Viral Video: ಗುರುಗ್ರಾಮದಲ್ಲಿ ಬೈಕನ್ನು 4 ಕಿ.ಮೀ. ಎಳೆದೊಯ್ದ ಕಾರು; ರಸ್ತೆಯಲ್ಲಿ ಬೆಂಕಿ ಕಿಡಿ ಹಾರುವ ವಿಡಿಯೋ ವೈರಲ್
ಗುರುಗ್ರಾಮದ ಸೆಕ್ಟರ್ 65ರಲ್ಲಿ ಹೋಂಡಾ ಸಿಟಿ ಕಾರೊಂದು ಬೈಕ್ ಅನ್ನು ಎಳೆದುಕೊಂಡು ಹೋಗುತ್ತಿರುವಾಗ ಸಾಕಷ್ಟು ಬೆಂಕಿಯ ಕಿಡಿಗಳು ಹಾರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಗುರುಗ್ರಾಮ: ದೆಹಲಿಯ ಖಂಜಾವಾಲಾದಲ್ಲಿ ಅಂಜಲಿ ಸಿಂಗ್ (Anjali Singh) ಎಂಬ ಯುವತಿಯನ್ನು ಕಾರಿನಡಿ ಕಿಲೋಮೀಟರ್‌ಗಟ್ಟಲೆ ಎಳೆದುಕೊಂಡು ಹೋದ ಘಟನೆ ಇನ್ನೂ ಮಾಸಿಲ್ಲ. ಅದರ ಬೆನ್ನಲ್ಲೇ ಫೆ. 1ರಂದು ಹರಿಯಾಣದ ಗುರುಗ್ರಾಮ (Gurugram) ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದು, 4 ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿರುವ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.
ಈ ವೈರಲ್ ವಿಡಿಯೋದಲ್ಲಿ ಗುರುಗ್ರಾಮದ ಸೆಕ್ಟರ್ 65ರಲ್ಲಿ ಹೋಂಡಾ ಸಿಟಿ ಕಾರೊಂದು ಬೈಕ್ ಅನ್ನು ಎಳೆದುಕೊಂಡು ಹೋಗುತ್ತಿರುವಾಗ ಸಾಕಷ್ಟು ಬೆಂಕಿಯ ಕಿಡಿಗಳು ಹಾರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬುಧವಾರ ರಾತ್ರಿ ವೇಗವಾಗಿ ಬಂದ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗೆ ಡಿಕ್ಕಿ ಹೊಡೆದು, ಆ ಬೈಕನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Germany: ಮಕ್ಕಳಿಗೆ ಡಿಕ್ಕಿ ಹೊಡೆದು ನೂರಾರು ಮೀಟರ್ ಎಳೆದೊಯ್ದ ರೈಲು, ಓರ್ವ ಸಾವು
ಆ ಬೈಕ್ ಮಾಲೀಕ ಬೈಕ್ ಪಕ್ಕದಲ್ಲಿ ನಿಂತಿದ್ದರಿಂದ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯನ್ನು ವಿವರಿಸಿದ ಬೈಕ್ ಮಾಲೀಕರು, ನಾನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ನ ಬಳಿ ನಿಂತಿದ್ದಾಗ ಕಾರು ನನ್ನ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವೃತ್ತಿಯಲ್ಲಿ ಬೌನ್ಸರ್ ಆಗಿರುವ ಬೈಕ್ ಮಾಲೀಕರು ತಿಳಿಸಿದ್ದಾರೆ.
Gurugram – Car dragged bike for 4 kms. Bike rider collided with two youths in sector 62 #Gurugram #Accident pic.twitter.com/NPzK7jvdyt
— Dal Baati Churma Rajasthani Surma (@Dal_Bati_Curma) February 3, 2023
ಬೌನ್ಸರ್ ಅನ್ನು ಮೋನು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ತನ್ನ ಬೈಕ್ಗೆ ಸಾಕಷ್ಟು ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ವೈರಲ್ ವಿಡಿಯೋವನ್ನು ಗಮನಿಸಿದ ಪೊಲೀಸರು ಮೋನು ಅವರನ್ನು ಸಂಪರ್ಕಿಸಿ ನಂತರ ದೂರು ದಾಖಲಿಸಿದ್ದಾರೆ. ಬೈಕ್ ಹೊರಬಂದ ನಂತರ ಕಾರು ಚಾಲಕ ತನ್ನ ಹೋಂಡಾ ಸಿಟಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಆದರೆ, ಪೊಲೀಸರು ಹೋಂಡಾ ಸಿಟಿ ಕಾರಿನ ಮಾಲೀಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Viral Video: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿಯನ್ನು ಕಾರಿನಲ್ಲಿ ಎಳೆದುಕೊಂಡು ಹೋದ ವಿಡಿಯೋ ವೈರಲ್
ನಾವು ಆರೋಪಿಯನ್ನು ಫರಿದಾಬಾದ್ ನಿವಾಸಿ ಸುಶಾಂತ್ ಮೆಹ್ತಾ ಎಂದು ಗುರುತಿಸಿದ್ದೇವೆ. ಅವರ ಕಾರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಆರೋಪಿಯು ಸೆಕ್ಟರ್ 63ರಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಗುರುಗ್ರಾಮ ಪೊಲೀಸ್ ವಕ್ತಾರ ಸುಭಾಷ್ ಬೋಕೆನ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 3 February 23