ಚಂಡೀಗಢ: ಅತಿ ವೇಗದ ವಾಹನ ಚಾಲನೆ ಅಥವಾ ಮದ್ಯ (alcohol), ಮಾದಕ ವಸ್ತು ಸೇವನೆಯ ಅಮಲಿನಿಂದ ವಾಹನ ಚಲಾಯಿಸಿದ್ದರೆ ಪಂಜಾಬ್ನಲ್ಲಿ (Punjab) ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ (Blood Donation) ಕಡ್ಡಾಯವಾಗಿ ಮಾಡಲೇಬೇಕು. ಪಂಜಾಬ್ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ವಾಹನಗಳ ಅತಿ ವೇಗದ ಚಾಲನೆಗೆ ದಂಡ ಕಟ್ಟುವುದು, ಲೈಸನ್ಸ್ ತಾತ್ಕಾಲಿಕ ರದ್ದತಿ ಜತೆಗೆ ಕಡ್ಡಾಯ ರಕ್ತದಾನವನ್ನೂ ಸೇರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ. ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡರೆ ₹ 1,000 ದಂಡ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದ್ದು ₹ 5,000 ದಂಡ ವಿಧಿಸಲಾಗುತ್ತದೆ.
ಮತ್ತೊಮ್ಮೆ ತಪ್ಪೆಸಗಿದರೆ ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ ಜತೆಗೆ ₹ 2,000 ದಂಡ ಕಟ್ಟಬೇಕು. ಮದ್ಯ ಸೇವಿಸಿ ವಾಹನ ಜಲಾಯಿಸುತ್ತಿದ್ದರೆ ಲೈಸನ್ಸ್ ರದ್ದು ಜತೆ ₹ 10,000 ರೂ ಪಾವತಿ ಮಾಡಬೇಕಾಗುತ್ತದೆ.
ತಪ್ಪಿತಸ್ಥರು ಟ್ರಾನ್ಸ್ ಪೋರ್ಟ್ ಅಥಾರಿಟಿಯಲ್ಲಿ ರಿಫ್ರೆಶರ್ ಕೋರ್ಸ್ ಮಾಡಿ ಆಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ 2 ಗಂಟೆ ಬೋಧನೆ ಮಾಡಬೇಕು. ದಂಡ ಪಾವತಿ ಹೊತ್ತಲ್ಲಿ ಈ ಬೋಧನೆಗಾಗಿ ನೋಡಲ್ ಆಫೀಸರ್ ಪ್ರಮಾಣ ಪತ್ರವೊಂದನ್ನು ನೀಡುತ್ತಾರೆ. ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಹತ್ತಿದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ಅಥವಾ ಹತ್ತಿರದ ಬ್ಲಡ್ ಬ್ಯಾಂಕ್ ಗೆ ಒಂದು ಯೂನಿಟ್ ರಕ್ತದಾನ ಮಾಡಬೇಕು
Published On - 6:00 pm, Sun, 17 July 22