ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶುವನ್ನು ಪತ್ತೆ ಹಚ್ಚಿದ್ದು ಬೀದಿ ಬೆಕ್ಕುಗಳು; ಪೊಲೀಸರಿಂದ ರಕ್ಷಣೆ
Mumbai: ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.
ಮುಂಬೈನ ಪಂತ್ನಗರದ ಬಳಿ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು, ಅದನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಂದಹಾಗೆ ಈ ಮಗುವಿನ ಪತ್ತೆಗೆ ಸಹಾಯ ಮಾಡಿದ್ದು ಬೀದಿ ಬೆಕ್ಕುಗಳು. ಬಟ್ಟೆಯಲ್ಲಿ ಸುತ್ತಿದ್ದ ಮಗು ಚರಂಡಿಯಲ್ಲಿ ಇತ್ತು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಅಲ್ಲೇ ರಸ್ತೆ ಮೇಲೆ ತಿರುಗುವ ಬೀದಿ ಬೆಕ್ಕುಗಳು ಆ ಚರಂಡಿಯ ಬಳಿ ಹೋಗಿ ಜೋರಾಗಿ ಕೂಗಿ, ಭಿನ್ನವಾಗಿ ತಮ್ಮ ವರ್ತನೆಯನ್ನು ತೋರಸಲು ಪ್ರಾರಂಭಿಸಿವೆ. ಅದನ್ನು ನೋಡಿದ ಸ್ಥಳೀಯರು ಕುತೂಹಲದಿಂದ ಅಲ್ಲಿಗೆ ಹೋದಾಗ ಪುಟ್ಟ ಮಗು ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಅದನ್ನು ರಾಜಾವಾಡಿಗೆ ಕರೆದೊಯ್ಯದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ. ಹಾಗೇ ಪೊಲೀಸ್ ಸಿಬ್ಬಂದಿ ಆ ಮುದ್ದಾದ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನೂ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲಕರ ಪತ್ತೆ ಕಾರ್ಯವೂ ಶುರುವಾಗಿದೆ.
Pantnagar P.stn received a call from a good samaritan that a baby, wrapped in cloth, was dumped in a drain. He was alerted when the neighbourhood cats created a ruckus. the baby was rushed to Rajawadi by the Nirbhaya Squad of Pantnagar P.Stn & is now safe & recovering. pic.twitter.com/nEGSDCD6wz
— Mumbai Police (@MumbaiPolice) November 15, 2021
ಇದನ್ನೂ ಓದಿ: ಮೈಸೂರಿನಲ್ಲಿ ಪಾದಚಾರಿಗಳ ಮೇಲೆ ನುಗ್ಗಿದ ಕಾರು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
Published On - 11:02 am, Wed, 17 November 21