AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕು ತಾಯಿಗೆ ಬೆಂಕಿ ಹಚ್ಚಿದ್ದ, ಜೈಲಿಂದ ಬಂದು ತಂದೆಗೂ ಬೆದರಿಕೆ ಹಾಕಿದ್ದ ಮಗ: ಹರಸಾಹಸಪಟ್ಟು ಪೊಲೀಸರು ಮತ್ತೆ ಅವನನ್ನು ಜೈಲಿಗಟ್ಟಿದರು

ಸೈಕೊ‌ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್ ಸಾಕು ತಂದೆ ಮಂಜುನಾಥ್ ತಮಗೆ ಮಕ್ಕಳಿಲ್ಲದ ಕಾರಣ ಬಾಲ್ಯದಲ್ಲೇ ಉತ್ತಮ್ ನನ್ನು ದತ್ತು ಪಡೆದಿದ್ದರು. ಆದ್ರೆ ಉತ್ತಮ್ ಒಳ್ಳೆಯ ಉತ್ತಮ ಮಗನಾಗಲಿಲ್ಲ. ಚಿಕ್ಕ ವಿಚಾರಕ್ಕೆ ಸಾಕು ತಾಯಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿ ಜೈಲು ಸೇರಿದ್ದ.

ಸಾಕು ತಾಯಿಗೆ ಬೆಂಕಿ ಹಚ್ಚಿದ್ದ, ಜೈಲಿಂದ ಬಂದು ತಂದೆಗೂ ಬೆದರಿಕೆ ಹಾಕಿದ್ದ ಮಗ:  ಹರಸಾಹಸಪಟ್ಟು ಪೊಲೀಸರು ಮತ್ತೆ ಅವನನ್ನು ಜೈಲಿಗಟ್ಟಿದರು
ಸೈಕೊ‌ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್
TV9 Web
| Edited By: |

Updated on:Feb 04, 2023 | 8:15 AM

Share

ಬೆಂಗಳೂರು: ನಗರದಲ್ಲಿ ಒಬ್ಬ ಸೈಕೊ‌ ಮನಸ್ಥಿತಿಯ ಯುವಕ ಪತ್ತೆಯಾಗಿದ್ದಾನೆ. ಇವನ ಬಗ್ಗೆ ಕೇಳಿದ್ರೆ ನೀವು ದಂಗಾಗಿ ಹೋಗುತ್ತೀರಾ. ತಂದೆ-ತಾಯಿ ಇಲ್ಲದ ಅನಾಥ ಮಗುವೆಂದು ಆಶ್ರಯ ನೀಡಿದ್ದೇ ಆ ದಂಪತಿಗೆ ಕಂಟಕವಾಗಿದೆ. ಈ ಸೈಕೊ‌ ಮನಸ್ಥಿತಿಯ ಯುವಕ ತನ್ನ ಸಾಕು ಅಪ್ಪ-ಅಮ್ಮನ ಖುಣ ತೀರಿಸಿದನ್ನು ಕೇಳಿದ್ರೆ ಇಂತಹ ನೀಚನಿಗೆ ಆಶ್ರಯ ನೀಡಬಾರದಿತ್ತು ಎಂದು ಶಾಪ ಹಾಕ್ತೀರಾ.

ಸಾಕು ತಾಯಿಗೆ ಬೆಂಕಿ ಇಟ್ಟ

ಸೈಕೊ‌ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್, 2018ರಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ತನ್ನ ಸಾಕು ತಾಯಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ ಸಾಕು ತಂದೆಯೊಂದಿಗೂ ಜಗಳವಾಡಿ ಹುಚ್ಚಾಟ ಮೆರೆದಿದ್ದ. ಇದಾದ ಬಳಿಕ ಜೈಲು ಸೇರಿ ಮುದ್ದೆ ಮುರಿದಿದ್ದಾನೆ. ಸದ್ಯ ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿದ್ದು ಈಗ ಮತ್ತೆ ತನ್ನ ಪುಂಡಾಟ ಮುಂದುವರೆಸಿದ್ದಾನೆ. ಜೈಲಿನಿಂದ ಹೊರಬಂದ ಬಳಿಕ ಸಾಕು ತಂದೆಗೆ ಧಮ್ಕಿ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ವಾಂತಿ ಭೇದಿಯಿಂದ ಆಸ್ಪತ್ರೆ ಸೇರಿದ್ದ ಜ್ಯೂನಿಯರ್​ ಡ್ಯಾನ್ಸರ್, ಸಹಕಲಾವಿದೆ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಸೈಕೊ‌ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್ ಸಾಕು ತಂದೆ ಮಂಜುನಾಥ್ ತಮಗೆ ಮಕ್ಕಳಿಲ್ಲದ ಕಾರಣ ಬಾಲ್ಯದಲ್ಲೇ ಉತ್ತಮ್ ನನ್ನು ದತ್ತು ಪಡೆದಿದ್ದರು. ಆದ್ರೆ ಉತ್ತಮ್ ಒಳ್ಳೆಯ ಉತ್ತಮ ಮಗನಾಗಲಿಲ್ಲ. ಚಿಕ್ಕ ವಿಚಾರಕ್ಕೆ ಸಾಕು ತಾಯಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿ ಜೈಲು ಸೇರಿದ್ದ. ಬಳಿಕ ಜೈಲಿನಿಂದ ವಾಪಾಸಾಗಿ ತಂದೆ ಮಂಜುನಾಥ್​ರಿಗೂ ಬೆದರಿಕೆ ಹಾಕಿದ್ದ.

ಐದಾರು ಬಾಡಿಗೆ ಮನೆ ಮಂಜುನಾಥ್ ಅವರ ಹೆಸರಲ್ಲಿದೆ. ಹೀಗಾಗಿ ಅದರ ಬಾಡಿಗೆ ನನಗೆ ಬರಬೇಕು ಎಂದು ಉತ್ತಮ್ ಆವಾಜ್ ಹಾಕಿದ್ದ. ಬಾಡಿಗೆದಾರ ಮನೋಹರ್ ಪಾಂಡು ಲಮಾಣಿ ಮನೆಗೆ ತೆರಳಿ ಬಾಡಿಗೆ ನನಗೆ ಕೊಡಿ ಎಂದು ಬೆದರಿಕೆ ಹಾಕಿದ್ದ. ಕುತ್ತಿಗೆ ಮೇಲೆ ಲಾಂಗ್ ಇಟ್ಟು ಬಾಡಿಗೆ ನೀಡುವಂತೆ ಹೆದರಿಸಿದ್ದ. ಇದೆಲ್ಲಾ ಆದ ಬಳಿಕ ಈ ಬಗ್ಗೆ ವಿಷಯ ತಿಳಿದ ಪೊಲೀಸರು ಜನವರಿ 31 ರ ರಾತ್ರಿ 9.30ಕ್ಕೆ ಅಶ್ವತ್ಥ್ ನಗರದಲ್ಲಿ ಆರೋಪಿ ಉತ್ತಮ್​ನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಉತ್ತಮ್ ಲಾಂಗ್ ಹಿಡಿದು ಹೈಡ್ರಾಮ ಮಾಡಿದ್ದಾನೆ. ಯಾರಿಗೆ ಏನು ಮಾಡಿಬಿಡ್ತಾನೊ ಅನ್ನೋ‌ ಭಯದಲ್ಲಿದ್ದ ಸದಾಶಿವನಗರ ಪೊಲೀಸರು ಕೊನೆಗೂ ಆರ್ಮ್ ಆ್ಯಕ್ಟ್ ಅಡಿ ಉತ್ತಮ್​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:15 am, Sat, 4 February 23

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!