ಮಹಾರಾಷ್ಟ್ರದ ಶಾಸಕರ ಅನರ್ಹತೆ ವಿಚಾರ; ಜುಲೈ 20ರಲ್ಲಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ವಿಪ್ ಪಾಲಿಸದೇ ಇರುವ 53 ಶಾಸಕರಿಗೆ ಶಾಸಕಾಂಗ ಕಾರ್ಯದರ್ಶಿ ರಾಜೇಂಜ್ರ ಭಾಗ್ವತ್ ಶೋಕಾಸ್ ನೋಟಿಸ್ ನೀಡಿದ ನಂತರ ಶಿವಸೇನಾ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್..
ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು (Maharashtra political crisis) ಬಗ್ಗೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಜುಲೈ 20ಕ್ಕೆ ನಡೆಸಲಿದೆ. ಸಿಜೆಐ ಎನ್ವಿ ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde) ಬಣ ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಪ್ ಪಾಲಿಸದೇ ಇರುವ 53 ಶಾಸಕರಿಗೆ ಶಾಸಕಾಂಗ ಕಾರ್ಯದರ್ಶಿ ರಾಜೇಂಜ್ರ ಭಾಗ್ವತ್ ಶೋಕಾಸ್ ನೋಟಿಸ್ ನೀಡಿದ ನಂತರ ಶಿವಸೇನಾ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಕಳೆದ ಸೋಮವಾರ ಮಹಾರಾಷ್ಟ್ರದ ಅಸೆಂಬ್ಲಿ ಸ್ಪೀಕರ್ ಗೆ ಹೇಳಿತ್ತು. ಶೋಕಾಸ್ ನೋಟಿಸ್ ಗಳಲ್ಲಿ 40 ಶೋಕೇಸ್ ನೋಟಿಸ್ ಶಿಂಧೆ ಬಣದ ಶಾಸಕರಿಗೆ ನೀಡಲಾಗಿದ್ದು 13 ಶೋಕಾಸ್ ನೋಟಿಸ್ ಗಳನ್ನ ಠಾಕ್ರೆ ಬಣದ ಶಾಸಕರಿಗೆ ನೀಡಲಾಗಿದೆ. ಈ ಎರಡೂ ಗುಂಪುಗಳು ಪರಸ್ಪರ ಗುಂಪಿನ ಶಾಸಕರ ಅನರ್ಹತೆಗೆ ಒತ್ತಾಯಿಸಿವೆ.
ಇದಕ್ಕಿಂತ ಮೊದಲು ಶಿವಸೇನಾ ಸಂಸದ ಸಂಜಯ್ ರಾವುತ್, ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂ ತೀರ್ಪು ನೀಡುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬೇಕು ಎಂದು ಒತ್ತಾಯಿಸಿದ್ದರು.
Published On - 7:36 pm, Sun, 17 July 22