೊರಟಿದ್ದ ಲಲಿತ್ ಗೋಯಲ್​​ರನ್ನು ದೆಹಲಿ ಇಂದಿರಾ ಗಾಂಧಿ ಏರ್​ಪೋರ್ಟ್​​ನಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ; ರಿಯಲ್​ ಎಸ್ಟೇಟ್​ ಉದ್ಯಮಿ ಲಲಿತ್​ ಗೋಯಲ್​​ರನ್ನು ಬಂಧಿಸಿದ ಇ.ಡಿ.
ಇ.ಡಿ.
Follow us on

ರಿಯಲ್​ ಎಸ್ಟೇಟ್​​ ಉದ್ಯಮಿ, ಐಆರ್​ಇಒ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಲಲಿತ್​ ಗೋಯಲ್ (Lalit Goyal)​​ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನಿರಂತರವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ.ಹೆಚ್ಚಿನ ತನಿಖೆಗಾಗಿ ಈಗ ಬಂಧಿಸಿದೆ ಎಂದು ಹೇಳಲಾಗಿದೆ.  ಇದು ಸುಮಾರು 2600 ಕೋಟಿ ರೂಪಾಯಿ ವಂಚನೆ ಪ್ರಕರಣ ಎಂದು ಇ.ಡಿ.ಮೂಲಗಳಿಂತ ತಿಳಿದುಬಂದಿದೆ. ಲಲಿತ್​ ಗೋಯಲ್​​ರನ್ನು ಚಂಡಿಗಢ್​​ನಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗುವುದು. ಬಳಿಕ ಇ.ಡಿ.ವಶಕ್ಕೆ ನೀಡುವಂತೆ ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. 

ಗೋಯಲ್​ ವಿರುದ್ಧ ಇ.ಡಿ.ತನಿಖೆ ಶುರು ಮಾಡಿ, ದೇಶ ಬಿಟ್ಟು ಹೋಗದಂತೆ ಲುಕೌಟ್​ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೂ ಕಳೆದ ಗುರುವಾರ ಹೊರಟಿದ್ದ ಲಲಿತ್ ಗೋಯಲ್​​ರನ್ನು ದೆಹಲಿ ಇಂದಿರಾ ಗಾಂಧಿ ಏರ್​ಪೋರ್ಟ್​​ನಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದರು. ಅಂದು ಇ.ಡಿ. ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ರಿಯಲ್​ ಎಸ್ಟೇಟ್​ ಕಂಪನಿ ಐಆರ್​ಇಒ ಪ್ರಮೋಟರ್​ ಲಲಿತ್​ ಗೋಯಲ್​​​ರನ್ನು ದೆಹಲಿ ಏರ್​ಪೋರ್ಟ್​​ನಲ್ಲಿ ವಲಸೆ ಅಧಿಕಾರಿಗಳು ತಡೆದು ನಮ್ಮ ವಶಕ್ಕೆ ನೀಡಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರು ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿದ್ದಾರೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ.ಹೇಳಿತ್ತು. ಇನ್ನು ಲಲಿತ್​ ಗೋಯಲ್​​ಗೆ ಸೇರಿದ ಹಲವು ಕಚೇರಿ, ಮನೆಗಳ ಮೇಲೆ ಕೂಡ ಇ.ಡಿ.ದಾಳಿ ನಡೆಸಿದೆ. ಅವರು ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸದ ಕಾರಣ ಬಂಧಿಸಲಾಗಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ

Published On - 9:54 am, Wed, 17 November 21