ಉತ್ತರ ಪ್ರದೇಶ ಜನಸಂಖ್ಯಾ ನೀತಿ ಬಿಡುಗಡೆ ಮಾಡಿದ ಯೋಗಿ ಆದಿತ್ಯನಾಥ; ಪ್ರತಿಯೊಂದು ಸಮುದಾಯದ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 11, 2021 | 2:58 PM

UP Population Policy: 2050 ರ ವೇಳೆಗೆ ಉತ್ತರ ಪ್ರದೇಶವು ಸ್ಥಿರತೆಯ ಗುರಿ ಹೊಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಹೇಳಿದ್ದಾರೆ. ಹೊಸ ನೀತಿಯೊಂದಿಗೆ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಶೇಕಡಾ 2.1 ಕ್ಕೆ ಇಳಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಉತ್ತರ ಪ್ರದೇಶ ಜನಸಂಖ್ಯಾ ನೀತಿ ಬಿಡುಗಡೆ ಮಾಡಿದ ಯೋಗಿ ಆದಿತ್ಯನಾಥ; ಪ್ರತಿಯೊಂದು ಸಮುದಾಯದ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ
ಯೋಗಿ ಆದಿತ್ಯನಾಥ
Follow us on

ಲಖನೌ: ಜನಸಂಖ್ಯೆ ನಿಯಂತ್ರಣ ಗುರಿ ಹೊಂದಿರುವ ನೂತನ ಜನಸಂಖ್ಯಾ ನೀತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ. ವಿಶ್ವ ಜನಸಂಖ್ಯಾ ದಿನಾಚರಣೆಯಾದ ಜುಲೈ 11ರಂದು (ಭಾನುವಾರ) ಈ ನೀತಿ ಬಿಡುಗಡೆ ಆಗಿದೆ.
ಜನಸಂಖ್ಯೆ ಏರಿಕೆ ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಬಹುದು. ಜನಸಂಖ್ಯಾ ನೀತಿ 2021-2030 ರಲ್ಲಿ ಪ್ರತಿ ಸಮುದಾಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಆದಿತ್ಯನಾಥ ಹೇಳಿದರು. ಜನಸಂಖ್ಯೆ ನಿಯಂತ್ರಣವು ಜನಸಾಮಾನ್ಯರಲ್ಲಿ ಅರಿವು ಮತ್ತು ಬಡತನದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು.

2050 ರ ವೇಳೆಗೆ ಉತ್ತರ ಪ್ರದೇಶವು ಸ್ಥಿರತೆಯ ಗುರಿ ಹೊಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಹೇಳಿದ್ದಾರೆ. ಹೊಸ ನೀತಿಯೊಂದಿಗೆ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಶೇಕಡಾ 2.1 ಕ್ಕೆ ಇಳಿಸುವ ಗುರಿ ಹೊಂದಿದೆ ಎಂದು ಹೇಳಿದರು.


ಈ ಹಿಂದೆ, ಹೆಚ್ಚುತ್ತಿರುವ ಜನಸಂಖ್ಯೆಯು ಅಸಮಾನತೆ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಮುಖ್ಯಮಂತ್ರಿ ಹೇಳಿದ್ದರು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಜನರನ್ನು ಪ್ರೋತ್ಸಾಹಿಸಿದರು.


ಈ ವಿಶ್ವ ಜನಸಂಖ್ಯಾ ದಿನದಂದು ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ಮತ್ತು ಸಮಾಜವನ್ನು ಅರಿತುಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಎಂದು ಆದಿತ್ಯನಾಥ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರಿಗೆ ಯುಪಿ ಸರ್ಕಾರದ ಕಾನೂನು ಆಯೋಗವು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಸಹ ಸಿದ್ಧಪಡಿಸಿದೆ. ಆಯೋಗವು ‘ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಮಸೂದೆ, 2021 ರ ಅಂತಿಮ ಕರಡನ್ನು ಬಿಡುಗಡೆ ಮಾಡಿದೆ ಮತ್ತು ಜುಲೈ 19 ರೊಳಗೆ ಸಲಹೆಗಳನ್ನು ಆಹ್ವಾನಿಸಿದೆ.

ಕರಡು ಮಸೂದೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.

ಹೆಚ್ಚು ಸಮನಾದ ವಿತರಣೆಯೊಂದಿಗೆ ಸುಸ್ಥಿರ ಅಭಿವೃದ್ಧಿಯ ಉತ್ತೇಜನಕ್ಕಾಗಿ ರಾಜ್ಯದ ಜನಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ಸ್ಥಿರಗೊಳಿಸುವುದು ಅಗತ್ಯ ಎಂದು ಕರಡು ಹೇಳುತ್ತದೆ. ಈ ಶಾಸನದ ನಿಬಂಧನೆಯು ವಿವಾಹಿತ ದಂಪತಿಗೆ ಅನ್ವಯಿಸುತ್ತದೆ, ಅಲ್ಲಿ ಹುಡುಗ 21 ವರ್ಷಕ್ಕಿಂತ ಕಡಿಮೆ ಮತ್ತು ಹುಡುಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಾರದು.

ಇದನ್ನೂ ಓದಿ:  ವಿಶ್ವ ಜನಸಂಖ್ಯಾ ದಿನ: ಸರ್ಕಾರಿ ಉದ್ಯೋಗಿ ಒಂದೇ ಮಗು ನೀತಿ ಆಳವಡಿಸಿಕೊಂಡರೆ 4 ಇನ್​ಕ್ರಿಮೆಂಟ್ ಎಕ್ಸ್​ಟ್ರಾ! ಏನಿದರ ಹಕೀಕತ್ತು?

ಇದನ್ನೂ ಓದಿಸಾಮಾಜಿಕ ಅಸಮಾನತೆಗೆ ಜನಸಂಖ್ಯೆ ಹೆಚ್ಚಳ ಕಾರಣ; ಜಾಗೃತಿ ಮೂಡಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮನವಿ

(Every community has been taken care of in this policy Yogi Adityanath unveiled UP population policy)