ಕೊರೊನಾ ಭೀತಿ ಮರೆತ ಮಂಡ್ಯ ಜನ; ಭಾನುವಾರದ ಕುರಿ ಸಂತೆಯಲ್ಲಿ ಜನ ಜಂಗುಳಿ
ಜಿಲ್ಲೆಯ ಜನ ಕೊರೊನಾ ಭೀತಿ ಮರೆತು ಮಾರುಕಟ್ಟೆಯಲ್ಲಿ ಸೇರಿದ್ದಾರೆ. ಕೆಆರ್ಎಸ್ನ ಭಾನುವಾರದ ಕುರಿ ಸಂತೆಯಲ್ಲಿ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದಂತೆ ಮೈ ಮರೆತ ಜನರು, ಮಾಸ್ಕ್ ಹಾಕಿಕೊಳ್ಳದೆ ಗುಂಪು ಗುಂಪಾಗಿ ನಿಂತು ಕುರಿ ವ್ಯಾಪಾರ ಮಾಡುತ್ತಿದ್ದಾರೆ.
ಮಂಡ್ಯ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡ ಹಿನ್ನೆಲೆ ವೀಕೆಂಡ್ ಕರ್ಫ್ಯೂ ರುದ್ಧುಗೊಳಿಸಲಾಗಿದೆ. ಆದರೆ ಜನ ಕೆಲ ನಿಯಮಗಳನ್ನು ಅನುಸರಿಸದಿದ್ದರೆ ಮತ್ತೆ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಿದ್ದು, ಜಿಲ್ಲೆಯ ಜನ ಕೊರೊನಾ ಭೀತಿ ಮರೆತು ಮಾರುಕಟ್ಟೆಯಲ್ಲಿ ಸೇರಿದ್ದಾರೆ. ಕೆಆರ್ಎಸ್ನ ಭಾನುವಾರದ ಕುರಿ ಸಂತೆಯಲ್ಲಿ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದಂತೆ ಮೈ ಮರೆತ ಜನರು, ಮಾಸ್ಕ್ ಹಾಕಿಕೊಳ್ಳದೆ ಗುಂಪು ಗುಂಪಾಗಿ ನಿಂತು ಕುರಿ ವ್ಯಾಪಾರ ಮಾಡುತ್ತಿದ್ದಾರೆ.
ಆದರೆ ಯಾದಗಿರಿಯಲ್ಲಿ ವೀಕೆಂಡ್ ಕರ್ಫ್ಯೂ ರದ್ಧಾಗಿದ್ದರೂ ಮನೆ ಬಿಟ್ಟು ಜನ ಹೊರಗೆ ಬಂದಿಲ್ಲ. ಜಿಟಿ ಜಿಟಿ ಮಳೆ ಬರುತ್ತಿರುವ ಹಿನ್ನೆಲೆ ಜನ ಹೊರಗೆ ಬಂದಿಲ್ಲ. ಗ್ರಾಹಕರಿಲ್ಲದೆ ತರಕಾರಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ. ನಗರದ ಹಳೆ ಬಸ್ ನಿಲ್ದಾಣದ ಹಿಂಬದಿಯ ಮಾರುಕಟ್ಟೆಯಲ್ಲಿ ಹತ್ತಾರು ಮಂದಿ ಮಾತ್ರ ಮನೆಯಿಂದ ಹೊರ ಬಂದು ತರಕಾರಿಯನ್ನು ಖರೀದಿಸುತ್ತಿದ್ದಾರೆ.
ಕೋಲಾರದಲ್ಲೂ ಅನ್ಲಾಕ್ ನಂತರದ ಮೊದಲ ವೀಕೆಂಡ್ ಸಂಡೇಯಲ್ಲಿ ಜನರ ಓಡಾಟ ವಿರಳವಾಗಿದೆ. ಮಾರುಕಟ್ಟೆಯಲ್ಲೂ ಹೆಚ್ಚಿನ ಜನ ಕಂಡುಬಂದಿಲ್ಲ. ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಜನ ಜಾತ್ರೆ ಸೇರಿದೆ ದೈಹಿಕ ಅಂತರವಿಲ್ಲದೇ ತರಕಾರಿ ಖರೀದಿಸುವಲ್ಲಿ ಜನ ಬ್ಯುಸಿಯಾಗಿದ್ದಾರೆ. ಇನ್ನು ಕಲಬುರಗಿಯಲ್ಲಿ ಅನ್ಲಾಕ್ ನಂತರ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರಿಸಿಲ್ಲ. ನಗರದ ಸೂಪರ್ ಮಾರ್ಕೇಟ್ ಖಾಲಿ ಖಾಲಿಯಾಗಿದ್ದು, ವೀಕೆಂಡ್ ಇದ್ದರು ಮನೆಯಿಂದ ಹೆಚ್ಚು ಜನ ಹೊರ ಬಂದಿಲ್ಲ.
ತುಮಕೂರು, ಮೈಸೂರು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ವಿರಳವಾಗಿದ್ದರೆ, ಚಿತ್ರದುರ್ಗ ಮತ್ತು ರಾಮನಗರ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಸೇರಿದೆ. ಮಾಸ್ಕ್ ಧರಿಸದೆ ತರಕಾರಿ ವ್ಯಾಪಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇನ್ನು ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಜನರು ಓಡಾಡುತ್ತಿದ್ದಾರೆ.
ಇದನ್ನೂ ಓದಿ
ಸಂಸದ ಕರಡಿ ಸಂಗಣ್ಣ ಹಾಲುಮತ ಸಮಾಜದ ಕ್ಷಮೆ ಕೇಳಬೇಕು -ರುದ್ರಣ್ಣ ಗುಳಗುಳಿ ಆಕ್ರೋಶ
ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್ ಕಳ್ಳತನ; ಸೂಟು ಬೂಟು ಧರಿಸಿ ಬಂದ ಕಳ್ಳನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
(Karnataka Districts Buyers violated Corona rules)