ಕೇರಳದಲ್ಲಿ ಒಟ್ಟು 15 ಝಿಕಾ ವೈರಸ್ ಕೇಸ್‌ ಪತ್ತೆ.. ಕರ್ನಾಟಕ-ಕೇರಳ ಗಡಿ ಚೆಕ್‌ಪೋಸ್ಟ್‌ನಲ್ಲಿ ಅಲರ್ಟ್

ಕೇರಳದಲ್ಲಿ ಝಿಕಾ ವೈರಸ್ ಪತ್ತೆ ಹಿನ್ನೆಲೆ ಕೇರಳದಿಂದ ಬರುವವರ ಮೇಲೆ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಚೆಕ್‌ಪೋಸ್ಟ್‌ನಲ್ಲಿ ಪ್ರತಿ ವಾಹನ ಸವಾರರ ತಪಾಸಣೆ ಮಾಡಲಾಗುತ್ತಿದೆ.

ಕೇರಳದಲ್ಲಿ ಒಟ್ಟು 15 ಝಿಕಾ ವೈರಸ್ ಕೇಸ್‌ ಪತ್ತೆ.. ಕರ್ನಾಟಕ-ಕೇರಳ ಗಡಿ ಚೆಕ್‌ಪೋಸ್ಟ್‌ನಲ್ಲಿ ಅಲರ್ಟ್
ರೋಗ ಹರಡುವ ಸೊಳ್ಳೆ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 11:15 AM

ನೆರೆಯ ಕೇರಳದಲ್ಲಿ ಕೊರೊನಾ ಸೋಂಕಿನ ನಡುವೆ ಝಿಕಾ ವೈರಸ್ ಕೇಸ್ ಹೆಚ್ಚಳವಾಗಿದೆ. ಈಗ ಮತ್ತೊಂದು ಝಿಕಾ ವೈರಸ್ ಕೇಸ್ ಪತ್ತೆಯಾಗಿದ್ದು ಕೇರಳದಲ್ಲಿ ಒಟ್ಟು 15 ಝಿಕಾ ವೈರಸ್ ಕೇಸ್‌ಗಳು ದೃಢವಾಗಿದೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ.

ಕರ್ನಾಟಕ-ಕೇರಳ ಗಡಿ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಅಲರ್ಟ್ ಇನ್ನು ಕೇರಳದಲ್ಲಿ ಝಿಕಾ ವೈರಸ್ ಪತ್ತೆ ಹಿನ್ನೆಲೆ ಕೇರಳದಿಂದ ಬರುವವರ ಮೇಲೆ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಚೆಕ್‌ಪೋಸ್ಟ್‌ನಲ್ಲಿ ಪ್ರತಿ ವಾಹನ ಸವಾರರ ತಪಾಸಣೆ ಮಾಡಲಾಗುತ್ತಿದೆ. ವಾಹನ ಸವಾರರ ಕೊವಿಡ್ ನೆಗೆಟಿವ್ ವರದಿ ಪರಿಶೀಲನೆ ಮಾಡಲಾಗುತ್ತಿದೆ. ನೆಗೆಟಿವ್ ವರದಿ, 2 ಡೋಸ್ ಕೊವಿಡ್ ಲಸಿಕೆ ಪಡೆದವರು, 2 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಗಡಿಯೊಳಗೆ ಎಂಟ್ರಿ ಕೊಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಝಿಕಾ ವೈರಸ್ ಗಂಭೀರತೆ ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸಹಾಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿತ್ತು. ಈಗಾಗಲೇ 6 ಜನ ತಜ್ಞರ ತಂಡವನ್ನು ಕೇರಳಕ್ಕೆ ಕಳಿಸಲಾಗಿದೆ.

ಏನಿದು ಝಿಕಾ ವೈರಸ್? ಝಿಕಾ ವೈರಸ್ ಎಂಬುದು ಈಡಿಸ್ ಎಂಬ ಸೊಳ್ಳೆಯಿಂದ ಹುಟ್ಟುವ ಸೋಂಕು ಆಗಿದ್ದು, ಮೊದಲು ಪತ್ತೆಯಾಗಿದ್ದು 1947ರಲ್ಲಿ ಉಗಾಂಡಾದಲ್ಲಿ. ಮೊದಲು ಮಂಗಗಳಲ್ಲಿ ಕಾಣಿಸಿಕೊಂಡ ಕಾಯಿಲೆ ನಂತರ 1952ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮಾನವರಲ್ಲಿಯೂ ಪತ್ತೆಯಾಯ್ತು. 1960ರಿಂದ 1980ರ ಸುಮಾರಿಗೆ ಆಫ್ರಿಕಾ, ಏಷ್ಯಾ, ಅಮೆರಿಕಾಗಳಿಗೆ ಕಾಲಿಟ್ಟಿತು. ಸಾಮಾನ್ಯ ಜ್ವರ, ಮೈಮೇಲೆ ಕೆಂಪು ಕಲೆ, ಕೆಂಪು ಕಣ್ಣುಗಳು, ಸಂಧಿವಾತ, ಸ್ನಾಯು ನೋವು ಇತ್ಯಾದಿಗಳು ರೋಗ ಲಕ್ಷಣಗಳಾಗಿವೆ. ಝಿಕಾ ವೈರಸ್ ದೇಹವನ್ನು ಪ್ರವೇಶಿಸಿದ ಮೂರನೇ ದಿನದಿಂದ 12 ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಇದು ತೀವ್ರವಾಗಿ ಬಾಧಿಸುವುದಿಲ್ಲ.

ಇದನ್ನೂ ಓದಿ: Zika Virus: ಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್​ ಪತ್ತೆ; ರಾಜ್ಯ ಸರ್ಕಾರದ ಸಹಾಯಕ್ಕೆ ಆಗಮಿಸಿದ ಕೇಂದ್ರ ತಜ್ಞರ ತಂಡ