ಸಾಮಾಜಿಕ ಅಸಮಾನತೆಗೆ ಜನಸಂಖ್ಯೆ ಹೆಚ್ಚಳ ಕಾರಣ; ಜಾಗೃತಿ ಮೂಡಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮನವಿ
Yogi Adityanath: ಈ 'ವಿಶ್ವ ಜನಸಂಖ್ಯಾ ದಿನದಂದು', ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ಮತ್ತು ಸಮಾಜವನ್ನು ಅರಿತುಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ" ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.
ದೆಹಲಿ: ಅಸಮಾನತೆ, ಸಮಾಜದಲ್ಲಿನ ಸಮಸ್ಯೆ ಮುಂತಾದ ಪ್ರಮುಖ ಸಮಸ್ಯೆಗಳ ಹಿಂದೆ ಜನಸಂಖ್ಯೆಯ ಏರಿಕೆಯೇ ಮೂಲ ಕಾರಣ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜನರನ್ನು ಒತ್ತಾಯಿಸಿದರು. ವಿಶ್ವ ಜನಸಂಖ್ಯಾ ದಿನವಾದ ಇಂದು ಮಾತನಾಡಿದ ಅವರು ‘ಆಧುನಿಕ ಸಮಾಜ’ ನಿರ್ಮಾಣಕ್ಕೆ ಜನಸಂಖ್ಯೆ ನಿಯಂತ್ರಣವು ಒಂದು ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆ ಏರಿಕೆಯ ಸಮಸ್ಯೆಗಳ ಕುರಿತು ಮಾತನಾಡಿದ ಆದಿತ್ಯನಾಥ “ಜನಸಂಖ್ಯೆ ಏರಿಕೆಯು ಸಮಾಜದಲ್ಲಿ ಚಾಲ್ತಿಯಲ್ಲಿರುವ ಅಸಮಾನತೆ ಸೇರಿದಂತೆ ಪ್ರಮುಖ ಸಮಸ್ಯೆಗಳ ಮೂಲ ಕಾರಣವಾಗಿದೆ. ಮುಂದುವರಿದ ಸಮಾಜದ ಸ್ಥಾಪನೆಗೆ ಜನಸಂಖ್ಯಾ ನಿಯಂತ್ರಣ ಮುಖ್ಯ” ಎಂದು ಹೇಳಿದರು. ಸುಮಾರು 22 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.
ವಿಶೇಷವೆಂದರೆ ಉತ್ತರ ಪ್ರದೇಶ ಕಾನೂನು ಆಯೋಗವು ಒಂದು ದಿನದ ಹಿಂದೆ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣವನ್ನು ಗುರಿಯಾಗಿಟ್ಟುಕೊಂಡು ‘ಎರಡು ಮಕ್ಕಳ ನೀತಿ’ ಪ್ರಸ್ತಾಪಿಸಿತ್ತು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಭಾನುವಾರ ಹೊಸ ನೀತಿಯನ್ನು ಪ್ರಕಟಿಸಲು ಸಜ್ಜಾಗಿದೆ. ವಿಧಾನಸಭಾ ಚುನಾವಣೆ ಹೊತ್ತಲ್ಲಿ ಇದು ಮಹತ್ತರ ನಿರ್ಧಾರವಾಗಿ ಪರಿಗಣಿಸಲ್ಪಟ್ಟಿದೆ. ಉತ್ತರ ಪ್ರದೇಶ ಸರ್ಕಾರದ ವೆಬ್‌ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್ ಆಗಿರುವ ಕರಡು ಜನಸಂಖ್ಯಾ ನಿಯಂತ್ರಣ ಮಸೂದೆಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸಹಾಯ ಮಾಡುವವರಿಗೆ ಸರ್ಕಾರದ ಪ್ರೋತ್ಸಾಹ ನೀಡುವ ಅವಕಾಶವಿದೆ.
Increasing population is the root of major problems including inequality prevailing in the society. Population control is the primary condition for the establishment of a progressive society, tweets Chief Minister Yogi Adityanath pic.twitter.com/WhZhe3bZns
— ANI UP (@ANINewsUP) July 11, 2021
ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ ಅವರು ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಜನರನ್ನು ಕೋರಿದರು.
ಈ ‘ವಿಶ್ವ ಜನಸಂಖ್ಯಾ ದಿನದಂದು’ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ಮತ್ತು ಸಮಾಜವನ್ನು ಅರಿತುಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ” ಎಂದು ಯೋಗಿ ಆದಿತ್ಯನಾಥ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದು ಅನುಷ್ಠಾನವಾದರೆ 2021 ರ ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಮಸೂದೆ, ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರಿ ಉದ್ಯೋಗಗಳಿಗೆ ಅನರ್ಹರನ್ನಾಗಿ ಮಾಡುತ್ತದೆ.ಈಗಾಗಲೇ ಸೇವೆಯಲ್ಲಿರುವವರನ್ನು ಬಡ್ತಿಗಾಗಿ ಅನರ್ಹಗೊಳಿಸುತ್ತದೆ ಮತ್ತು 77 ಯೋಜನೆಗಳ ಪ್ರಯೋಜನಗಳಿಂದ ಹೊರಗಿಡುತ್ತದೆ. ಪ್ರಸ್ತಾವಿತ ಶಾಸನವು ಇಬ್ಬರು ಮಕ್ಕಳು ಅಥವಾ ಅದಕ್ಕಿಂತ ಕಡಿಮೆ ಇರುವವರಿಗೆ ತೆರಿಗೆ ರಿಯಾಯಿತಿಯಂತಹ ಪ್ರೋತ್ಸಾಹಕಗಳನ್ನು ಸೂಚಿಸುತ್ತದೆ.
ಇದನ್ನೂ ಓದಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಸ್ವೀಕರಿಸುತ್ತೇನೆ ಎಂದ ಸಿಎಂ ಯೋಗಿ ಆದಿತ್ಯನಾಥ್
(Rising population is the root of major problem such as inequality says Uttar Pradesh CM Yogi Adityanath on World Population Day)
Published On - 11:32 am, Sun, 11 July 21