Car Fire: ರಾಂಚಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ತಮ್ಮ ಜೀವದ ಹಂಗನ್ನು ತೊರೆದು ಐವರ ಜೀವ ರಕ್ಷಿಸಿದ ಪೊಲೀಸ್ ತಂಡ

|

Updated on: Feb 06, 2023 | 9:01 AM

ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವಾಗ ಜೀವದ ಹಂಗನ್ನೂ ತೊರೆದು ಪೊಲೀಸರ ತಂಡ ಐವರನ್ನು ರಕ್ಷಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

Car Fire: ರಾಂಚಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ತಮ್ಮ ಜೀವದ ಹಂಗನ್ನು ತೊರೆದು ಐವರ ಜೀವ ರಕ್ಷಿಸಿದ ಪೊಲೀಸ್ ತಂಡ
ಚಲಿಸುತ್ತಿದ್ದ ಕಾರಿಗೆ ಬೆಂಕಿ
Follow us on

ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವಾಗ ಜೀವದ ಹಂಗನ್ನೂ ತೊರೆದು ಪೊಲೀಸರ ತಂಡ ಐವರನ್ನು ರಕ್ಷಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಕಾರಿನಲ್ಲಿ ಮಹಿಳೆ, ಮಕ್ಕಳು ಸೇರಿ ಐದು ಮಂದಿ ಚಲಿಸುತ್ತಿದ್ದರು, ಈ ಘಟನೆ ರಾಂಚಿಯ ಐಟಿಬಿಪಿ ಬಳಿಯ ರಿಂಗ್​ ರೋಡ್​ನಲ್ಲಿ ನಡೆದಿದೆ. ರಾಂಚಿಯ ನಿವಾಸಿ ದಾಮೋದರ್ ಗೋಪ್ ಅವರು ತಮ್ಮ ಕುಟುಂಬದೊಂದಿಗೆ ರಾಂಚಿಯ ಬೋರಿಯಾಕ್ಕೆ ಸಂಬಂಧಿಕರ ಸ್ಥಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು.

ಅವರ ಕಾರು ಐಟಿಬಿಪಿ ಕ್ಯಾಂಪ್ ದಾಟುತ್ತಿದ್ದಾಗ ಇದ್ದಕ್ಕಿಂದ್ದಂತೆ ಕಾರು ಬ್ರೇಕ್ ಫೇಲ್ ಆಗಿತ್ತು ತಕ್ಷಣ ಕಾರಿನ ಎಂಜಿನ್​ಗೆ ಬೆಂಕಿ ಹೊತ್ತಿಕೊಂಡಿತ್ತು.
ದಾಮೋದರ್ ಗೋಪ್ ಹೇಗಾದರೂ ಮಾಡಿ ಐಟಿಬಿಪಿ ಕ್ಯಾಂಪ್ ಬಳಿ ಹೋಗಿ ತನ್ನ ಕಾರನ್ನು ನಿಲ್ಲಿಸಿದರು. ಈ ವೇಳೆ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎಲ್ಲಾ ಡೋರ್​ಗಳು ಲಾಕ್ ಆಗಿದ್ದವು, ದಾಮೋದರ್ ಕಾರಿನ ಬಾಗಿಲು ತೆಗೆಯ ಬಯಸಿದರೂ ಸಾರ್ಧಯವಾಗಲಿಲ್ಲ, ಮಕ್ಕಳು ಪತ್ನಿ ಭಯದಿಂದ ಕುರುಚತೊಡಗಿದರು. ಕಾರು ನಿಲ್ಲಿಸಿದ ಬಳಿಕಸ್ಥಳೀಯರು ಹೇಗಾದರೂ ಮಾಡಿ ಎಲ್ಲಾ ಸವಾರರನ್ನು ಹೊರ ತೆಗೆಯಲು ಪ್ರಯತ್ನಿಸಿದರು. ಇದೇ ವೇಳೆ ರಾಂಚಿಯ ಎಸ್​ಎಸ್​ಪಿ ಕಿಶೋರ್ ಕೌಶಲ್ ಅವರ ವಿಶೇಷ ತಂಡ ಅದೇ ಮಾರ್ಗವಾಗಿ ಸಾಗುತ್ತಿತ್ತು.

ಮತ್ತಷ್ಟು ಓದಿ: Viral Video: ಗುರುಗ್ರಾಮದಲ್ಲಿ ಬೈಕನ್ನು 4 ಕಿ.ಮೀ. ಎಳೆದೊಯ್ದ ಕಾರು; ರಸ್ತೆಯಲ್ಲಿ ಬೆಂಕಿ ಕಿಡಿ ಹಾರುವ ವಿಡಿಯೋ ವೈರಲ್

ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ವಿಶೇಷ ತಂಡದ ಪ್ರವೀಣ್ ತಿವಾರಿ, ಕೃಷ್ಣ, ವಿನಯ್ ಕಾರಿನ ಗಾಜು ಒಡೆದು ಪ್ರಾಣವನ್ನೇ ಪಣಕ್ಕಿಟ್ಟು ಇಡೀ ಕುಟುಂಬದವರನ್ನು ಕಾರಿನಿಂದ ಸುರಕ್ಷಿತವಾಗಿ ಕೆಳಕ್ಕಿಳಿಸಿದ್ದಾರೆ.

ಎಸ್​ಎಸ್​ಪಿಯವರ ವಿಶೇಷ ತಂಡವು ರಕ್ಷಣೆಗೆ ಸ್ವಲ್ಪ ವಿಳಂಬ ಮಾಡಿದ್ದರೂ, ದುರ್ಘಟನೆಯೇ ಸಂಭವಿಸುತ್ತಿತ್ತು. ಅವರನ್ನು ಹೊರ ತೆಗೆದು 5 ನಿಮಿಷಗಳಲ್ಲಿ ಕಾರು ಸುಟ್ಟು ಬೂದಿಯಾಯಿತು.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ರಾಂಚಿ ರಿಂಗ್​ ರಸ್ತೆ ಬಳಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಎಸ್​ಎಸ್​ಪಿ ಅವರ ವಿಶೇಷ ತಂಡ ಅತ್ಯುತ್ತಮ ಕೆಲಸ ಮಾಡುವ ಮೂಲಕ ಜನರ ಪ್ರಾಣ ಉಳಿಸಿದೆ. ಇತ್ತೀಚಿನ ದಿನಗಳಲ್ಲಿ ಉಗ್ರರ ಚಲನವಲನವನ್ನು ಗಮನದಲ್ಲಿಟ್ಟುಕೊಂಡು ಎಸ್​ಎಸ್​ಪಿಯ ವಿಶೇಷ ತಂಡ ಗ್ರಾಮೀಣ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ