
ಭಾರತ – ಪಾಕಿಸ್ತಾನದ ನಡುವೆ ಯುದ್ಧ (India Pakistan War) ನಡೆದಾಗಲೆಲ್ಲ ಪಾಕ್ ಸೋಲುತ್ತ ಬಂದಿದೆ. ಪಾಕ್ ಯುದ್ಧದಲ್ಲಿ ನಿರ್ಣಯ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ANIಗೆ ನೀಡಿದ ಸಂದರ್ಶನಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧ ಬಗ್ಗೆ ಹೇಳಿದ್ದಾರೆ. 2001ರಲ್ಲಿ ಸಂಸತ್ತಿನ ದಾಳಿಯ ನಂತರ ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ದೊಡ್ಡ ಮಟ್ಟದ ಯುದ್ಧ ಮಾಡುವ ಸಾಧ್ಯತೆ ಇದೆ ಎಂದು ಅಂದುಕೊಂಡಿದ್ದೆವು, ಆದರೆ ಪಾಕಿಸ್ತಾನವು ಭಾರತದೊಂದಿಗಿನ ಯಾವುದೇ ಸಾಂಪ್ರದಾಯಿಕ ಯುದ್ಧವನ್ನು ಗೆಲ್ಲುತ್ತಿರಲಿಲ್ಲ, ಪಾಕ್ ತಕ್ಷಣವೇ ಕದನ ವಿರಾಮಕ್ಕೆ ಹೋಗುತ್ತಿತ್ತು ಎಂದು ಹೇಳಿದ್ದಾರೆ. 15 ವರ್ಷಗಳ ಕಾಲ CIA (Central Intelligence Agency) ಸೇವೆ ಸಲ್ಲಿಸಿದ್ದ ಜಾನ್ ಕಿರಿಯಾಕೌ, ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಿನ ಅಸಮಾಧಾನ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಬಗ್ಗೆ ಎಎನ್ಐಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದಾರೆ.
ಭಾರತದೊಂದಿಗಿನ ಯುದ್ಧದಿಂದ ಪಾಕಿಸ್ತಾನ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಜವಾದ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಪಾಕಿಸ್ತಾನ ನಿರಂತರವಾಗಿ ಭಾರತೀಯರನ್ನು ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. 2016ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಬಾಲಕೋಟ್ ದಾಳಿ ಹಾಗೂ ಪ್ರಸ್ತುತ ವರ್ಷ ಅಂದರೆ 2025ರಲ್ಲಿ ಭಾರತದ ಪಹಲ್ಗಾಮ್ಗೆ ದಾಳಿ ಮಾಡಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿ, ನಂತರ ಆಪರೇಷನ್ ಸಿಂಧೂರದ ಸೇರಿದಂತೆ ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಂದ ಭಾರತ ಹಿಂದೆ ಸರಿದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡಿದೆ ಎಂದು ಹೇಳಿದ್ದಾರೆ.
ಈ ಎಲ್ಲ ದಾಳಿಗಳಿಂದ ವಿಫಲವಾದ ನಂತರ ಪಾಕಿಸ್ತಾನ ಕೊನೆಗೆ ಕದನ ವಿರಾಮದ ದಾರಿಯಲ್ಲಿ ಸಾಗುತ್ತದೆ. ಭಾರತವನ್ನು ವಿರೋಧಿಸುವ ಹಾಗೂ ಅವರ ವಿರುದ್ಧ ಯುದ್ಧ ಮಾಡುವ ತಾಕತ್ತು ಪಾಕಿಸ್ತಾನಕ್ಕೆ ಇಲ್ಲ. ಭಾರತದಂತಹ ಮಿಲಿಟರಿ ಪವರ್ ಪಾಕಿಸ್ತಾನ ಹೊಂದಿಲ್ಲ. ಪಾಕಿಸ್ತಾನ ಪ್ರತಿ ಬಾರಿ ಭಾರತಕ್ಕೆ ಪರಮಾಣು ಬೆದರಿಕೆಯನ್ನು ಹಾಕಿಕೊಂಡು ಬಂದಿದೆ, ಆದರೆ ಭಾರತ ಈ ಬೆದರಿಕೆಗೆ ಯಾವತ್ತೂ ಭಯಪಟ್ಟಿಲ್ಲ, ಹಾಗೂ ಪಾಕ್ ಮಾತನ್ನು ಲೆಕ್ಕಕ್ಕೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನು 2001 ಸಂಸತ್ತಿನ ದಾಳಿಯ ನಂತರ, ಆಪರೇಷನ್ ಪರಾಕ್ರಮ್ ಮೂಲಕ ದೊಡ್ಡ ಯುದ್ಧವನ್ನು ಮಾಡಬಹುದು ಎಂದು ಅಂದುಕೊಂಡಿದ್ದೆವು, ಒಂದು ದೇಶದ ಸಂಸತ್ ಮೇಲೆ ಬೇರೆ ದೇಶದ ಭಯೋತ್ಪಾದಕರ ದಾಳಿ ಮಾಡಿರುವುದು ಸಾಮಾನ್ಯ ವಿಷಯವಲ್ಲ, ಇದು ದೊಡ್ಡ ಸಂಘರ್ಷಣೆಯನ್ನೇ ಉಂಟು ಮಾಡಬಹುದು ಎಂದು ಭಾವಿಸಿದ್ದೆವು, ಪಾಕಿಸ್ತಾನ, ಇಸ್ಲಾಮಾಬಾದ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿತ್ತು. ಪೆಂಟಗನ್ (ಅಮೆರಿಕಾದ ಸಂರಕ್ಷಣೆ ಇಲಾಖೆಯ ಕೇಂದ್ರ ಕಚೇರಿ) ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ನಿಯಂತ್ರಿಸುತ್ತದೆ. ಹಾಗೂ ಅಂದಿನ ಪಾಕ್ ಪ್ರಧಾನಿ ಮುಷರಫ್ ನಿಯಂತ್ರಣವನ್ನು ಅಮೆರಿಕಕ್ಕೆ ವಹಿಸಿದ್ದರು. ಆ ಸಮಯದಲ್ಲಿ ಸಿಐಎ ಅಲ್ ಖೈದಾ ಮತ್ತು ಅಫ್ಘಾನಿಸ್ತಾನದ ಸಹಾಯವನ್ನು ಪಡೆಯಬೇಕು ಎಂಬ ನಿಲುವುಗಳನ್ನು ಹೊಂದಿದ್ದರು, ಆದರೆ ಭಾರತ ಈ ಯಾವುದಕ್ಕೂ ಯೋಚನೆ ಮಾಡಿಲ್ಲ ಎಂದು ಜಾನ್ ಕಿರಿಯಾಕೌ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಪೊಲೀಸ್ ಎನ್ಕೌಂಟರ್, ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳ ಹತ್ಯೆ
ಪಾಕಿಸ್ತಾನದ ಪರಮಾಣು ಬಾಂಬ್ ವಿನ್ಯಾಸಗೊಳಿಸಿದ ಅಬ್ದುಲ್ ಖದೀರ್ ಖಾನ್ನ್ನು ಅಮೆರಿಕ ಕೊಲ್ಲಬಹುದಿತ್ತು. ಆದರೆ ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ಆತನನ್ನು ಜೀವಂತವಾಗಿ ಬಿಡಲಾಯಿತು. ನಾವು ಒಂದು ವೇಳೆ ಇಸ್ರೇಲ್ ಸಹಾಯ ಪಡೆದಿದ್ದರೆ ಅಂದು ಅಬ್ದುಲ್ ಖದೀರ್ ಖಾನ್ನ್ನು ಸುಲಭವಾಗಿ ಕೊಲ್ಲಬಹುದಿತ್ತು. ಆದರೆ ಅವನಿಗೆ ಸೌದಿ ಸರ್ಕಾರದ ಬೆಂಬಲವಿತ್ತು. ಸೌದಿಗಳು ನಮ್ಮ ಬಳಿಗೆ ಬಂದು, ‘ದಯವಿಟ್ಟು ಅವನನ್ನು ಬಿಟ್ಟುಬಿಡಿ. ನಮಗೆ ಎಕ್ಯೂ ಖಾನ್ ಇಷ್ಟ. ನಾವು ಎಕ್ಯೂ ಖಾನ್ ಜೊತೆ ಕೆಲಸ ಮಾಡುತ್ತಿದ್ದೇವೆ. ಅವನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿತ್ತು. ಆ ಕಾರಣಕ್ಕೆ ಅವನು ತಪ್ಪಿಸಿಕೊಂಡ ಎಂದು ಹೇಳಿದ್ದಾರೆ. ಈ ವಿಚಾರಗಳನ್ನು 2007ರಲ್ಲಿ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಲು ಬಯಸದ್ದೆ, ಆದರೆ ಈ ವಿಚಾರ ತಿಳಿದು ನನ್ನನ್ನು 23 ತಿಂಗಳು ಜೈಲಿನಲ್ಲಿ ಇಟ್ಟಿದ್ದರು. ಈ ಬಗ್ಗೆ ಹೇಳಲುಯಾವುದೇ ವಿಷಾದವಿಲ್ಲ, ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sat, 25 October 25