AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ; ಸೂಟು ಬೂಟು ಧರಿಸಿ ಬಂದ ಕಳ್ಳನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಜುಲೈ 7 ರಂದು ಮಧ್ಯಾಹ್ನ 3 ಗಂಟೆ 50 ನಿಮಿಷ ಸುಮಾರಿಗೆ ಈ ಘಟನೆ ನಡೆದಿದ್ದು, ಘಟ‌ನೆ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ನಿನ್ನೆ ( ಜುಲೈ 10) ಕೂಡ ಸೋನ ಟವರ್ ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನವಾಗಿದ್ದು, ಬೆಳಗಿನ ಜಾವ 5.30 ರ ಸುಮಾರಿಗೆ ಬಂದ ಕಳ್ಳರು, ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ. ಸದ್ಯ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ; ಸೂಟು ಬೂಟು ಧರಿಸಿ ಬಂದ ಕಳ್ಳನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸೋನಾ ಟವರ್ ಅಪಾರ್ಟ್‌ಮೆಂಟ್‌
TV9 Web
| Edited By: |

Updated on:Jul 11, 2021 | 9:49 AM

Share

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡಿದ ಘಟನೆಯೊಂದು ಬೆಂಗಳೂರಿನ ವೀರನಪಾಳ್ಯದ ಸೋನಾ ಟವರ್ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ನಡೆದಿದೆ. ಸ್ನೇಹಾ ಎಂಬುವವರಿಗೆ ಸೇರಿದ ಲ್ಯಾಪ್‌ಟಾಪ್ ಕಳ್ಳತನವಾಗಿದ್ದು, ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬಾಗಿಲು‌ ಓಪನ್ ಇರುವುದನ್ನು ನೋಡಿ ಮನೆ ಒಳಗೆ ನುಗ್ಗಿ ಲ್ಯಾಪ್​ಟಾಪ್​ ಹೊತ್ತೋಯ್ದಿದ್ದಾನೆ. ಸದ್ಯ ಕಳ್ಳತನದ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್​ಮೆಂಟ್​ನ 4 ಮಹಡಿ ಇಡೀ ಓಡಾಡಿದ್ದ ವ್ಯಕ್ತಿ, ಓಪನ್​ ಇದ್ದ ಮನೆಗಳನ್ನೇ ಟಾರ್ಗೆಟ್​ ಮಾಡಿದ್ದಾನೆ. ಬಾಗಿಲು ಓಪನ್ ಇಟ್ಟು ಬಾಲ್ಕನಿಯಲ್ಲಿ ಸ್ನೇಹ ನಿಂತಿದ್ದರು, ಇನ್ನು ಸ್ನೇಹ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಆದರೆ ಈ ವೇಳೆ ಹಾಲ್​ನಲ್ಲಿ ಯಾರು ಇರಲಿಲ್ಲ. ಇದನ್ನು ಕಿಟಕಿ ಮೂಲಕ ನೋಡಿ ಖಾತರಿ ಪಡಿಸಿಕೊಂಡ ಕಳ್ಳ, ನಂತರ ಒಳಗೆ ನುಗ್ಗಿ ಡೈನಿಂಗ್ ಟೇಬಲ್​ನಲ್ಲಿ ಇದ್ದ ಲ್ಯಾಪ್​ಟಾಪ್​ ಕದ್ದು ಪರಾರಿಯಾಗಿದ್ದಾನೆ.

ಜುಲೈ 7 ರಂದು ಮಧ್ಯಾಹ್ನ 3 ಗಂಟೆ 50 ನಿಮಿಷ ಸುಮಾರಿಗೆ ಈ ಘಟನೆ ನಡೆದಿದ್ದು, ಘಟ‌ನೆ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ನಿನ್ನೆ ( ಜುಲೈ 10) ಕೂಡ ಸೋನ ಟವರ್ ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನವಾಗಿದ್ದು, ಬೆಳಗಿನ ಜಾವ 5.30 ರ ಸುಮಾರಿಗೆ ಬಂದ ಕಳ್ಳರು, ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ. ಸದ್ಯ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೀರಗೊಂಡನಹಳ್ಳಿ ಕೊಟ್ಟಿಗೆಯಲ್ಲಿದ್ದ 2 ಹಸು ಕಳವು ಕೊಟ್ಟಿಗೆಯಲ್ಲಿದ್ದ 2 ಹಸು ಕಳವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ. ರೈತ ಹರೀಶ್‌ ಕುಮಾರ್‌ಗೆ ಸೇರಿದ 2 ಸೀಮೆಹಸು ಕಳ್ಳತನವಾಗಿದೆ. ದಿನದಲ್ಲಿ 30 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ಇದಾಗಿದ್ದು, ಜೀವನಾಧಾರವಾಗಿದ್ದ ಹಸುಗಳನ್ನು ಕಳೆದುಕೊಂಡು ರೈತ ಹರೀಶ್ ಕಂಗಾಲಾಗಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ

Published On - 9:41 am, Sun, 11 July 21

Follow Us
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!