ತಿರುಮಲ, ಅಕ್ಟೋಬರ್ 18: ದೇಶಿ ಹಸುವಿನ ತಳಿಗಳ ಅಭಿವೃದ್ಧಿಯಲ್ಲಿ ಟಿಟಿಡಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ನಾಟಿ ಹಸುನಗಳ ಜೆನೆಟಿಕ್ ದಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಟಿಟಿಡಿ ಜಂಟಿಯಾಗಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಗೋಸಂರಕ್ಷಣಾ ಶಾಲೆಯಲ್ಲಿ (Sri Venkateswara Gosamrakshana Shala) ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುತ್ತಿದೆ. ಈ ನಿಟ್ಟಿನಲ್ಲಿ ತಿರುಮಲದಲ್ಲಿ ಟಿಟಿಡಿ ಇಒ ಧರ್ಮರೆಡ್ಡಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ನಿನ್ನೆ ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಟಿಟಿಡಿ ಇಒ ಎ.ವಿ. ಧರ್ಮರೆಡ್ಡಿ ( TTD Executive Officer A V Dharma Reddy), ಶ್ರೀಜಾ ಮಹಿಳಾ ಹಾಲು ಉತ್ಪಾದಕರ ಅಧ್ಯಕ್ಷೆ ಶ್ರೀದೇವಿ, ಎನ್‌ಡಿಡಿಬಿ ( National Dairy Development Board -NDDB) ಎಂಡಿ ಡಾ. ದೇವಾನಂದ್ ಅವರು ಟಿಟಿಡಿ ಜೆಇಒ ಸದಾ ಭಾರ್ಗವಿ, ಎಫ್‌ಎ ಮತ್ತು ಸಿಎಒ ಬಾಲಾಜಿ ಅವರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಟಿಟಿಡಿ ಇಒ ಶ್ರೀ ಎ.ವಿ.ಧರ್ಮ ರೆಡ್ಡಿ ಮಾತನಾಡಿ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆ ಮೂಲಕ ರೂ. 4614.50 ಲಕ್ಷ ಕಾರ್ಪಸ್ ಫಂಡ್ ಮಂಜೂರಾಗಿದೆ. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನದಲ್ಲಿ ದೇಶೀಯ ಹಸುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಟಿಟಿಡಿ 60 ರಿಂದ 100 ಕೆಜಿ ತುಪ್ಪ ಮತ್ತು ನಾಟಿ ತಳಿಗಳಿಂದ ಮೂರು ಸಾವಿರ ಲೀಟರ್ ಹಾಲು ಉತ್ಪಾದಿಸುವ ಎಲ್ಲಾ ಸೇವೆಗಳಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ಈ ಬಾರಿ 2 ಬಾರಿ! ಯಾವ ದಿನ, ಹೇಗೆ ದರ್ಶನ ವಿವರ ಇಲ್ಲಿದೆ
ಜೀನ್ ವರ್ಗಾವಣೆ ಪ್ರಕ್ರಿಯೆಯನ್ನು ವೇಗಗೊಳಿಸಲು ಕೃತಕ ಗರ್ಭಧಾರಣೆ ಮತ್ತು ಭ್ರೂಣ ವರ್ಗಾವಣೆಯಂತಹ ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಮೇಲೆ ಕೇಂದ್ರವು (centre is to promote a genetic breed of animal) ಗಮನ ಹರಿಸಲಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ಡೈರಿ ಸೇವೆಗಳು ಮತ್ತು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಎನ್‌ಡಿಡಿಬಿ ಬಿಡುಗಡೆ ಮಾಡಿದ ಹಣದ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಧರ್ಮಾ ರೆಡ್ಡಿ ಹೇಳಿದರು. ಟಿಟಿಡಿಯ ಎಸ್ ವಿ ಗೋಸಂರಕ್ಷಣಾ ಸಭಾಂಗಣದಲ್ಲಿ ಈಗಾಗಲೇ ದೇಸಿ ಹಸುಗಳ ಸಂವರ್ಧನೆ ಮತ್ತು ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ