ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದಯ ರೋಗ ತಜ್ಞ ಡಾ. ಕೆ.ಕೆ ಅಗರ್ವಾಲ್​ ಕೊರೊನಾ ಸೋಂಕಿನಿಂದ ನಿಧನ

|

Updated on: May 18, 2021 | 10:30 AM

ಭಾರತೀಯ ವೈದ್ಯಕೀಯ ಸಂಘದ( ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಕೆ ಅಗರ್ವಾಲ್​ ನಿನ್ನೆ ರಾತ್ರಿ (ಸೋಮವಾರ) ವಿಧವಶರಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದಯ ರೋಗ ತಜ್ಞ ಡಾ. ಕೆ.ಕೆ ಅಗರ್ವಾಲ್​ ಕೊರೊನಾ ಸೋಂಕಿನಿಂದ ನಿಧನ
ಹೃದಯ ರೋಗ ತಜ್ಞ ಡಾ. ಕೆ.ಕೆ ಅಗರ್ವಾಲ್
Follow us on

ದೆಹಲಿ: ಭಾರತೀಯ ವೈದ್ಯಕೀಯ ಸಂಘದ( ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಕೆ ಅಗರ್ವಾಲ್​ ನಿನ್ನೆ ರಾತ್ರಿ (ಸೋಮವಾರ) ವಿಧವಶರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ್ದರಿಂದ ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹೃದಯರೋಗ ತಜ್ಞರಾಗಿದ್ದ ಡಾ.ಕೆ.ಕೆ ಅಗರ್ವಾಲ್​ ಅವರು ಹಾರ್ಟ್​ಕೇರ್​ ಫೌಂಡೇಷನ್​ ಆಫ್​ ಇಂಡಿಯಾದ ಮುಖ್ಯಸ್ಥರಾಗಿದ್ದರು. ಕೊರೊನಾ ವೃತ್ತಿಯಲ್ಲಿ ವೈದ್ಯರಾದ್ದರಿಂದ ಕೊರೊನಾ ಸಂದರ್ಭದಲ್ಲಿ ಜನರ ಹಿತ ಬಯಸುತ್ತ, ಜನರಿಗೆ ಜಾಗೃತಿ ಮೂಡುಸುವತ್ತ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಿಡಿಯೋ ಮಾಡುವ ಮೂಲಕ ಜನರಿಗೆ ಕೊರೊನಾ ಸೋಂಕಿನ ದುಷ್ಪರಿಣಾಮದ ಕುರಿತಾಗಿ ಅರಿವು ಮೂಡಿಸಿದ್ದರು.

ಕೆ.ಕೆ ಅಗರ್ವಾಲ್​ ಅವರಿಗೆ 62 ವರ್ಷ ವಯಸ್ಸಾಗಿತ್ತು. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2005ರಲ್ಲಿ ಡಾ. ಬಿಸಿ ರಾಯ್​ ಪ್ರಶಸ್ತಿ, 2010 ರಲ್ಲಿ ಪ್ರದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯಲ್ಲಿ ಪೂರ್ಣಗೊಳಿಸಿದ್ದು, ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್​ ಪದವಿ ಪಡೆದರು. ನಂತರ ವೈದ್ಯರಾಗಿ ತಮ್ಮ ವೃತ್ತಿಯನ್ನು ಮುಂದುವರೆಸುತ್ತಾ ಸಾರ್ವಜನಿಕ ಹಿತ ಬಯಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Published On - 10:22 am, Tue, 18 May 21