ಬೆಂಗಳೂರು ಸೇರಿ 10 ನಗರಗಳಲ್ಲಿ ವಾಯುಮಾಲಿನ್ಯದಿಂದ ಸಾಯುವವರ ಸಂಖ್ಯೆಯಲ್ಲಿ ಏರಿಕೆ

|

Updated on: Jul 04, 2024 | 9:46 AM

ದೇಶದಲ್ಲಿ ವಾಯುಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ, ಆದರೆ ಇದೀಗ ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗಗೊಂಡ ಸಂಗತಿಯೆಂದರೆ, ನಮ್ಮೆಲ್ಲರಿಗೂ ಆತಂಕವಾಗುವುದು ಸಹಜ.ವಾಸ್ತವವಾಗಿ, ಈ ಅಧ್ಯಯನವು ದೇಶದ 10 ನಗರಗಳಲ್ಲಿ ಪ್ರತಿ ವರ್ಷ 33 ಸಾವಿರ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ ಎಂದು ಹೇಳುತ್ತದೆ. ನಿಗದಿತ ಮಾನದಂಡಗಳಿಗಿಂತ ಹಲವು ಪಟ್ಟು ಹೆಚ್ಚು ಮಾಲಿನ್ಯವು ಒಂದು ಪ್ರಮುಖ ಸಮಸ್ಯೆಯಾಗಿ ಉಳಿದಿದೆ.

ಬೆಂಗಳೂರು ಸೇರಿ 10 ನಗರಗಳಲ್ಲಿ ವಾಯುಮಾಲಿನ್ಯದಿಂದ ಸಾಯುವವರ ಸಂಖ್ಯೆಯಲ್ಲಿ ಏರಿಕೆ
ವಾಯು ಮಾಲಿನ್ಯ
Follow us on

ವಾಯು ಮಾಲಿನ್ಯ(Air Pollution)ವು ಜನರಿಗೆ ಮಾರಕವಾಗಿದೆ. ದೆಹಲಿ ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ ಪ್ರತಿ ವರ್ಷ ಸಾವಿರಾರು ಜನರು ವಾಯು ಮಾಲಿನ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಮಾಲಿನ್ಯವು ಪರಿಣಾಮ ಬೀರುತ್ತಿದೆ.

ರಾಜಧಾನಿ ದೆಹಲಿಯ ಸ್ಥಿತಿ ಈ ನಗರಗಳಲ್ಲಿ ಅತ್ಯಂತ ಕೆಟ್ಟದಾಗಿದೆ. ವಾಯು ಮಾಲಿನ್ಯದಿಂದ ಭಾರತದಲ್ಲಿ ಅತಿ ಹೆಚ್ಚು ಸಾವುಗಳು ದೆಹಲಿಯಲ್ಲಿ ಸಂಭವಿಸುತ್ತಿವೆ. ಲ್ಯಾನ್ಸೆಟ್‌ನ ಹೊಸ ಅಧ್ಯಯನವು ವಾಯುಮಾಲಿನ್ಯದಿಂದ ಸಾವಿನ ಭಯಾನಕ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಈ ಅಧ್ಯಯನದಲ್ಲಿ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.

ದೆಹಲಿಯಲ್ಲಿ ಪ್ರತಿ ವರ್ಷ ಸಂಭವಿಸುವ ಸಾವುಗಳಲ್ಲಿ ಸುಮಾರು 11.5 ರಷ್ಟು ವಾಯು ಮಾಲಿನ್ಯದಿಂದ ಸಂಭವಿಸುತ್ತವೆ ಎಂದು ಕಂಡುಬಂದಿದೆ. ವಿಷಕಾರಿ ಗಾಳಿಯಿಂದ ರಾಜಧಾನಿಯಲ್ಲಿ ಪ್ರತಿ ವರ್ಷ ಸುಮಾರು 12,000 ಜನರು ಸಾಯುತ್ತಿದ್ದಾರೆ.

ದೇಶದ 10 ದೊಡ್ಡ ನಗರಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಣಾಸಿಯಲ್ಲಿ ಪ್ರತಿ ವರ್ಷ ಸರಾಸರಿ 33,000 ಕ್ಕೂ ಹೆಚ್ಚು ಸಾವುಗಳು ವಾಯು ಮಾಲಿನ್ಯದಿಂದ ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: World Wind Day 2024 : ವಿಶ್ವ ಗಾಳಿ ದಿನ; ವಾಯು ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸೋಣ

ಮಾಲಿನ್ಯದಿಂದ ಸಾವನ್ನಪ್ಪಿರುವವರ ಪ್ರಮಾಣ
ಮುಂಬೈ-5091
ಕೋಲ್ಕತ್ತಾ-5091
ಚೆನ್ನೈ-2870
ಅಹಮದಾಬಾದ್-2495
ಬೆಂಗಳೂರು-2102
ಹೈದರಾಬಾದ್-1597
ಪುಣೆ-1367
ವಾರಾಣಸಿ-831
ಶಿಮ್ಲಾ-59
ಶಿಮ್ಲಾದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆ ಇದೆ. ಈ 10 ನಗರಗಳಲ್ಲಿ ಒಟ್ಟು ಸಾವಿನ ಶೇಕಡಾ 7.2 ರಷ್ಟು ಅಂದರೆ ಸುಮಾರು 33,000 ಜನರು ಪ್ರತಿ ವರ್ಷ ವಾಯು ಮಾಲಿನ್ಯದಿಂದ ಸಾಯುತ್ತಾರೆ ಎಂದು ಅಧ್ಯಯನ ಹೇಳಿದೆ. ಭಾರತದ ಈ 10 ನಗರಗಳಲ್ಲಿ PM 2.5 ಸಾಂದ್ರತೆಯು WHO ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ (ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳು) ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ.
ಸಂಶೋಧನೆಯು ಭಾರತದ ವಾಯು ಗುಣಮಟ್ಟದ ಮಾನದಂಡಗಳನ್ನು ಬಿಗಿಗೊಳಿಸಬೇಕೆಂದು ಕರೆ ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ